ಟಿಕ್ ಟಾಕ್ ಮಾದರಿಯ ಫೀಚರ್ ಹೊರತಂದ ಫೇಸ್ ಬುಕ್: ಬಳಕೆ ಹೇಗೆ ?
Team Udayavani, Aug 15, 2020, 6:50 PM IST
ನವದೆಹಲಿ: ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರ ಹಲವಾರು ತದ್ರೂಪ ಆ್ಯಪ್ ಗಳು ಹುಟ್ಟಿಕೊಂಡಿವೆ. ಇನ್ ಸ್ಟಾಗ್ರಾಂ ಕೂಡ ರೀಲ್ಸ್ ಎಂಬ ಆಯ್ಕೆಯನ್ನು ಹೊರತಂದಿದೆ. ಇದೀಗ ಫೇಸ್ ಬುಕ್ ಕೂಡ ತನ್ನ ಅಧಿಕೃತ ಅಪ್ಲಿಕೇಷನ್ ನಲ್ಲಿ ಶಾರ್ಟ್ ವಿಡಿಯೋಗಳನ್ನು ಪರೀಕ್ಷೆಗೊಳಪಡಿಸುತ್ತಿದೆ.
ಭಾರತದಲ್ಲಿ ಈಗಾಗಲೇ ಫೇಸ್ ಬುಕ್, ಶಾರ್ಟ್ ವಿಡಿಯೋ ಫೀಚರ್ ಅನ್ನು ಹೊರತಂದಿದೆ. ಇದು ಕೂಡ ಟಿಕ್ ಟಾಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತ್ಯೇಕವಾದ ಆಯ್ಕೆಗಳನ್ನು ಹೊಂದಿದೆ. ಬಳಕೆದಾರರು ಕ್ರಿಯೇಟ್ ಬಟನ್ ಕ್ಲಿಕ್ ಮಾಡುವ ಮೂಲಕ ಟಿಕ್ ಟಾಕ್ ಮಾದರಿಯ ಸೇವೆಯನ್ನು ಪಡೆಯಬಹುದು.
ಈ ಶಾರ್ಟ್ ವಿಡಿಯೋಗಳು ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಈ ಫೀಚರ್ ಅನ್ನು ಮತ್ತಷ್ಟು ಉತ್ತಮಗೊಳಿಸಲು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಫೇಸ್ ಬುಕ್ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ ಟಿಕ್ ಟಾಕ್ ಭಾರತದಲ್ಲಿ ನಿಷೇಧವಾದ ನಂತರ ಫೇಸ್ ಬುಕ್ ಬಳಕೆದಾರರ ಸಂಖ್ಯೆ 25% ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಶಾರ್ಟ್ ವಿಡಿಯೋ ಯೋಜನೆಯನ್ನು ರೂಪಿಸಲಾಗಿದೆ ಎನ್ನಲಾಗಿದೆ. ಇದರ ಮೊದಲ ಭಾಗವಾಗಿ ಕಳೆದ ತಿಂಗಳು ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಅನ್ನು ಜಾರಿಗೆ ತರಲಾಗಿತ್ತು.
INTERESTING!
Facebook is also testing a ‘short videos’ feed with TikTok-like swipe up in its main appThis appears to be in addition to Instagram Reels
h/t @roneetm pic.twitter.com/0XHiSowCwW
— Matt Navarra (@MattNavarra) August 13, 2020
ಯೂಟ್ಯೂಬ್ ಕೂಡ ಇದೇ ಮಾದರಿಯ ಫೀಚರ್ ಅನ್ನು ಹೊರತರಲು ಯೋಜನೆ ರೂಪಿಸುತ್ತಿದೆ. ಇನ್ನು ಕೂಡ ಪರೀಕ್ಷಾರ್ಥ ಹಂತದಲ್ಲಿದ್ದು, ಶೀಘ್ರವಾಗಿ ಭಾರತೀಯ ಬಳಕೆದಾರರಿಗೆ ದೊರಕುವ ಸಾಧ್ಯತೆಯಿದೆ.
ಚೀನಾದ ಬೈಟೇಡ್ಯಾನ್ಸ್ ಒಡೆತನದ ಟಿಕ್ ಟಾಕ್ ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಆದರೇ ಈ ಆ್ಯಪ್ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿರುವುದರಿಂದ ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು. ಹೀಗಾಗಿ ಟಿಕ್ ಟಾಕ್ ಬಳಕೆದಾರರು ಇತರ ಸಾಮಾಜಿಕ ಜಾಲತಾಣಗಳ ಕಡೆಗೆ ಮುಖಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.