ಸುಖ ಸವಾರಿಗೆ ಮತ್ತೂಂದು ಅವಕಾಶ ಎಲೆಕ್ಟ್ರಿಕ್ ಸ್ಕೂಟರ್
ಇದು ಜೇಬಿಗೂ, ಮನಸ್ಸಿಗೂ ಹಿತಕರ!
Team Udayavani, Jan 3, 2020, 5:29 AM IST
ಬೆಂಗಳೂರಿನಂತಹ ಪೇಟೆಯಲ್ಲಿ ಕೆಲವು ಸ್ಕೂಟರ್‌ಗಳು ಸೊಯ್ಯನೆ ಹೋಗುತ್ತಿರುತ್ತವೆ. ಕತ್ತು ತಿರುಗಿಸಿದರೆ ಅರೆ.. ಶಬ್ದವೇ ಇಲ್ಲ.. ಇದೇನು ಎಲೆಕ್ಟ್ರಿಕ್ ಸ್ಕೂಟರ್ರಾ? ಇಂಥದ್ದೊಂದು ನಾನೂ ತೆಗೆದುಕೊಂಡರೆ ಹೇಗೆ ಎಂಬ ಪ್ರಶ್ನೆಯೂ ಥಟ್ಟನೆ ಹೊಳೆದಿರಬಹುದು.
ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಕರ್ಷಣೆಯೇ ಅಂಥದ್ದು. ಪೆಟ್ರೋಲ್, ಸರ್ವೀಸ್, ರಸ್ತೆ ತೆರಿಗೆ, ವಾಯುಮಾಲಿನ್ಯ ತಪಾಸಣೆ ಇತ್ಯಾದಿಗಳ ಕಿರಿಕ್ ಇಲ್ಲ. ನಿಯಮಿತವಾಗಿ ಚಾರ್ಜ್ ಮಾಡಿದರೆ ಸಾಕು. ಹೆಚ್ಚು ನಿರ್ವಹಣೆಯೇ ಬೇಡ. ವಿಪರೀತ ಟ್ರಾಫಿಕ್ ಇರುವ ನಗರಗಳಲ್ಲಿ, ನಗರಗಳಿಗೆ ಮಾತ್ರ ಸೀಮಿತವಾದಂತೆ ಮತ್ತು ದಿನಕ್ಕೆ ಸುಮಾರು 30/70 ಕಿ.ಮೀ. ತಿರುಗಾಟ ಎಂದಿದ್ದರೆ ಹೊಸ ಜಮಾನಾದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ರೆ ಬೆಸ್ಟ್.
ಪೆಟ್ರೋಲ್ ಸ್ಕೂಟರ್‌ಗಳಿಗಿಂತ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸೌಕರ್ಯಗಳು ಹೆಚ್ಚು. ಕೆಲವೊಂದು ಸ್ಮಾರ್ಟ್ ಸ್ಕೂಟರ್‌ಗಳೂ ಇವೆ. ಇವುಗಳನ್ನು ಮೊಬೈಲ್‌ನಲ್ಲೇ ಲಾಕ್ ಮಾಡುವಂತಹ, ಸ್ಟಾರ್ಟ್ ಮಾಡುವಂತಹ ವ್ಯವಸ್ಥೆ ಇದೆ. ಸ್ಕೂಟರ್ ಕಳೆದುಹೋದರೆ ಜಿಪಿಎಸ್ ಮೂಲಕ ಗುರುತಿಸಬಹುದು. ಸರ್ವೀಸ್ ಅಲರ್ಟ್ ಮಾಡುತ್ತವೆ. ಮೊಬೈಲ್‌ಗೆ ಕರೆ, ಮೆಸೇಜ್ ಬಂದರೆ ಮೀಟರ್‌ನಲ್ಲಿ ತೋರಿಸುತ್ತವೆ. ಸಂಚರಿಸಬೇಕಾದ ಮಾರ್ಗ, ಪ್ರದೇಶಗಳ ಮಾಹಿತಿ ನೀಡುತ್ತವೆ.
