ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ

ಏನಿದು ಡಿಜಿಲಾಕರ್ ಆ್ಯಪ್?

Team Udayavani, May 7, 2021, 6:00 PM IST

DigiLocker is a key initiative under Digital India, the Government of India’s flagship program aimed at transforming India into a digitally empowered society

*ಡಿಜಿಲಾಕರ್ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮದಡಿ ಒಂದು ಪ್ರಮುಖ ಉಪಕ್ರಮವಾಗಿದೆ.

*ಎಲ್ಲಾ ದಾಖಲೆಗಳ ಡಿಜಿಟಲ್ ಪ್ರತಿಯನ್ನು ರಚಿಸಲು ಇದು ಸಹಕಾರಿಯಾಗಿದೆ

*ಬಳಕೆದಾರರು ವಿಮೆ, ವೈದ್ಯಕೀಯ ವರದಿಗಳು, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಮದುವೆ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.

 

ಎಂದಾದರು ವಾಹನ ಚಾಲನೆ ಮಾಡುವಾಗ, ನಿಮ್ಮಲ್ಲಿ ಎಲ್ಲಾ ದಾಖಲೆಗಳಿದ್ದರೂ, ಅದನ್ನು ಮನೆಯಲ್ಲಿ ಬಿಟ್ಟು ಬಂದಿರುವ ಕಾರಣಕ್ಕೆ ಪೊಲೀಸರಿಗೆ ದಂಡ ಕಟ್ಟಿದ್ದೀರಾ ? ಎಲ್ಲೋ ದೂರದ ಊರಿಗೆ ಹೋಗಿರುವಾಗ, ನಿಮ್ಮ ಯಾವುದೋ ದಾಖಲೆಪತ್ರ ತತ್‌ ಕ್ಷಣದಲ್ಲಿ ಬೇಕಾಗಿದ್ದರೂ, ಅದನ್ನು ನಿಮ್ಮ ಮನೆಯಲ್ಲೇ ಬಿಟ್ಟಿರುವ ಕಾರಣಕ್ಕೆ, ಆ ಕ್ಷಣ ಅದಿಲ್ಲದೆ ಕಷ್ಟಪಟ್ಟಿದ್ದೀರಾ ? ಹಾಗಾದರೆ, ಈಗ ಅದಕ್ಕೆಲ್ಲಾ ಪರಿಹಾರ ಬಂದಿದೆ. ನಿಮ್ಮ ಸ್ಮಾರ್ಟ್ ಫೋನ್ ನನ್ನು ಸ್ಮಾರ್ಟ್ ಆಗಿ ಬಳಸಲು ನಿಮಗೆ ಗೊತ್ತಿರಬೇಕು ಅಷ್ಟೆ.

ಇಡೀ ಜಗತ್ತು ಡಿಜಿಟಲ್ ಆಗುತ್ತಿದೆ. ಆನ್ಲೈನ್ ಮೂಲಕ ಏನನ್ನೂ ಮಾಡಲು ಸಾಧ್ಯ ಎಂದು ದಿನೇ ದಿನೇ ಸಾಬಿತಾಗುತ್ತಿದೆ. ತಿಂಗಳಿಗೆ 1 ಜಿಬಿ ಡೇಟಾ ಬಳಸುತ್ತಿದ್ದ ಹಲವರಿಗೆ ಇಂದು ದಿನಕ್ಕೆ 1 ಜಿಬಿ ಡೇಟಾ ಸಾಲುತ್ತಿಲ್ಲ. ಜಾಹೀರಾತುಗಳು, ಚಲನಚಿತ್ರಗಳು, ಸಭೆ-ಸಮಾರಂಭಗಳು, ಇನ್ನಿತರ ಈವೆಂಟ್‌ ಗಳಿಂದ ಹಿಡಿದು ಎಲ್ಲವನ್ನೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಅಷ್ಟೇ ಅಲ್ಲದೆ, 2020-21 ನೇ ಸಾಲಿನ ಬಜೆಟ್‌ ನನ್ನು ವಿತ್ತ ಸಚಿವರು ಟ್ಯಾಬ್ಲೆಟ್‌ನಲ್ಲಿ ಪ್ರಸ್ತುತಪಡಿಸಿದ್ದರು. ಅನೇಕ ದೇಶಗಳಂತೆ ಈಗ ಭಾರತವೂ ಡಿಜಿಟಲ್ ಮಾರ್ಗವನ್ನು ಅನುಸರಿಸುತ್ತಿದೆ.

ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ, ಭಾರತ ಸರ್ಕಾರವು ಅನೇಕ ಸೇವೆಗಳನ್ನು ಆನ್ಲೈನ್ ನಲ್ಲೂ ಬಿಡುಗಡೆ ಮಾಡಿದೆ. ಅವುಗಳಲ್ಲಿ ಒಂದು ಡಿಜಿಲಾಕರ್ ಅಪ್ಲಿಕೇಶನ್. ಈ ಆ್ಯಪ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏನಿದು ಡಿಜಿಲಾಕರ್ ಆ್ಯಪ್ ?

ಭಾರತದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಜಿಲಾಕರ್ ಅಪ್ಲಿಕೇಶನ್ ಭಾರತೀಯ ಆನ್ಲೈನ್ ಸೇವೆಯನ್ನು ಬಿಡುಗಡೆ ಮಾಡಿತ್ತು. ಇದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಬಳಕೆದಾರರಿಗೆ ತಮ್ಮ ಎಲ್ಲಾ ದಾಖಲೆಪತ್ರಗಳನ್ನು (ಡಾಕ್ಯುಮೆಂಟ್ಸ್) ಸಂರಕ್ಷಿಸಿಡಲು ಕ್ಲೌಡ್ ಖಾತೆಯನ್ನು ಒದಗಿಸುತ್ತದೆ. ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಶಾಲೆ- ಕಾಲೇಜುಗಳ ಅಂಕಪಟ್ಟಿ ಮತ್ತು ಹೆಚ್ಚಿನದನ್ನು ಡಿಜಿಟಲ್ ಮಾದರಿಯಲ್ಲಿ ಸೇವ್ ಮಾಡಲು ಅಥವಾ ಸಂರಕ್ಷಿಸಿ ಇಡಲು ಈ ಕ್ಲೌಡ್ ಖಾತೆಯನ್ನು ಬಳಸಬಹುದು. ಈ ಅಪ್ಲಿಕೇಶನ್‌ ನಲ್ಲಿ ಎಲ್ಲಾ ರೀತಿಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಲು ಪ್ರತಿಯೊಬ್ಬ ಖಾತೆದಾರರಿಗೆ 1 ಜಿಬಿ ಕ್ಲೌಡ್ ಸ್ಟೋರೇಜ್ ಲಭ್ಯವಿರುತ್ತದೆ.

ಈ ಆ್ಯಪ್ ನ ಬೀಟಾ ಆವೃತ್ತಿಯನ್ನು ದೇಶದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಜುಲೈನಲ್ಲಿ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಬಳಕೆದಾರರಿಗೆ ಕೇವಲ 100 ಎಂಬಿ ಸ್ಟೋರೇಜ್ ಅವಕಾಶ ಲಭ್ಯವಿತ್ತು. ಇದೀಗ ಅದನ್ನು 1 ಜಿಬಿಗೆ ಹೆಚ್ಚಿಸಲಾಗಿದೆ.

ಪ್ರತ್ಯೇಕ ದಾಖಲೆಯ ಫೈಲ್ ಗಾತ್ರವು 10 ಎಂಬಿಗಿಂತಲೂ ಅಧಿಕವಾಗಿರಬಾರದು.

ಕೇವಲ ಆಧಾರ್ ಕಾರ್ಡ್ ನನ್ನು ಸೇವ್ ಮಾಡಿಡುವ ಅಪ್ಲಿಕೇಶನ್ ಆಗಿ ಆರಂಭವಾದ ಡಿಜಿಲಾಕರ್, ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಸೇರಿಸಿತು. ಪ್ರಸ್ತುತ ಈ ಆ್ಯಪ್‌ ನಲ್ಲಿ ಬ್ಯಾಂಕ್ ದಾಖಲೆಗಳು, ವೈದ್ಯಕೀಯ ದಾಖಲೆಗಳು ಇನ್ನಿತರ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಡಿಜಿಲಾಕರ್ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದು, ಕೋಟ್ಯಾನುಗಟ್ಟಲೆ ದಾಖಲೆಗಳು ಇದರಲ್ಲಿ ಸಂಗ್ರಹವಾಗಿದೆ.

ಡಿಜಿಲಾಕರ್ ಅಪ್ಲಿಕೇಶನ್ ನನ್ನು ಹೇಗೆ ಬಳಸುವುದು?

