ನೀವೇ ಮಾಡಿ ಬೈಕ್‌ ಸರ್ವೀಸ್‌

ಬೈಕ್‌ ಸರ್ವೀಸ್‌ ಮಾಡೋದು ತುಂಬಾ ಸುಲಭ !

Team Udayavani, May 12, 2020, 7:55 AM IST

bike-service

ವಾಹನಗಳು, ತಾಂತ್ರಿಕ ಸಲಕರಣೆಗಳ ನಿರ್ವಹಣೆಗಳನ್ನು ನಾವೇ ಮಾಡಬಹುದು. ವಿದೇಶಗಳಲ್ಲಿ ಇದಕ್ಕೆ ಪ್ರತ್ಯೇಕವಾಗಿ ಪರಿಣತರನ್ನು ಕರೆಸುವ ಸಂಪ್ರದಾಯವಿಲ್ಲ. ಭಾರತದಲ್ಲೂ ಇದೀಗ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನಗಳ ನಿರ್ವಹಣೆ “ಡು ಇಟ್‌ ಯುವರ್‌ಸೆಲ್ಫ್’ ಸದ್ದು ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ ಬೈಕ್‌ ಯೂಸರ್‌ ಮ್ಯಾನುವಲ್‌ ನೋಡಬಹುದು. ಈ ಹಿನ್ನೆಲೆಯಲ್ಲಿ ಬೈಕ್‌ ನಿರ್ವಹಣೆಯನ್ನು ಹೇಗೆ ಮಾಡಬಹುದು ನೋಡೋಣ ಬನ್ನಿ.

ಆಯಿಲ್‌ ಬದಲಾವಣೆ
ಆಯಿಲ್‌ ಬದಲಾವಣೆ ಅತ್ಯಂತ ಸುಲಭ. ಎಂಜಿನ್‌ ಕೆಳಭಾಗದಲ್ಲಿ ಒಂದು ಟ್ರೇ ಇಟ್ಟು ಎಂಜಿನ್‌ ಆಯಿಲ್‌ ತೆಗೆಯುವ ಬೋಲ್ಟ್ ಅನ್ನು ತೆಗೆಯಿರಿ. ಎಂಜಿನ್‌ನಲ್ಲಿ ಆಯಿಲ್‌ ಫಿಲ್ಟರ್‌ ಇದ್ದರೆ ಅದನ್ನೂ ತೆಗೆದು ಹೊಸತನ್ನು ಹಾಕಿ. ಎಂಜಿನ್‌ ಆಯಿಲ್‌ ಸಂಪೂರ್ಣ ಹೊರಬರಲು ಸುಮಾರು 15 ನಿಮಿಷ ಕಾದು ಬಳಿಕ ಬೋಲ್ಟ್ ಹಾಕಿ. ಈಗ ಹೊಸ ಎಂಜಿನ್‌ ಆಯಿಲ್‌ ಅನ್ನು (ಎಂಜಿನ್‌ ಆಯಿಲ್‌ ಗ್ರೇಡ್‌ ನೋಡಿಕೊಳ್ಳಿ) ತುಂಬಿಸಿ.

ಏರ್‌ ಫಿಲ್ಟರ್‌ ಬದಲಾವಣೆ
ಸಾಮಾನ್ಯವಾಗಿ ಏರ್‌ಫಿಲ್ಟರ್‌ಗಳು ಸೀಟಿನ ತಳಭಾಗದಲ್ಲಿರುತ್ತವೆ. ಕೆಲವು ಬೈಕ್‌ಗಳಿಗೆ ಬೈಕ್‌ನ ಬದಿಯಲ್ಲಿರುತ್ತವೆ. ಅದನ್ನು ಗುರುತಿಸಿ, ಏರ್‌ ಫಿಲ್ಟರ್‌ ಬಾಕ್ಸ್‌ ತೆರೆದು ಹಳೆಯ ಏರ್‌ಫಿಲ್ಟರ್‌ನಿಂದ ಧೂಳು ತೆಗೆಯಿರಿ. ಧೂಳು ತೆಗೆಯಲು ಒಂದು ಬಾರಿ ಏರ್‌ ಪಂಪ್‌ಗೆ ಹಿಡಿಯಿರಿ ಅಥವಾ ನಯವಾದ ಬ್ರಷ್‌ನಿಂದ ಧೂಳು ತೆಗೆಯಿರಿ. ಒಂದು ವೇಳೆ ತುಂಬ ಹಳತಾಗಿದ್ದರೆ ಹೊಸದು ಹಾಕಿ.

ಚೈನ್‌ ಅಡ್ಜಸ್ಟ್‌ಮೆಂಟ್‌
ಬೈಕಿನ ಚೈನ್‌ ನಿರ್ದಿಷ್ಟ ಮಟ್ಟದಲ್ಲಿರಬೇಕು. ಇದು ಹೆಚ್ಚು ಬಿಗಿಯಾಗಿದ್ದರೂ, ಕಡಿಮೆ ಬಿಗಿಯಾಗಿದ್ದರೂ ಸಂಚಾರಕ್ಕೆ ಸಮಸ್ಯೆ. 30 ಎಂ.ಎಂ.ನಷ್ಟು ಚೈನ್‌ (ಸ್ಲಾéಕ್‌ನೆಸ್‌) ನಿರ್ದಿಷ್ಟ ಮಟ್ಟದಲ್ಲಿರಬೇಕು. ಚೈನ್‌ ಬಿಗಿ ಮಾಡಲು ಸ್ವಿಂಗ್‌ ಆರ್ಮ್ನಿಂದ ವೀಲ್‌ ಬೋಲ್ಟ್ ಸಡಿಲಗೊಳಿಸಿ, ಚೈನ್‌ ಟೈಟ್‌ ಮಾಡಬೇಕಾದ ಸ್ವಿಂಗ್‌ ಆರ್ಮ್ನಲ್ಲಿರುವ ಪುಟ್ಟ ಬೋಲ್ಟ್ (ಎರಡೂ ಭಾಗದಲ್ಲಿರುವ) ಬಿಗಿ ಮಾಡಿ ಈಗ ಚೈನ್‌ ಟೈಟ್‌ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಒಂದು ಬಾರಿ ಚೈನ್‌ನ ಎಲ್ಲ ಬದಿ ಬಿಗಿಯಾಗಿದೆಯೇ ಪರಿಶೀಲಿಸಿ ಮುಖ್ಯ ಬೋಲ್ಟ್ ಮೊದಲಿನಂತಯೇ ಅನುಸ್ಥಾಪಿಸಿ.