ಅತ್ಯುತ್ತಮ ಮೈಲೇಜ್
ಭಾರತದ ಮಾರುಕಟ್ಟೆಗೆ ಈಗ ಅತ್ಯುತ್ತಮ ಗುಣಮಟ್ಟದ ಸ್ಕೂಟರ್‌ಗಳು ಬರತೊಡಗಿವೆ. ಸಿಂಗಲ್ ಚಾರ್ಜ್‌ಗೆ 30 ಕಿ.ಮೀ.ಯಿಂದ ಹಿಡಿದು 90 ಕಿ.ಮೀ. ವರೆಗೆ ಸಾಗುವ ಸ್ಕೂಟರ್‌ಗಳು ಇವೆ. ಒಂದು ಬಾರಿ ಶೇ.100ರಷ್ಟು ಚಾರ್ಜ್ ಆಗಲು ಇವುಗಳು 4 ಗಂಟೆಯಿಂದ 12 ಗಂಟೆವರೆಗೆ ತೆಗೆದುಕೊಳ್ಳುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಸ್ಕೂಟರ್‌ಗಳಲ್ಲಿ ಎಕಾನಮಿ ಮತ್ತು ಸಿಟಿ ಮೋಡ್ ಎಂದು ಎರಡು ಮಾದರಿಯ ಸ್ವಿಚ್ ಇದ್ದು, ಎಕಾನಮಿ ಹೆಚ್ಚಿನ ಮೈಲೇಜ್ ನೀಡಿದರೆ ಸಿಟಿ ಮೋಡ್ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ಕಿ.ಮೀ.ಗೆ ಖರ್ಚು ಕೆಲವೇ ಪೈಸೆ ಮಾತ್ರ
ಸುಮಾರು 40 ಕಿ.ಮೀ. ಯಷ್ಟು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ಗೆ 250 ಕಿ.ವ್ಯಾ. ಮೋಟಾರು ಬೇಕಾಗುತ್ತದೆ. ಇದು ಒಂದು ಸಿಂಗಲ್ ಚಾರ್ಜ್‌ಗೆ 1 ಅಥವಾ ಒಂದೂವರೆ ಯೂನಿಟ್‌ನಷ್ಟು ವಿದ್ಯುತ್ ಬೇಡುತ್ತದೆ. ಅಂದರೆ ಸುಮಾರು 7 ರೂ.ಗಳಷ್ಟು ಖರ್ಚಾಗುತ್ತದೆ. ಕೆಲವು ಸ್ಕೂಟರ್‌ಗಳು ಉತ್ತಮ ಗುಣಮಟ್ಟದ ಬ್ಯಾಟರಿ ಮತ್ತು ಮೋಟಾರುಗಳನ್ನು ಹೊಂದಿದ್ದರೆ 60 ಕಿ.ಮೀ. ವರೆಗೂ ಮೈಲೇಜ್ ಕೊಡಬಹುದು. ಅಂದರೆ ಕಿ.ಮೀ.ಗೆ ವಿದ್ಯುತ್ ಖರ್ಚು ಕೆಲವೇ ಪೈಸೆಯಷ್ಟಾಗುತ್ತದೆ.
ಏರುದಾರಿಗೂ ಸಲೀಸು
ಎಲೆಕ್ಟ್ರಿಕ್ ಸ್ಕೂಟರ್ ಎಂದಾಕ್ಷಣ ಎಲ್ಲರ ಸಮಸ್ಯೆ ನಮ್ಮ ಊರಿನ ಏರುದಾರಿಗೆ ಆಗುತ್ತಾ? ಅಲ್ಲೆಲ್ಲ ಸಂಚರಿಸುತ್ತಾ ಎನ್ನುವ ಪ್ರಶ್ನೆ ಇರಬಹುದು ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೆಟ್ರೋಲ್ ಸ್ಕೂಟರ್‌ನಷ್ಟು ಪಿಕಪ್ ಇಲ್ಲದಿದ್ದರೂ ಎಳೆಯುವ ಶಕ್ತಿ (ಟಾರ್ಕ್) ಹೆಚ್ಚಿರುತ್ತದೆ. ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅವುಗಳ ಸಾಮರ್ಥ್ಯ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿರುತ್ತದೆ. ಆರಂಭಿಕ 60 ಕಿ.ಮೀ. ವೇಗವನ್ನು 5 ಸೆಕೆಂಡ್‌ಗಳ ಒಳಗೆ ತಲುಪುತ್ತವೆ. ಎಳೆಯುವ ಶಕ್ತಿ 20 ಎನ್‌ಎಂಗೂ ಹೆಚ್ಚಿರುತ್ತವೆ. ಆದ್ದರಿಂದ ಇಬ್ಬರು ಕೂತು ಒಂದು ಪುಟ್ಟ ಸರಕಿನ ಚೀನ ಇಟ್ಟುಕೊಂಡಿದ್ದರೂ ಏರುದಾರಿಗೆ ನೋ ಪ್ರಾಬ್ಲಿಂ.
ನಿರ್ವಹಣೆ ವೆಚ್ಚ ಅತಿ ಕಡಿಮೆ
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನಿರ್ವಹಣೆ ಬೇಕಾದ್ದು ಬ್ಯಾಟರಿಯದ್ದು. ಬ್ಯಾಟರಿಯನ್ನು ಸುಸ್ಥಿತಿಯಲ್ಲಿಟ್ಟಿರಬೇಕು. ಈಗಿನ ಹೆಚ್ಚಿನ ಬ್ಯಾಟರಿಗಳು ಲೀಥಿಯಂ ಅಯಾನ್ ಬ್ಯಾಟರಿಗಳು. ಇವುಗಳು ಹೆಚ್ಚು ನಿರ್ವಹಣೆ ಬೇಡುವುದಿಲ್ಲ. ಆದರೆ 15 ದಿನಕ್ಕೊಮ್ಮೆ ತುಸು ಚಾರ್ಜ್, ಬಳಕೆ ಮಾಡಿದರೆ ಉತ್ತಮ. ಸುಮಾರು 4ರಿಂದ 5 ವರ್ಷವರೆಗೆ ಈ ಬ್ಯಾಟರಿಗಳು ಬಾಳಿಕೆ ಬರುತ್ತವೆ. 2-3 ವರ್ಷ ಕಂಪೆನಿಗಳು ವಾರೆಂಟಿಯನ್ನೂ ನೀಡುತ್ತವೆ. ಇನ್ನು ಹೊಸ ಬ್ಯಾಟರಿಗಳಿಗೆ 3-4 ಸಾವಿರ ರೂ.ದರವಿದೆ. ಉಳಿದಂತೆ ಟಯರ್, ಬ್ರೇಕ್ ಪ್ಯಾಡ್ ಸ್ಟೀರಿಂಗ್ ವೀಲ್ ಬೇರಿಂಗ್ ಇತ್ಯಾದಿ ಸಮಸ್ಯೆಗಳು ಬರಬಹುದು. ಸಾಮಾನ್ಯ ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದರ ನಿರ್ವಹಣೆ ನಗಣ್ಯ.
-ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.