![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 1, 2020, 12:52 PM IST
ನ್ಯೂಯಾರ್ಕ್: ಕಳೆದ ಹಲವು ದಿನಗಳಿಂದ ಫೇಸ್ ಬುಕ್ ತನ್ನ ಮೆಸೆಂಜರ್ ರೂಂ ಶಾರ್ಟ್ ಕಟ್ ಅನ್ನು ವಾಟ್ಸಾಪ್ ಗೆ ತರಲು ಯೋಜಿಸುತ್ತಿತ್ತು. ಇದೀಗ ಅಧಿಕೃತವಾಗಿ ಜಾರಿಗೆ ಬಂದಿದ್ದು ಆದರೇ ಈ ಮೆಸೆಂಜರ್ ಫೀಚರ್ ಅನ್ನು ‘ವಾಟ್ಸಾಪ್ ವೆಬ್’ನಲ್ಲಿ ಮಾತ್ರ ಬಳಸಬಹುದು.
ವಾಟ್ಸಾಪ್ ಮೊಬೈಲ್ ಆ್ಯಪ್ ನಲ್ಲಿ ಸದ್ಯ ಈ ಫೀಚರ್ ಬಳಕೆಯಲ್ಲಿಲ್ಲ. ವೆಬ್ ನಲ್ಲಿ ಬಳಕೆಗೆ ಬಂದಿರುವ ಈ ಫೀಚರ್ ಮೂಲಕ ಸುಲಭವಾಗಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಇದರಲ್ಲಿ 50 ಜನ ಏಕಕಾಲದಲ್ಲಿ ಪಾಲ್ಗೊಳ್ಳಬಹುದು. ಆದರೇ ಇದು ಕೇವಲ ಶಾರ್ಟ್ ಕಟ್ ಬಟನ್ ಆಗಿದ್ದು ಇದನ್ನು ಕ್ಲಿಕ್ ಮಾಡಿದಾಕ್ಷಣ ವಾಟ್ಸಾಪ್ ವೆಬ್ ನಿಂದ ನೇರವಾಗಿ ಮೆಸೆಂಜರ್ ರೂಂ ವೆಬ್ ಆ್ಯಪ್ ಗೆ ನಿಮ್ಮನ್ನು ಕರೆದೊಯ್ಯುತ್ತದೆ.
ಇದೀಗ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಲಭ್ಯವಿದ್ದು ‘Attach File’ ಆಯ್ಕೆಯಲ್ಲಿ ಮೆಸೆಂಜರ್ ರೂಂ ಫೀಚರ್ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಮೆಸೆಂಜರ್ ರೂಂ ಕ್ರಿಯೇಟ್ ಮಾಡಿ ಇತರರಿಗೆ ಆಹ್ವಾನ ಕೊಡಬಹುದಾಗಿದೆ. ಗಮನಾರ್ಹ ಸಂಗತಿಯೆಂದರೇ ವಾಟ್ಸಾಪ್ ಅಕೌಂಟ್ ಇಲ್ಲದವರೂ ಕೂಡ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ವಾಟ್ಸಾಪ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮೆಸೆಂಜರ್ ರೂಂ ಶಾರ್ಟ್ ಕಟ್ ಬಳಕೆಗೆ ತರುವುದು ಫೇಸ್ ಬುಕ್ ಸಂಸ್ಥೆಯ ಮಹತ್ವದ ಯೋಜನೆಯಾಗಿದ್ದು, ಆ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವುದು ಇದರ ಉದ್ದೇಶವೆಂದು ಅಂದಾಜಿಸಲಾಗಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.