ಬೆಂಗಳೂರು ಸೇರಿ 3 ವಿಮಾನ ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಜಾರಿ, ಏನಿದು ಹೊಸ ತಂತ್ರಜ್ಞಾನ?
2023ರ ಮಾರ್ಚ್ ನಲ್ಲಿ ಹೈದರಾಬಾದ್, ಪುಣೆ, ವಿಜಯವಾಡ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ವ್ಯವಸ್ಥೆಗೆ ಚಾಲನೆ
Team Udayavani, Dec 1, 2022, 5:52 PM IST
ನವದೆಹಲಿ: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಗುರುತಿಸಲು ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆಯ “ಡಿಜಿ ಯಾತ್ರಾ” ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ಗೆ ಟೀಕೆ ; ಇಸ್ರೇಲಿ ನಿರ್ಮಾಪಕಗೆ ಅನುಪಮ್ ಖೇರ್ ತಿರುಗೇಟು
ಬೆಂಗಳೂರು, ದೆಹಲಿ ಮತ್ತು ವಾರಾಣಸಿ ವಿಮಾನ ನಿಲ್ದಾಣದಲ್ಲಿ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ ಗುರುವಾರ(ಡಿಸೆಂಬರ್ 01)ದಿಂದ ಆರಂಭಗೊಂಡಿದ್ದು, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಜಿ ಯಾತ್ರಾ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ.
ಇದು ಹೇಗೆ ಕಾರ್ಯಾಚರಿಸುತ್ತದೆ?
ಡಿಜಿ ಯಾತ್ರಾ ತಂತ್ರಜ್ಞಾನದ ನೆರವಿನೊಂದಿಗೆ ಇನ್ಮುಂದೆ ಪ್ರಯಾಣಿಕರು ಕಾಗದರಹಿತವಾಗಿ ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದಾಗಿದೆ. ವಿಮಾನ ನಿಲ್ದಾಣದ ವಿವಿಧ ಚೆಕ್ ಪಾಯಿಂಟ್ಸ್ ಗಳಲ್ಲಿ ಪ್ರಯಾಣಿಕರ ಮಾಹಿತಿಯ ಡಾಟಾ ಫೆಸಿಯಲ್ ರೆಕಗ್ನಿಷನ್ ಮೂಲಕ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.
ಪ್ರಯಾಣಿಕರು ತಮ್ಮ ಪ್ರಯಾಣದ ವಿವರವನ್ನು ಆಧಾರ ಸಂಖ್ಯೆಯ ಮೂಲಕ ಡಿಜಿ ಯಾತ್ರಾ ಆ್ಯಪ್ ಅನ್ನು ಉಪಯೋಗಿಸಿ ಸೆಲ್ಫ್ ಫೋಟೋದೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡು, ಆ ದಾಖಲೆಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಬಾರ್ ಕೋಡೆಡ್ ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡಿಕೊಂಡ ನಂತರ ಇ-ಗೇಟ್ ನಲ್ಲಿ ಫೇಸಿಯಲ್ ರೆಕಗ್ನಿಷನ್ ಮೂಲಕ ಪ್ರಯಾಣಿಕರ ಗುರುತು ಮತ್ತು ಪ್ರಯಾಣದ ದಾಖಲೆಯನ್ನು ಪರಿಶೀಲಿಸಲಿದೆ. ಆ ಬಳಿಕ ಪ್ರಯಾಣಿಕರು ಇ-ಗೇಟ್ ಮೂಲಕ ಪ್ರವೇಶಿಸಬಹುದಾಗಿದೆ.
ಈ ನೂತನ ವ್ಯವಸ್ಥೆ ಬೆಂಗಳೂರು, ದೆಹಲಿ ಮತ್ತು ವಾರಾಣಸಿಯಲ್ಲಿ ಇಂದಿನಿಂದ ಆರಂಭಗೊಂಡಿದ್ದು, 2023ರ ಮಾರ್ಚ್ ನಲ್ಲಿ ಹೈದರಾಬಾದ್, ಪುಣೆ, ವಿಜಯವಾಡ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಸಿಂಧಿಯಾ ತಿಳಿಸಿದ್ದಾರೆ. ಡಿಜಿ ಯಾತ್ರಾ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲ್ಯಾಟ್ ಫಾರಂನಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.