ಡಬಲ್‌ ಧಮಾಕ!ಎರಡು “ರಿಯಲ್‌’ ಮೊಬೈಲ್‌ ಬಿಡುಗಡೆ


Team Udayavani, Nov 25, 2019, 5:05 AM IST

PHONE

ಆನ್‌ಲೈನ್‌ ಮಾರಾಟಕ್ಕೆಂದೇ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಪರಿಚಯಿಸಿದ ರಿಯಲ್‌ಮಿ ಬ್ರಾಂಡ್‌ ಕ್ಷಿಪ್ರ ಗತಿಯಲ್ಲಿ 4 ಸ್ಥಾನಕ್ಕೇರಿದೆ. ಕಡಿಮೆ ದರದಲ್ಲಿ ಉತ್ತಮ ಫೀಚರ್‌ಗಳುಳ್ಳ ಫೋನ್‌ಗಳನ್ನು ಸತತವಾಗಿ ಬಿಡುಗಡೆ ಮಾಡುತ್ತಾ ಹೋದದ್ದು ಇದರ ಜನಪ್ರಿಯತೆಗೆ ಕಾರಣ. ಇಂತಿಪ್ಪ ರಿಯಲ್‌ ಮಿ ನಾಲ್ಕೈದು ದಿನಗಳ ಹಿಂದೆ ಭಾರತಕ್ಕೆ ಎರಡು ಹೊಸ ಮೊಬೈಲ್‌ಗ‌ಳನ್ನು ಪರಿಚಯಿಸಿದೆ. ಒಂದು ಅತ್ಯುನ್ನತ ದರ್ಜೆಯದ್ದಾದರೆ, ಇನ್ನೊಂದು ಬಜೆಟ್‌ನಲ್ಲಿ ಬರುವಂಥದ್ದು. ರಿಯಲ್‌ಮಿ ಎಕ್ಸ್‌2 ಪ್ರೊ ಮತ್ತು ರಿಯಲ್‌ಮಿ 5ಎಸ್‌.

ಸ್ಮಾರ್ಟ್‌ಫೋನ್‌ ಬ್ರಾಂಡೊಂದು ಹೊಸದಾಗಿ ಪರಿಚಯವಾಗಿ ಒಂದು, ಒಂದೂವರೆ ವರ್ಷದಲ್ಲಿ ಟಾಪ್‌ 5 ಪಟ್ಟಿಯಲ್ಲಿ ಸ್ಥಾನ ಪಡೆಯುವುದೆಂದರೆ ಕಡಿಮೆ ಸಾಧನೆಯಲ್ಲ. ಕಳೆದ ವರ್ಷ ಭಾರತದಲ್ಲಿ ಕೇವಲ 13 ಲಕ್ಷ ಫೋನ್‌ಗಳಷ್ಟು ಮಾರಾಟವಾಗಿ, ಈ ಸಾಲಿನಲ್ಲಿ ಶೇ. 401ರಷ್ಟು ಬೆಳವಣಿಗೆ ಕಂಡು, 67 ಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಮಾರಾಟ ಮಾಡಿದೆ. ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆ ಕಂಪೆನಿಯೆಂದರೆ ರಿಯಲ್‌ಮಿ. ಅದರ ಈ ಪರಿಯ ಸಾಧನೆಗೆ ಕಾರಣ, ಅಗ್ಗದ ದರದಲ್ಲಿ ಉತ್ತಮ ಗುಣಾಂಶಗಳುಳ್ಳ ಮೊಬೈಲ್‌ ಬಿಡುಗಡೆ ಮಾಡುತ್ತಲೇ ಇರುವುದು. ನಾಲ್ಕೈದು ದಿನಗಳ ಹಿಂದಷ್ಟೇ ಎರಡು ಮೊಬೈಲ್‌ ಫೋನ್‌ಗಳನ್ನು ರಿಯಲ್‌ ಮಿ ಭಾರತದಲ್ಲಿ ಹೊರತಂದಿದೆ. ಇದರಲ್ಲಿ ಒಂದು ಫ್ಲಾಗ್‌ಶಿಪ್‌ (ಅತ್ಯುನ್ನತ ದರ್ಜೆ) ಆದರೆ, ಇನ್ನೊಂದು ಬಜೆಟ್‌ ಫೋನು.