ಡಿಜಿಲಾಕರ್ ಬಳಸಲು ಆಧಾರ್ ಸಂಖ್ಯೆಯನ್ನು ಬೇಕಾಗುತ್ತದೆ. ಬಳಕೆದಾರರಾಗಲು, ಮೊದಲಿಗೆ ಡಿಜಿಲಾಕರ್ ಅಪ್ಲಿಕೇಶನ್ ನನ್ನು ಆಂಡ್ರಾಯ್ಡ್ ಪ್ಲೇಸ್ಟೋರ್‌ ನಿಂದ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಡೌನ್‌ ಲೋಡ್ ಮಾಡಬಹುದಾಗಿದೆ. ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸಿಸ್ಟಮ್‌ ಗಳಲ್ಲಿ ಡಿಜಿಲಾಕರ್ ವೆಬ್‌ ಸೈಟ್‌ ಗೆ ಭೇಟಿ ನೀಡಿ, ಅಪ್ಲಿಕೇಶನ್ ಡೌನ್‌ ಲೋಡ್ ಮಾಡಬಹುದು.

ಬಳಿಕ, ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ, ಅಪ್ಲಿಕೇಶನ್‌ ಗೆ ಸೈನ್ ಅಪ್ ಆಗಬೇಕು. ಆಗ ಆ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದರೆ, ನೀವು ಸೈನ್ ಇನ್ ಆಗುತ್ತೀರಿ. ಅಲ್ಲಿ ನೀವು, ನಿಮಗೆ ಬೇಕಾದ ಯೂಸರ್ ನೇಮ್ ಸಹ ಹಾಕಬಹುದು.

ಸೈನ್-ಇನ್ ಆದ ಬಳಿಕ, ಯಾವುದೇ ಪ್ರಮಾಣಪತ್ರ, ಇನ್ನಿತರ ಕಾರ್ಡ್ಗಳನ್ನು ವಿತರಿಸುವ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳಿಂದ ತಮ್ಮ ಇ-ಡಾಕ್ಯುಮೆಂಟ್‌ಗಳನ್ನು ಪಡೆಯಬಹುದು. ಅದಲ್ಲದೆ, ಬಳಕೆದಾರರು ಇನ್ನಿತರ ಖಾಸಗೀ ದಾಖಲೆಗಳನ್ನು ಅಪ್‌ಲೋಡ್ ಮಾಡಲೂ ಅವಕಾಶವಿದೆ. ಬಳಕೆದಾರರು ಈ ಯಾವುದೇ ದಾಖಲೆಗಳನ್ನು, ಇತರರೊಂದಿಗೆ ಹಂಚಿಕೊಳ್ಳಬೇಕಾದರೆ, ತಮ್ಮ ಡಾಕ್ಯುಮೆಂಟ್ ಪಕ್ಕದಲ್ಲಿ ಇರುವ ಆಯ್ಕೆಯನ್ನು ಬಳಸಿ, ಆಗ ಸಿಗುವ ಲಿಂಕ್ ಮೂಲಕ ದಾಖಲೆಯನ್ನು ಇತರರಿಗೆ ಕಳುಹಿಸಬಹುದು.

ಆ್ಯಪ್ ಜೊತೆ ನೋಂದಾಯಿಸಿಕೊಂಡಿರುವ ಯಾವುದೇ ಸಂಸ್ಥೆಯ ಪ್ರಮಾಣಪತ್ರ/ ಅಂಕಪಟ್ಟಿ/ಇನ್ನಿತರ ಕಾರ್ಡ್ ಗಳು ಸ್ವಯಂಚಾಲಿತವಾಗಿ ಡಿಜಿಲಾಕರ್‌ ಗೆ ವರ್ಗಾಯಿಸಲಾಗುತ್ತದೆ.

ಡಿಜಿಲಾಕರ್ ಎಷ್ಟು ಮಂದಿ ಬಳಕೆದಾರರನ್ನು ಹೊಂದಿದೆ?

ಮಾರ್ಚ್ 15 ರ ಹೊತ್ತಿಗೆ, 5.86 ಕೋಟಿಗೂ ಹೆಚ್ಚಿನ ಜನರು ಡಿಜಿಲಾಕರ್ ಖಾತೆಯನ್ನು ಹೊಂದಿದ್ದಾರೆ. 400 ಕೋಟಿಗೂ ಅಧಿಕ ಅಧಿಕೃತ ಇ-ಡಾಕ್ಯುಮೆಂಟ್‌ ಗಳನ್ನು ನೀಡಲಾಗಿದೆ. ಒಟ್ಟು 491 ಸಂಸ್ಥೆಗಳ ಡಾಕ್ಯುಮೆಂಟ್‌ ಗಳನ್ನು ಡಿಜಿಲಾಕರ್‌ ನಲ್ಲಿ ಪಡೆಯಬಹುದಾಗಿದೆ.