ಕ್ಲಚ್‌ ನಿರ್ವಹಣೆ
ಕೆಲವು ಸಾವಿರ ಕಿ.ಮೀ. ಓಡಿಸಿದ ಬಳಿಕ ಕ್ಲಚ್‌ ಕೇಬಲ್‌ ಬಿಗಿ ಕಳೆದುಕೊಳ್ಳುತ್ತದೆ. ಇದನ್ನೂ ನಿರ್ವಹಣೆ ವೇಳೆ ಸರಿಪಡಿಸಿಕೊಳ್ಳಬೇಕು. ಸುಮಾರು 1 ಎಂ.ಎಂ.ನಷ್ಟು ಕ್ಲಚ್‌ ಬೋಲ್ಟ್ ಅನ್ನು ಬಿಗಿಗೊಳಿಸಿದರೆ ಸಾಕು. ಕ್ಲಚ್‌ ಲಿವರ್‌ ಭಾಗಕ್ಕೆ ಉತ್ತಮ ಗುಣಮಟ್ಟದ ಗ್ರೀಸ್‌ ಹಾಕಿ.

ಆರ್‌ಪಿಎಂ ಸೆಟ್ಟಿಂಗ್‌
ಎಂಜಿನ್‌ ಸ್ಟಾರ್ಟ್‌ ಮಾಡಿ ಐಡಲ್‌ ಸರಿಯಾಗಿ ದೆಯೇ ನೋಡಿ. ಇಲ್ಲವಾದರೆ ಕಾಬ್ಯುìಯರೇಟರ್‌ ಕೆಳಭಾಗ ಇರುವ ಅಕ್ಸಲರೇಷನ್‌ ಬೋಲ್ಟ್ ಅನ್ನು 0.5 ಎಂ.ಎಂ.ನಷ್ಟು ಬಿಗಿ ಅಥವಾ ಸಡಿಲಗೊಳಿಸಿ. ಎಂಜಿನ್‌ ಐಡಲ್‌ ಸರಿ ಸುಮಾರು 800ರಿಂದ 1 ಸಾವಿರ ಆರ್‌ಪಿಎಂವರೆಗೆ ಇದ್ದರೆ ಸಾಕು.

ಬ್ರೇಕ್‌ ಪ್ಯಾಡ್‌ ಪರೀಕ್ಷೆ
ಬ್ರೇಕ್‌ ಹಿಡಿಯುತ್ತಿಲ್ಲ (ಡ್ರಮ್‌ ಬ್ರೇಕ್‌) ಎಂದಾದರೆ 4 ಎಂ.ಎಂ.ನಷ್ಟು ಬೋಲ್ಟ್ ಅನ್ನು ಬಿಗಿಗೊಳಿಸಿ. ಡಿಸ್ಕ್ ಬ್ರೇಕ್‌ ಬಿಗಿಗೊಳಿಸುವ ಕ್ರಮವಿಲ್ಲ. ಅದರಲ್ಲಿ ಆಯಿಲ್‌ ಸರಿಯಾದ ಮಟ್ಟದಲ್ಲಿದೆಯೇ ಎಂದು ಪರಿಶೀಲಿಸಿದರೆ ಸಾಕಾಗುತ್ತದೆ.

ಸ್ಪಾರ್ಕ್‌ ಪ್ಲಗ್‌
ಸ್ಪಾರ್ಕ್‌ ಪ್ಲಗ್‌ ವಯರ್‌ ತೆಗೆದು ನಿರ್ದಿಷ್ಟ ಟೂಲ್‌ನಿಂದ ಸ್ಪಾರ್ಕ್‌ ಪ್ಲಗ್‌ ಅನ್ನು ಎಂಜಿನ್‌ನಿಂದ ಹೊರತೆಗೆಯಿರಿ. ಹೊಯ್ಗೆ ಕಾಗದದ ನೆರವಿನಿಂದ ಅದರ ಬದಿಗಳಲ್ಲಿರುವ ಕಪ್ಪು ಕಾರ್ಬನ್‌ ಅನ್ನು ತೆಗೆದು ಶುಚಿಗೊಳಿಸಿ. ಪ್ಲಗ್‌ ಮೇಲ್ಭಾಗ ಅಂತರ ಹೆಚ್ಚಾಗಿದ್ದರೆ, ಸೂðéಡ್ರೈವರ್‌ ಹಿಂಭಾಗದಲ್ಲಿ ಒಂದೆರಡು ಪೆಟ್ಟು ನಯವಾಗಿ ಹೊಡೆಯಿರಿ. ಅನಂತರ ಮೊದಲಿದ್ದಂತೆಯೇ ಮರುಸ್ಥಾಪಿಸಿ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.