![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 27, 2021, 12:41 PM IST
ನವ ದೆಹಲಿ : ಮೊಬೈಲ್ ಆ್ಯಕ್ಷನ್ ಗೇಮ್ ಫಿಯರ್ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್ (FAU -G) ಭಾರತದಲ್ಲಿ ಬಿಡುಗಡೆಯಾದ ಒಂದು ದಿನದಲ್ಲೇ ಅದರ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತಿರುವ PUBG ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಮತ್ತೆ ಹೊಂದುತ್ತಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮೂಲದ ಎನ್ ಕೋರ್ ಗೇಮ್ಸ್ ಕಂಪೆನಿ ಅಭಿವೃದ್ಧಿ ಪಡಿಸಿದ FAU -G ಗೇಮ್ ನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅನಾವರಣಗೊಳಿಸಿದ್ದಾರೆ. ಬಹು ನಿರೀಕ್ಷಿತ FAU -G ಗೇಮ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ “ಫಿಲ್ ದಿ ಶೂ ಆಫ್ ಪೇಟ್ರಿಯಾಟಿಕ್ ಸೋಲ್ಜರ್” ಎಂಬ ವಿವರಣೆಯೊಂದಿಗೆ ಇನ್ ಸ್ಟಾಲ್ ಮಾಡಿಕೊಳ್ಳಲು ಲಭ್ಯವಿದೆ. ಅದಾಗ್ಯೂ, ಐಒಎಸ್ ಬಳಕೆದಾರದು ಇದನ್ನು ಬಳಸಬಹುದೇ ಎನ್ನುವುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಕಂಪೆನಿ ಇದುವರೆಗೆ ಬಹಿರಂಗಪಡಿಸಿಲ್ಲ. ಸದ್ಯಕ್ಕೆ, ಆಂಡ್ರಾಯ್ಡ್ ಬಳಕೆದಾರರು ಮಾತ್ರ ಬಳಸಬಹುದಾಗಿದೆ.
ಓದಿ : ಗುಟ್ಟಹಳ್ಳಿ ಶಾಲೆಯಲ್ಲಿ ಧ್ವಜಾರೋಹಣ ಇಲ್ಲ
ಭಾರತದಲ್ಲಿ PUBG ಗೇಮ್ “ಡಿಜಿಟಲ್ ಸ್ಟ್ರೈಕ್” ಆಂದೋಲನದಲ್ಲಿ ನಿಷೇಧಕ್ಕೆ ಒಳಪಟ್ಟಾಗ ನಟ ಅಕ್ಷಯ್ ಕುಮಾರ್ ಈ FAU-G ಗೇಮ್ ಬಗ್ಗೆ ಸೆಪ್ಟೆಂಬರ್ 2020 ರಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಭಾರತದಲ್ಲಿ ಪಬ್ಜಿಯ ಭವಿಷ್ಯವೇನು..? ಭಾರತದಲ್ಲಿ ಮತ್ತೆ ಬರಲಿದೆಯೇ PUBG..?
ಕಳೆದ ಜೂನ್ ನಲ್ಲಿ ಎಲೆಕ್ಟ್ರಾನಿಕ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಚೀನಾ ಮೂಲದ 59 ಅಪ್ಲಿಕೇಶನ್ ಗಳನ್ನು ನಿಷೇಧಿಸಿತ್ತು. ಬಳಿಕ ಸಪ್ಟೆಂಬರ್ ನಲ್ಲಿ ಟೆನ್ಸೆಂಟ್ ನ ಜನಪ್ರಿಯ ಗೇಮ್ PUBGಯನ್ನು ಒಳಗೊಂಡು 108 ಅಪ್ಲಿಕೇಶನ್ ಗಳನ್ನು ನಿಷೇಧಿಸಲಾಗಿತ್ತು. ಈ ಎಲ್ಲಾ ಅಪ್ಲಿಕೇಶನ್ ಗಳನ್ನು ರಾಷ್ಟ್ರದ ಭದ್ರತಾ ವಿಷಯಕ್ಕೆ ಸಂಬಂಧಿಸಿ ಶಾಶ್ವತವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಮಾಹಿತಿಯನ್ನು ಇತ್ತೀಚಿನ ವರದಿಯೊಂದು ತಿಳಿಸಿದೆ. ಆದರೂ, ಅದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಒಟ್ಟಿನಲ್ಲಿ, PUBG ಮೊಬೈಲ್ ಹಾಗೂ PUBG ಮೊಬೈಲ್ ಲೈಟ್ ಇನ್ನು ಮುಂದೆ ಭಾರತದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಸುಳಿವು ದೊರಕಿದೆ.