ರಿಯಲ್‌ ಮಿ ಎಕ್ಸ್‌ 2 ಪ್ರೊ
20 ಸಾವಿರದೊಳಗೆ, ಆರಂಭಿಕ ಮತ್ತು ಮಧ್ಯಮ ದರ್ಜೆಯ ಫೋನ್‌ಗಳನ್ನಷ್ಟೇ ಇದುವರೆಗೆ ಹೊರತಂದಿದ್ದ ರಿಯಲ್‌ಮಿ, ಇದೇ ಮೊದಲ ಬಾರಿಗೆ ಅತ್ಯುನ್ನತ ದರ್ಜೆಯ ಫೋನನ್ನು ಹೊರತಂದಿದೆ. ಇದರ ದರ 30 ಸಾವಿರದಿಂದ ಆರಂಭವಾಗುವುದು ವಿಶೇಷ. ರಿಯಲ್‌ ಮಿ ಕುಟುಂಬದ್ದೇ ಆದ ಅದರ ದೊಡ್ಡಣ್ಣ ಒನ್‌ ಪ್ಲಸ್‌ ಫೋನ್‌ಗಳ ದರ ಪ್ರತಿ ಫೋನಿಗೂ ಹೆಚ್ಚುತ್ತಲೇ ಹೋಗುತ್ತಿರುವಾಗ ಇದರ ದರ ಒಂದು ಮಟ್ಟಕ್ಕೆ ಕೈಗೆಟುಕುವಂತಿರುವುದು ಸಮಾಧಾನಕರ ವಿಷಯ. ಈ ದರಕ್ಕೆ ಫೋನಿನಲ್ಲಿ ಅಳವಡಿಸಿರುವ ತಾಂತ್ರಿಕತೆಗಳೂ ತೃಪ್ತಿಕರವಾಗಿವೆ.

ಈ ಫೋನಿನಲ್ಲಿ ಸ್ನಾಪ್‌ಡ್ರಾಗನ್‌ 855 ಪ್ಲಸ್‌ ಪ್ರೊಸೆಸರ್‌ ಇದೆ. ಇತ್ತೀಚಿನ ಒನ್‌ ಪ್ಲಸ್‌ 7ಟಿ ಫೋನಿನಲ್ಲಿರುವುದು ಇದೇ ಪ್ರೊಸೆಸರ್‌. ನಿಮಗೆ ಗೊತ್ತಿರುವಂತೆ ಈಗ ಇದು ಅತ್ಯುನ್ನತ ದರ್ಜೆಯ ಪ್ರೊಸೆಸರ್‌. 90 ಹಟ್ಜ್ì ಸೂಪರ್‌ ಅಮೋಲೆಡ್‌ 6.5 ಇಂಚಿನ ಪರದೆ ಹೊಂದಿದೆ. ಇದು 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ 12 ಜಿಬಿ ರ್ಯಾಮ್‌ 256 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳನ್ನು ಹೊಂದಿದೆ. ಪರದೆ ಫ‌ುಲ್‌ ಎಚ್‌ಡಿ ಪ್ಲಸ್‌ ರೆಸ್ಯೂಲೇಷನ್‌ ಹೊಂದಿದೆ. 90 ಹಟ್ಜ್ì ಡಿಸ್‌ಪ್ಲೇ ಇದ್ದು, ಪರದೆ ನೀರಿನ ಹನಿಯಂಥ ನಾಚ್‌ ಹೊಂದಿದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್‌ ಇದೆ.

ಕ್ಯಾಮರಾ ವಿಷಯಕ್ಕೆ ಬಂದರೆ 64 ಮೆಗಾಪಿಕ್ಸಲ್‌ ಸ್ಯಾಮ್‌ಸಂಗ್‌ ಸೆನ್ಸರ್‌, 13 ಮೆ.ಪಿ. ಟೆಲೆಫೋಟೋ ಲೆನ್ಸ್‌, 8 ಮೆ.ಪಿ. ವೈಡ್‌ ಆ್ಯಂಗಲ್‌ ಲೆನ್ಸ್‌, 2 ಮೆ.ಪಿ. ಡೆಪ್ತ್ ಸೆನ್ಸರ್‌ ಲೆನ್ಸ್‌ ಸೇರಿ ಒಟ್ಟು ನಾಲ್ಕು ಹಿಂಬದಿ ಕ್ಯಾಮರಾ ಹೊಂದಿದೆ. ಇದು 20ಪಟ್ಟು ಝೂಮ್‌ ಸಾಮರ್ಥ್ಯ ಹೊಂದಿದೆ. ಮುಂಬದಿ ಕ್ಯಾಮರಾ 16 ಮೆಗಾಪಿಕ್ಸಲ್‌ಗ‌ಳಿಗೆ ಸೀಮಿತವಾಗಿದೆ. ಹಿಂಬದಿ 64 ಮೆ.ಪಿ. ನಾಲ್ಕು ಕ್ಯಾಮರಾ ಕೊಟ್ಟು, ಸೆಲ್ಫಿà ಕ್ಯಾಮರಾ ಕೇವಲ 16 ಮೆ.ಪಿ. ನೀಡಿರುವುದು ಒಂದು ಕೊರತೆಯಾಗಿದೆ.

