ಭಾರತೀಯ ಬಳಕೆದಾರರಿಗೆ ಲಸಿಕೆ ಶೋಧಕ ಸಾಧನವನ್ನು ಪರಿಚಯಿಸಲಿದೆ ಫೇಸ್ ಬುಕ್
ಶ್ರೀರಾಜ್ ವಕ್ವಾಡಿ, May 18, 2021, 6:30 PM IST
ಭಾರತ ಸರ್ಕಾರದ ಸಹಭಾಗಿತ್ವದೊಂದಿಗೆ, ಲಸಿಕೆ ಪಡೆಯಲು ಹತ್ತಿರದ ಸ್ಥಳಗಳನ್ನು ಗುರುತಿಸಲು ಜನರಿಗೆ ಸಹಾಯ ಆಗುವಂತೆ 17 ಭಾಷೆಗಳಲ್ಲಿ ಲಭ್ಯವಿರುವ ಫೇಸ್ ಬುಕ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲಸಿಕೆ ಶೋಧಕ ಸಾಧನವನ್ನು ಹೊರತರಲು ಸಿದ್ಧತೆ ನಡೆಸಿದೆ ಎಂದು ತನ್ನ ಅಧಿಕೃತ ಪೇಜ್ ನಲ್ಲಿ ಫೇಸ್ ಬುಕ್ ಮಾಹಿತಿಯನ್ನು ಹಂಚಿಕೊಂಡಿದೆ.
ಫೇಸ್ ಬುಕ್ ಇನ್ ಅಪ್ಲಿಕೇಶನ್ ವ್ಯಾಕ್ಸಿನ್ ಟ್ರ್ಯಾಕರ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಲಸಿಕೆ ಟ್ರ್ಯಾಕರ್ ಉಪಕರಣವು ಬಳಕೆದಾರರಿಗೆ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದ ಸ್ಥಳಗಳು ಮತ್ತು ಅವುಗಳ ಕಾರ್ಯಾಚರಣೆಯ ಸಮಯವನ್ನು ತಿಳಿಸಲು ಅನುವು ಮಾಡಿಕೊಡಲಿದೆ.
45 ವರ್ಷ ಹಾಗೂ ಮೇಲ್ಪಟ್ಟವರಿಗೆ ವಾಕ್-ಇನ್ ಆಯ್ಕೆಗಳನ್ನು ತೋರಿಸುವುದು ಇದರ ಇನ್ನೊಂದು ವೈಶಿಷ್ಟ್ಯ. ಅದಲ್ಲದೆ, ಒಂದು ಟ್ರ್ಯಾಕರ್ ಲಿಂಕ್ ನನ್ನು ಕೂಡ ಸೇರಿಸಿದ್ದು ಅದು ಕೋ-ವಿನ್ ಪೋರ್ಟಲ್ ನಲ್ಲಿ ನೋಂದಾಯಿಸಲು ಬಳಕೆದಾರರಿಗೆ ನಿರ್ದೇಶನ ನೀಡುತ್ತದೆ ಮತ್ತು ವ್ಯಾಕ್ಸಿನೇಷನ್ ನಲ್ಲಿ ನೋಂದಾಯಿಸಲು ಸಹಕರಿಸುತ್ತದೆ.
ಇದನ್ನೂ ಓದಿ : ಕೋವಿಡ್ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಕ್ಕಿಲ್ಲ ಅಡ್ಡಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಮಾಶಬಲ್ ಪ್ರಕಾರ, ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು, ಕಳೆದ ವಾರ 10 ಮಿಲಿಯನ್ ಯುಎಸ್ ಡಾಲರ್ ಅನುದಾನವನ್ನು ಫೇಸ್‌ಬುಕ್ ಘೋಷಿಸಿತ್ತು.
ಲಸಿಕೆ ಟ್ರ್ಯಾಕರ್ ಉಪಕರಣವು ಬಳಕೆದಾರರಿಗೆ ಹತ್ತಿರದ ಲಸಿಕೆ ಕೇಂದ್ರದ ಸ್ಥಳಗಳನ್ನು ಕಂಡುಹಿಡಿಯಲು ಅನುಮತಿಸುತ್ತದೆ.
ಯುನೈಟೆಡ್ ವೇ, ಸ್ವಾಸ್ತ್, ಹೆಮಕುಂಟ್ ಫೌಂಡೇಶನ್, ಐ ಆಮ್ ಗುರಗಾಂವ್, ಪ್ರಾಜೆಕ್ಟ್ ಮುಂಬೈ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ ನರ್ ಶಿಪ್ ಫೋರಂ (ಯು ಎಸ್ ಐ ಎಸ್ ಪಿ ಎಫ್) – ಎನ್ ಜಿಒಗಳು ಮತ್ತು ಏಜೆನ್ಸಿಗಳೊಂದಿಗೆ ಕೈಜೋಡಿಸಲಿದೆ ಎಂದು ಫೇಸ್ ಬುಕ್ ತಿಳಿಸಿದೆ.
5,000 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್ ಗಳು, ಬೈಪಾಪ್ ಯಂತ್ರಗಳಂತಹ ಇತರ ಸಾಧನಗಳೊಂದಿಗೆ ನಿರ್ಣಾಯಕ ವೈದ್ಯಕೀಯ ಉಪಕರಣಗಳ ಸಂಗ್ರಹವನ್ನು ನಿರ್ಮಿಸಲು ಸಹಾಯ ಮಾಡಲಿದೆ ಈ ಆ್ಯಪ್.
ಇನ್ನು, ಫೇಸ್ ಬುಕ್ ಫೀಡ್ ನಲ್ಲಿ ಕೋವಿಡ್-19 ಮಾಹಿತಿ ಕೇಂದ್ರ ಮತ್ತು ತುರ್ತು ಆರೈಕೆಯನ್ನು ಪಡೆಯುವ ವಿಧಾನವನ್ನು ತೋರಿಸಲಾಗುವುದು ಮತ್ತು ಕೋವಿಡ್-19 ರೋಗಲಕ್ಷಣಗಳನ್ನು ಮನೆಯಲ್ಲಿಯೇ ಹೇಗೆ ನಿರ್ವಹಿಸುವುದು ಎಂಬ ಮಾಹಿತಿಯನ್ನು ಸಹ ಹೊಂದಿರುತ್ತದೆ ಎಂಬ ಮಾಹಿತಿಗಳನ್ನು ಯುನಿಸೆಫ್ ಇಂಡಿಯಾ ಒದಗಿಸುತ್ತದೆ ಎಂದು ಫೇಸ್ ಬುಕ್ ಹೇಳಿದೆ.
ಕೀರ್ತನ ಶೆಟ್ಟಿ
ಇದನ್ನೂ ಓದಿ : ‘ಕಾಯಕಾವ್ಯ’ದೊಳಗಿನ ಪ್ರಸ್ತುತದ ನೈಜ ಧ್ವನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.