ಡಿಜಿಲಾಕರ್ ಎಷ್ಟು ಸುರಕ್ಷಿತ?

ಡಿಜಿಲಾಕರ್ ಪ್ಲಾಟ್‌ ಫಾರ್ಮ್ ಸಂಪೂರ್ಣ ಪ್ರಮಾಣಿತ ಭದ್ರತಾ ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ ಅಭಿವೃದ್ಧಿಪಡಿಸಿದ ಸಂಸ್ಥೆಯು ಹೇಳಿಕೊಂಡಿದೆ. ಪ್ಲಾಟ್‌ ಫಾರ್ಮ್ ನ ಪ್ರಕಾರ, ತಮ್ಮ ಸರ್ವರ್‌ ಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೊದಲು, ಅದರ ಸುರಕ್ಷತೆ ಮತ್ತು ಏನಾದರೂ ದೋಷಗಳ ಬಗ್ಗೆ ಪರಿಶೀಲಿಸಿ, ಪರೀಕ್ಷಿಸಲಾಗುತ್ತದೆ. ಆ್ಯಪ್‌ ನಲ್ಲಿ ನೋಂದಾಯಿಸಿಕೊಳ್ಳುವ ಬಳಕೆದಾರರನ್ನು ದೃಢೀಕರಿಸಲು, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಯನ್ನು ಕಳುಹಿಸಲಾಗುತ್ತದೆ.

ಅದಲ್ಲದೆ, ಡಿಜಿಲಾಕರ್ ಅಪ್ಲಿಕೇಶನ್‌ ನನ್ನು ಮಾನ್ಯತೆ ಪಡೆದ ಲೆಕ್ಕಪರಿಶೋಧಕ ಏಜೆನ್ಸಿಗಳು ಆಡಿಟ್ ಮಾಡುತ್ತವೆ ಮತ್ತು ಸೆಕ್ಯುರಿಟಿ ಆಡಿಟ್ ಪ್ರಮಾಣಪತ್ರವನ್ನು ಆ್ಯಪ್ ನಿಯಮಿತವಾಗಿ ಪಡೆಯುತ್ತಿರುತ್ತದೆ.

ಸ್ಮಾರ್ಟ್ ಫೋನ್ ಒಂದು ಕೈಯಲ್ಲಿದ್ದರೆ, ಎಲ್ಲವೂ ನಮ್ಮ ಕೈಯಲ್ಲಿದ್ದಂತೆ. ಈಗಾಗಲೇ, ಸರ್ಕಾರವೂ ಸಹ ಡಿಜಿಲಾಕರ್ ಮೂಲಕ ಹಂಚಿಕೊಳ್ಳುವ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸುವಂತೆ ಕೇಳಿಕೊಂಡಿದೆ. ಶಾಲೆ-ಕಾಲೇಜುಗಳ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಇನ್ನಿತರ ಪ್ರಮುಖ ದಾಖಲೆಗಳೆಲ್ಲವೂ ಒಂದೇ ಸೂರಿನಡಿ ಸಿಗುವಾಗ, ನಾವು ಹೊದಲ್ಲೆಲ್ಲಾ ಹತ್ತಾರು ದಾಖಲೆಪತ್ರಗಳನ್ನು ಎತ್ತಿಕೊಂಡು ಹೋಗಲು ಯಾರು ಬಯಸುತ್ತಾರೆ? ಅಂತಹ ಎಲ್ಲಾ ದಾಖಲೆಗಳನ್ನು ನಿಮ್ಮ ಮನೆಯೊಳಗೆ ಸುರಕ್ಷಿತವಾಗಿ ಇರಿಸಿ ಮತ್ತು ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಬಳಸಿ ಅವುಗಳ ಇ-ಪ್ರತಿಗಳನ್ನು ಪಡೆದು, ಎಲ್ಲಿ ಬೇಕಾದರೂ ಬಳಸಿ.

-ಇಂದುಧರ ಹಳೆಯಂಗಡಿ

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.