ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್
Team Udayavani, Sep 23, 2021, 9:10 PM IST
ಇನ್ಮುಂದೆ ಎಲ್ಲಾ ಮೊಬೈಲ್ ಫೋನ್‍ಗಳು, ಐಪಾಡ್ ಹಾಗೂ ಇಯರ್ ಫೋನ್‍ಗಳಿಗೆ ಒಂದೇ ವಿಧದ ಚಾರ್ಜರ್ ಪೋರ್ಟ್ ಇರಬೇಕೆಂದು ಯುರೋಪಿಯನ್ ಕಮಿಷನ್ ಗುರುವಾರ ಹೊಸ ಆದೇಶ ಹೊರಡಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಚಾರ್ಜರ್ ಗಳಿವೆ. ಅದರಲ್ಲಿ ಪ್ರಮುಖವಾಗಿ ಟೈಪ್ ಸಿ ಯುಎಸ್‍ಬಿ, ಮೈಕ್ರೊ ಯುಎಸ್‍ಬಿ ಚಾರ್ಜರ್ ಗಳಿದ್ದು, ಆ್ಯಪಲ್ ಮೊಬೈಲ್‍ಗಳು ತನ್ನದೆಯಾದ ವಿಭಿನ್ನವಾದ ಚಾರ್ಜರ್ ಹೊಂದಿವೆ. ಜೊತೆಗೆ ಕೆಲವೊಂದು ಐಪಾಡ್, ಇಯರ್ ಫೋನ್ ಗಳಿಗೂ ಪ್ರತ್ಯೇಕ ಚಾರ್ಜರ್ ಗಳಿವೆ. ಇವುಗಳು ಒಂದು ರೀತಿಯಲ್ಲಿ ಗ್ರಾಹಕರಿಗೆ ಕಿರಿಕಿರಿಯನ್ನುಂಟು ಮಾಡುವುದು ಸುಳ್ಳಲ್ಲ. ದೂರದ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್ ಗಳನ್ನು ಜೊತೆಯಲ್ಲಿ ತೆಗೆದುಕೊಂಡೊಯ್ಯುವುದು ಕಿರಿಕಿರಿಯಾಗಬಹುದು. ಈ ಸಮಸ್ಯೆಗೆ ಇತಿಶ್ರೀ ಹೇಳುವ ಉದ್ದೇಶದಿಂದ ಯುರೋಪಿಯನ್ ಕಮಿಷನ್ ಹೊಸ ಆದೇಶವೊಂದನ್ನು ಹೊರಡಿಸಿದೆ.
ಯುರೋಪಿಯನ್ ಕಮಿಷನ್ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್‌ಫೋನ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಯುಎಸ್‌ಬಿ-ಸಿ ಕನೆಕ್ಟರ್ (USB-C) ಎಲ್ಲಾ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮರಾಗಳು, ಹೆಡ್‌ಫೋನ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ವೀಡಿಯೋಗೇಮ್ ಕನ್ಸೋಲ್‌ಗಳಿಗೆ ಪ್ರಮಾಣಿತ ಪೋರ್ಟ್ ಆಗಬೇಕು ಎಂದಿದೆ.
ಇನ್ನು ಯುಸಿಯ ಹೊಸ ಪ್ರಸ್ತಾಪವನ್ನು ಆ್ಯಪಲ್ ಸಂಸ್ಥೆ ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಾನಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಇದು ಯುರೋಪ್ ಮತ್ತು ಪ್ರಪಂಚದ ಗ್ರಾಹಕರಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.