ಟ್ವಿಟರ್ ನಿಂದ ನೀಲಿ ಪಕ್ಷಿಯನ್ನು ಹಾರಿಸಿ ʼನಾಯಿʼಯನ್ನು ಕರೆತಂದ ಎಲಾನ್ ಮಸ್ಕ್.!
Team Udayavani, Apr 4, 2023, 9:40 AM IST
ವಾಷಿಂಗ್ಟನ್: ಟ್ವಿಟರ್ ಮತ್ತೊಂದು ಅಪ್ಡೇಟ್ ನೊಂದಿಗೆ ಸುದ್ದಿಯಾಗಿದೆ. ಈ ಬಾರಿ ಅದು ಲೋಗೋ ವಿಚಾರವಾಗಿ ಎನ್ನುವುದು ವಿಶೇಷ. ಟ್ವಿಟರ್ ಆರಂಭವಾದಾಗಿನಿಂದ ಬಹುತೇಕ ಜನರು ಅದನ್ನು ಗುರುತಿಸುವುದು ಅದರ ಜನಪ್ರಿಯ ನೀಲಿ ಪಕ್ಷಿಯ ಲೋಗೋದಿಂದ. ಆದರೆ ಆ ಲೋಗೋವನ್ನೇ ಎಲಾನ್ ಮಸ್ಕ್ ಬದಲಾಯಿಸಿದ್ದಾರೆ.
ಸೋಮವಾರ ತಡರಾತ್ರಿ ಕೆಲ ಬಳಕೆದಾರರಿಗೆ ಟ್ವಿಟರ್ ನಲ್ಲಿ ಪಕ್ಷಿಯ ಲೋಗೋದ ಬದಲಾಗಿ ಲಾಗಿನ್ ಆಗುವ ವೇಳೆ ನಾಯಿಯೊಂದರ ಲೋಗೋ ಕಾಣಿಸಿದೆ. ಮಂಗಳವಾರ ಬೆಳಗ್ಗೆ ಇದು ಟ್ವಿಟರ್ ನ ಹೊಸ ಲೋಗೋ ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ದೀಪಕ್ ಬಾಕ್ಸರ್ ಬಂಧನ
ಕ್ರಿಪ್ಟೋಕರೆನ್ಸಿಯ ಮಿಮ್ ಗಾಗಿ ಬಳಕೆ ಆಗುತ್ತಿದ್ದ ಡಾಗಿ ಕಾಯಿನ್ ಚಿತ್ರವನ್ನು ಅಂದರೆ ಶಿಬಾ ಇನು ನಾಯಿಯ ಚಿತ್ರವನ್ನೇ ಟ್ವಿಟರ್ ನ ಹೊಸ ಲೋಗೋವಾಗಿ ಎಲಾನ್ ಮಸ್ಕ್ ಬಳಸಿಕೊಂಡಿದ್ದಾರೆ. ಲೋಗೋ ಬದಲಾದ ಕುರಿತ ವಿಚಾರವನ್ನು ಡಾಗಿ ಮಿಮ್ ಮೂಲಕ ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ. ಈ ಹಿಂದೆ ವ್ಯಕ್ತಿಯೊಬ್ಬರು ಲೋಗೋವನ್ನು ಬದಲಾಯಿಸಿ ಎಂದು ಹೇಳಿದ ವಿಚಾರವನ್ನು ಮತ್ತೆ ಹಂಚಿಕೊಂಡಿದ್ದಾರೆ.
ಅಂದ ಹಾಗೆ ಟ್ವಿಟರ್ ನ ವೆಬ್ ವರ್ಷನ್ ನಲ್ಲಿ ಮಾತ್ರ ಲೋಗೋ ಬದಲಾಗಿದ್ದು, ಮೊಬೈಲ್ ವರ್ಷನ್ ನಲ್ಲಿ ನೀಲಿ ಪಕ್ಷಿಯ ಲೋಗೋವೇ ಇದೆ.
— Elon Musk (@elonmusk) April 3, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.