ಭೂಮಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡುತ್ತದೆ “ದಿಶಾಂಕ್ ಆ್ಯಪ್”..!
Team Udayavani, Mar 2, 2021, 6:43 PM IST
ಭೂಮಿಯ ನಕ್ಷೆಯ ವೆರಿಫಿಕೇಶನ್ ನಲ್ಲಿ ನಿಮಗೆ ಮೋಸ ಮಾಡಲು ಭೂಕಳ್ಳರು ಹೋದಲ್ಲೆಲ್ಲಾ ಇದ್ದಾರೆ. ಒಂದು ಸೈಟ್ ಖರೀದಿಸಬೇಕಾದರೆ, ಅದನ್ನು ಸಾಕಷ್ಟು ಕಡೆಯಂದ ವೆರಿಫೈ ಮಾಡಬೇಕಾಗುತ್ತದೆ. ಸಾಲ ಮಾಡಿ ಭೂಮಿ ಖರೀದಿಸುವಾಗ ಎಷ್ಟೋ ಮಂದಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೋಸ ಹೊಗಿ ಬಿಡುತ್ತಾರೆ. ಇನ್ಮುಂದೆ ಈ ಸನ್ನಿವೇಶ ಬರಲಿ ಸಾಧ್ಯವೇ ಇಲ್ಲ. ಭೂಕಳ್ಳರ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಹೌದು ಭೂಮಿ ವೆರಿಫಿಕೇಶನ್ ಗಾಗಿಯೇ ರಾಜ್ಯ ಸರ್ಕಾರ ಹೊರತಂದಿದೆ `ದಿಶಾಂಕ್ ಆ್ಯಪ್’.
ಸರಳವಾಗಿ ಹೇಳಬೇಕೆಂದರೆ ಇದು ಭೂನಕ್ಷೆ ತಿಳಿಸುವ ಸರ್ಕಾರಿ ಸ್ವಾಮ್ಯದ ಆ್ಯಪ್ ಇದಾಗಿದ್ದು, ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶವಾಗಿದೆ. ಇದು ರಾಜ್ಯದ 30 ಜಿಲ್ಲೆಗಳ ಪ್ರತಿಭೂಭಾಗದ ಮಾಹಿತಿ, ಸರ್ವೆ ನಂಬರ್ ಒಳಗೊಂಡಿದೆ.
ಇದು ಫ್ರೀ ಅಪ್ಲಿಕೇಶನ್ ಆಗಿದ್ದು, ( ಮೊಬೈಲ್ ಫೋ ನಿನಲ್ಲಿ ಲೋಕೇಶನ್ ವಿವರ ಕೊಟ್ಟು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ದಿಶಾಂಕ್ ಆ್ಯಪ್ ಯಾವುದಕ್ಕೆ ಸಹಕಾರಿ..?
*ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ನ್ನು ಪಡೆಯಲು ಸಹಕಾರಿಯಾಗಿದೆ.
* ಆಸ್ತಿಯ ಭೂಭಾಗದ ಸಂಪೂರ್ಣ ವಿವರ ನೀಡುತ್ತದೆ. ಕೆರೆಕುಂಟೆ, ಸುತ್ತಲಿನ ಪ್ರದೇಶ, ಅಸುಪಾಸಿನ ಆಸ್ತಿಯ ವಿವರ ನೀಡುತ್ತದೆ.
* ಭೂಮಿ ಒತ್ತುವರಿಯಾಗಿದ್ದರೆ ಸುಲಭವಾಗಿ ಈ ಅಪ್ಲಿಕೇಶನ್ ಮೂಲಕ ಪತ್ತೆ ಮಾಡಬಹುದಾಗಿದೆ.
* ಈ ಅಪ್ಲಿಕೇಶನ್ ನ ಸಹಾಯದಿಂದ ಭೂಮಿಯ ಸರ್ವೇ ನಂಬರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
*ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅತಿ ಉಪಯುಕ್ತ ಆ್ಯಪ್ ಇದು.
* 30 ಜಿಲ್ಲೆಗಳ ಸುಮಾರು 70 ಲಕ್ಷ ಸರ್ವೆ ನಂಬರ್ ಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ವಿವರಗಳು ಇದರಲ್ಲಿವೆ .
* ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆ್ಯಪ್ ಬಹಳ ಉಪಯುಕ್ತ ಮಾಹಿತಿ ನೀಡಲಿದೆ.
* ಗ್ರಾಮದ ವಿಲೇಜ್ ಮ್ಯಾಪ್ ಇದರಲ್ಲಿ ಸೂಪರ್ ಇಂಪೋಸ್ ಆಗಿರತ್ತದೆ. ನೀವು ನಿಂತಿರುವ ಜಾಗದ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯವಿರುತ್ತದೆ. ಸರ್ವೇ ನಂಬರ್ ಸಹಿತ ಭೂಮಿಯ ಬಗ್ಗೆ ಎಲ್ಲಾ ಮಾಹಿತಿ ಸಿಗುತ್ತದೆ.
* ಆ ಸರ್ವೆ ನಂಬರ್ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ.
* ಕೊಟ್ಟಿರುವ ಸರ್ವೆ ನಂಬರಿನಲ್ಲಿ ಸರ್ಕಾರದ ಯಾವುದಾದರೂ ಆಸ್ತಿಗಳಿವೆಯಾ..? ಎನ್ನುವ ಮಾಹಿತಿ ಕೂಡಾ ಈ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ.
* ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆ್ಯಪ್ ಆನ್ ಮಾಡಿ. ಅಲ್ಲೇ ನಿಮಗೆ ಆ ಜಾಗದ ಸಮಸ್ತ ಮಾಹಿತಿ ಸಿಗುತ್ತದೆ.
ಭೂಮಿಯ ಬಗ್ಗೆ ಇಷ್ಟೆಲ್ಲಾ ಸಂಪೂರ್ಣ ಮಾಹಿತಿ ನೀಡುವ ಈ ಅಪ್ಲಿಕೇಶನ್ ನಮಗೆ ಸರ್ಕಾರದಿಂದ ಲಭ್ಯವಾಗುತ್ತಿರುವಾಗ ನಾವು ಇನ್ಮುಂದೆ ಭೂಮಿಯ ವಿಚಾರದಲ್ಲಿ ಮೋಸ ಹೋಗುವುದಕ್ಕೆ ಸಾಧ್ಯವಿಲ್ಲ ಎನ್ನುವುದರಲ್ಲಿ ಸಂಶಯ ಬೇಕಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.