ವೇಗದ ಚಾರ್ಜಿಂಗ್‌
ಈ ಫೋನಿನಲ್ಲಿ 5 ಸಾವಿರ ಎಂಎಎಚ್‌ ಬ್ಯಾಟರಿ ಅಳವಡಿಸಿರುವುದು ಹೆಚ್ಚು ಹೊತ್ತು ಬ್ಯಾಟರಿ ಬಯಸುವವರಿಗೆ ಅನುಕೂಲಕರ. ಇದಿಷ್ಟೇ ಅಲ್ಲ, ಇದಕ್ಕೆ 50 ವ್ಯಾಟ್ಸ್‌ ಸುಪರ್‌ ವೂಕ್‌ ಫಾಸ್ಟ್‌ ಚಾರ್ಜರ್‌ ನೀಡಲಾಗಿದೆ. ಕಂಪೆನಿ ಹೇಳಿಕೊಂಡಿರುವ ಪ್ರಕಾರ ಭಾರತದಲ್ಲೇ ಅತಿ ವೇಗವಾಗಿ ಚಾರ್ಜ್‌ ಆಗುವ ಮೊಬೈಲ್‌ ಇದಂತೆ. ಕೇವಲ 35 ನಿಮಿಷಗಳಲ್ಲಿ ಸೊನ್ನೆಯಿಂದ ಶುರು ಮಾಡಿ ಶೇ. 100ರಷ್ಟು ಬ್ಯಾಟರಿ ಚಾಜ್‌ ಆಗುತ್ತದೆ ಎಂದು ಅದು ತಿಳಿಸಿದೆ.

ಆಡಿಯೋ ಪ್ರಿಯರಿಗಾಗಿ ಡೋಲ್ಬಿ ಆಟ್‌ಮೋಸ್‌ ಮತ್ತು ಹೈ ರೆಸೊಲ್ಯೂಷನ್‌ ಆಡಿಯೋ ತಂತ್ರಾಂಶ ಆಳವಡಿಸಲಾಗಿದೆ. ಮೊಬೈಲ್‌ ಗಾಜಿನ ದೇಹ ಹೊಂದಿದೆ. ಅಂಡ್ರಾಯ್ಡ 10 ಓಎಸ್‌ ಇರುವ ಹೊಸ ಮಾಡೆಲ್‌ಗ‌ಳು ಬರುತ್ತಿರುವಾಗ ಇದು ಅಂಡ್ರಾಯ್ಡ 9 ಆವೃತ್ತಿ ಹೊಂದಿರುವುದು ಒಂದು ಹಿನ್ನಡೆ ಎನ್ನಬಹುದು. ಇದರ ದರ 8+128 ಜಿಬಿಗೆ 30 ಸಾವಿರ ರೂ. 12+256 ಜಿಬಿಗೆ 34 ಸಾವಿರ ರೂ. ಈ ಮೊಬೈಲ್‌ ನವೆಂಬರ್‌ 26ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯಕ್ಕೆ ಆಹ್ವಾನದ ಮೂಲಕ ಲಭ್ಯ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ ನಿಗದಿತ ಸಮಯದಲ್ಲಿ ಯಾರು ನೋಂದಾಯಿಸಿಕೊಂಡಿರುತ್ತಾರೋ ಅಂಥವರಿಗೆ ಲಭ್ಯ.

ರಿಯಲ್‌ ಮಿ 5 ಎಸ್‌
ಮೇಲೆ ಹೇಳಿದ ಅತ್ಯುನ್ನತ ದರ್ಜೆಯ ಫೋನ್‌ ಜೊತೆಗೆ, ಬಜೆಟ್‌ ಪ್ರಿಯರಿಗಾಗಿ ರಿಯಲ್‌ಮಿ 5 ಎಸ್‌ ಎಂಬ ಇನ್ನೊಂದು ಫೋನನ್ನು ಕಂಪೆನಿ ಹೊರತಂದಿದೆ. ಇದರ ದರ 10 ಸಾವಿರ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ ಸ್ನಾಪ್‌ಡ್ರಾಗನ್‌ 665 ಮಧ್ಯಮ ದರ್ಜೆಯ ಪ್ರೊಸೆಸರ್‌ ಇದೆ. 48 ಮೆಗಾ ಪಿಕ್ಸಲ್‌ ಪ್ರೈಮರಿ ಲೆನ್ಸ್‌ ಉಳ್ಳ ನಾಲ್ಕು ಲೆನ್ಸಿನ ಕ್ಯಾಮರಾ ಒಳಗೊಂಡಿದ್ದು, 13 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. ಇದು ಸಹ 5 ಸಾವಿರ ಎಂಎಎಚ್‌ ಬ್ಯಾಟರಿ ಇದ್ದು, 10 ವ್ಯಾಟ್‌ ಚಾರ್ಜರ್‌ ಹೊಂದಿದೆ. ಎಚ್‌ಡಿ ಪ್ಲಸ್‌ (720×1600) ಡಿಸ್‌ಪ್ಲೇ ಹೊಂದಿದೆ. ಫ‌ುಲ್‌ ಎಚ್‌.ಡಿ ಎಲ್ಲ ಎಂಬುದನ್ನು ಗಮನಿಸಿ. 6.5 ಇಂಚಿನ ನೀರಿನ ಹನಿಯಂಥ ನಾಚ್‌ ಅನ್ನು ಪರದೆ ಹೊಂದಿದೆ. 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ: 10 ಸಾವಿರ ರೂ.) ಹಾಗೂ 4 ಜಿಬಿ ರ್ಯಾಮ್‌ 128 ಜಿಬಿ ಆಂತರಿಕ ಸಂಗ್ರಹ (ದರ: 11 ಸಾವಿರ ರೂ.) ಆವೃತ್ತಿ ಹೊಂದಿದೆ. ನವೆಂಬರ್‌ 29ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

 -ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.