ಓದಿ : ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಪೊಲೀಸರ ಬ್ರೇಕ್
PUBGಯ ಇತ್ತೀಚಿನ ಬೆಳವಣಿಗೆ ಏನು..?
PUBG ಕಂಪೆನಿ ಕಳೆದ ಡಿಸೆಂಬರ್ ನಲ್ಲಿ ಎರಡು ಪ್ರಮುಖ ಬೆಳವಣಿಗೆಯನ್ನು ಕಂಡಿದೆ. ಅದು ಪಬ್ಜಿ ಅಭಿಮಾನಿಗಳಿಗೆ ಭರವಸೆಯನ್ನು ಹುಟ್ಟಿಸಿದೆ. PUBGಯ ಮಾತೃ ಸಂಸ್ಥೆ ಕ್ರಾಫ್ಟನ್ ಇಂಕ್, ಅನೀಶ್ ಅರವಿಂದ್ ಅವರನ್ನು ಭಾರತದ ಪಬ್ಜಿ ಕಂಪೆನಿಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿದೆ. ಗೇಮಿಂಗ್ ಇಂಡಸ್ಟ್ರಿಯಲ್ಲಿ 15 ವರ್ಷಗಳ ತೊಡಗಿಕೊಂಡಿರುವ ಅನೀಶ್ ಅರವಿಂದ್ ಗೇಮಿಂಗ್ ಲೋಕದ ದೈತ್ಯರೊಂದಿಗೆ ಕೆಲಸ ಮಾಡಿದ ಅನುಭವ ಉಳ್ಳವರು. ಮಾತ್ರವಲ್ಲದೇ, ಕ್ರಾಫ್ಟನ್ ಇಂಕ್ ಇನ್ನೂ ನಾಲ್ಕು ಜನರನ್ನು ಸೇರಿಸುವ ಮೂಲಕ ಅನೀಶ್ ಅರವಿಂದ್ ತಂಡವನ್ನು ಭದ್ರಗೊಳಿಸುವಂತೆ ಕಾಣಿಸುತ್ತಿದೆ. ಈ ನಾಲ್ವರು PUBG ಮೊಬೈಲ್‌ನ ಜಾಗತಿಕ ಆವೃತ್ತಿಯ ಹಕ್ಕುಗಳ ಜವಾಬ್ದಾರಿಯುತ ಕಂಪನಿಯಾದ ಟೆನ್ಸೆಂಟ್ ನ ಭಾಗವಾಗಿದ್ದವರು.
“PUBG ಇಂಡಿಯಾ”ಗೆ ಸೇರ್ಪಡೆಯಾದ ಹೊಸ ಸದಸ್ಯರು ಯಾರು..?
ಆಕಾಶ್ ಜುಮ್ಡೆ (ವಿಷುಯಲ್ ಕಂಟೆಂಟ್ ಡಿಸೈನರ್), ಪಿಯೂಷ್ ಅಗರ್ವಾಲ್ (ಹಣಕಾಸು ವ್ಯವಸ್ಥಾಪಕ), ಅರ್ಪಿತಾ ಪ್ರಿಯದರ್ಶಿನಿ (ಹಿರಿಯ ಸಮುದಾಯ ವ್ಯವಸ್ಥಾಪಕಿ) ಮತ್ತು ಕರಣ್ ಪಾಠಕ್ (ಹಿರಿಯ ಎಸ್ಪೋರ್ಟ್ಸ್ ವ್ಯವಸ್ಥಾಪಕ).
ಓದಿ : ಮಾರುಕಟ್ಟೆಗೆ ಸಜ್ಜಾಗಿದೆ ಜೀಪ್ ಕಂಪಾಸ್ ಫೇಸ್ ಲಿಫ್ಟ್
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.