ಹೆಡ್‌ಫೋನ್‌ನಿಂದ ಕಿವಿಗೆ ಅಪಾಯ? 430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲ…
Team Udayavani, Dec 14, 2022, 9:00 AM IST
ಇತ್ತೀಚಿನ ದಿನಗಳಲ್ಲಿ ಯುವ ಸಮೂಹದಲ್ಲಿ ಕಿವಿಗೆ ಹೆಡ್‌ಫೋನ್ ಅಥವಾ ಇಯರ್‌ಬಡ್‌ಗಳನ್ನು ಹಾಕಿಕೊಂಡು ಸಂಗೀತ ಕೇಳುವುದು ಹವ್ಯಾಸವಾಗಿ ಬದಲಾಗಿ ಬಿಟ್ಟಿದೆ. ಈ ವರ್ತನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ತಜ್ಞರ ಗುಂಪು, ಇದರಿಂದಲೇ 1 ಶತಕೋಟಿ ಜನರು ಕಿವಿ ಡ್ಯಾಮೇಜ್ ಮಾಡಿಕೊಳ್ಳಲಿದ್ದಾರೆ ಎಂದಿದೆ. ಇದಕ್ಕೆ ಬದಲಾಗಿ “ಸೇಫ್ ಲಿಸನಿಂಗ್’ ಕ್ರಮ ಅನುಸರಿಸಬೇಕು ಎಂದು ಹೇಳಿದೆ. ಹಾಗಾದರೆ ಏನಿದು ಸೇಫ್ ಲಿಸನಿಂಗ್?
430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲ
ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನ 430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೇ ಅವರು ಸಂಗೀತ ಕೇಳಲು ಬಳಕೆ ಮಾಡುತ್ತಿರುವ ಹೆಡ್‌ಫೋನ್ ಅಥವಾ ಇಯರ್‌ಬಡ್ಸ್‌ನ ಸಮಸ್ಯೆ. ಯುವಜನತೆ ಸ್ಮಾರ್ಟ್‌ಫೋನ್‌ಗಳಿಗೆ ಈ ಹೆಡ್‌ಫೋನ್ ಅಥವಾ ಇಯರ್‌ಫೋನ್‌ಗಳನ್ನು ಸಂಪರ್ಕಿಸಿ, ಕಿವಿಗೆ ಹಾಕಿಕೊಂಡು ಕೇಳುತ್ತಿದ್ದಾರೆ. ಅಲ್ಲದೆ ಸಂಗೀತ ಕಾರ್ಯಕ್ರಮಗಳನ್ನು ಕೇಳುವಾಗಲೂ ಹೆಚ್ಚಿನ ಶಬ್ದ ಬರುತ್ತಿರುತ್ತದೆ. ಇದರಿಂದಾಗಿ ಕಿವಿಯ ತಮಟೆಗೆ ಹಾನಿಯಾಗುತ್ತಿದೆ.
ಎಷ್ಟಿರಬೇಕು ಶಬ್ದ ಪ್ರಮಾಣ?
ಸದ್ಯ ಯುವಜನತೆ 104ರಿಂದ 112 ಡಿಬಿ ಮೌಲ್ಯದ ಶಬ್ದದಲ್ಲಿ ಸಂಗೀತ ಕೇಳುತ್ತಿದೆ. ಇದು ತೀರಾ ಹೆಚ್ಚಿನ ಪ್ರಮಾಣವಾಗಿದೆ. ಸಾಮಾನ್ಯವಾಗಿ ವಯಸ್ಕರು 80 ಡಿಬಿ, ಮಕ್ಕಳು 75 ಡಿಬಿ ವ್ಯಾಲ್ಯೂಮ್ ಸೌಂಡ್ ಇರಿಸಿಕೊಳ್ಳಬೇಕು. ಆದರೆ ಹೆಚ್ಚಿನ ಸೌಂಡ್‌ನಲ್ಲಿ ಸಂಗೀತ ಕೇಳುತ್ತಿರುವುದರಿಂದ ಕಿವಿಗೆ ಭಾರೀ ಪ್ರಮಾಣದ ಹಾನಿಯಾಗುತ್ತಿದೆ.
ಏನು ಮಾಡಬೇಕು?
ಆಯಾ ದೇಶಗಳ ಸರಕಾರಗಳು, ಉದ್ಯಮಗಳು, ಎನ್‌ಜಿಒಗಳು ಎಲ್ಲರೂ ಸೇಫ್ ಲಿಸನಿಂಗ್‌ಗೆ ಏರ್ಪಾಡು ಮಾಡಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವಕರು ಕಿವಿ ಕಳೆದುಕೊಳ್ಳದಂತೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.