ಫ್ಲಿಫ್ ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇ ಸೇಲ್: ಗ್ರಾಹಕರಿಗೆ ಸಿಗಲಿದೆ ಭರ್ಜರಿ ಆಫರ್
Team Udayavani, Sep 12, 2019, 8:57 AM IST
ಮಣಿಪಾಲ: ಹಲವು ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್ “ದಿ ಬಿಗ್ ಬಿಲಿಯನ್ ಡೇಸ್” ಆಫರ್ ಅನ್ನು ಮತ್ತೆ ಆರಂಭಿಸಿದೆ . ಈ ಮೂಲಕ ಆನ್ ಲೈನ್ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿದ್ದಕೊಂಡು ಹೊಸ ಭಾಷ್ಯ ಬರೆಯಲು ಮುಂದಾಗಿದೆ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4ರವರೆಗೂ ನಡೆಯಲಿದೆ. ಈ ಸಂದರ್ಭದಲ್ಲಿ ಹಲವು ಆಫರ್ ಗಳನ್ನು ನೀಡಲಿದ್ದು , ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡುದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ವಿವಿಧ ವರ್ಗಗಳಲ್ಲಿ ಮಾರಾಟ ನಡೆಯಲಿದ್ದು ಸೆಪ್ಟೆಂಬರ್ 30ರಂದು ಮೊಬೈಲ್ ಉಪಕರಣಗಳು ಹೆಚ್ಚಿನ ಆಫರ್ ಗಳಲ್ಲಿ ಲಭ್ಯವಾಗಲಿದೆ.
ಟಿವಿಗಳು, ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಫ್ಯಾಷನ್ ಸಾಮಾಗ್ರಿಗಳು, ಕ್ರೀಡಾ ವಸ್ತುಗಳು, ಸ್ಮಾರ್ಟ್ ಡಿವೈಸ್ ಗಳು ಇನ್ನಿತರ ವಸ್ತುಗಳ ಮಾರಾಟ ಸೆಪ್ಟೆಂಬರ್ 29 ರಂದು ನಡೆಯಲಿದೆ. 30ರ ನಂತರ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ ಅದರ ಜೊತೆಗೆ ಆಕ್ಸಸ್ಸೆರಿಗಳನ್ನು ಮಾರಾಟ ಮಾಡಲಾಗುವುದು. ಈ ರೀತಿ ಅಕ್ಟೋಬರ್ 4ರವರೆಗೂ ಹಲವು ಆಫರ್ ಗಳ ಮೂಲಕ ವಿವಿಧ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಈ ವರ್ಷದಲ್ಲಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಸರಣಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ 30,000 ಕಿರಾಣಿ ಅಂಗಡಿಗಳನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ.
ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ನಾಲ್ಕು ಗಂಟೆ ಮೊದಲೇ ಅವಕಾಶಗಳ ಬಾಗಿಲು ತೆರೆಯಲಿದ್ದು, ಹೆಚ್ಚು ಹೆಚ್ಚು ಆಫರ್ ಗಳು ದೊರೆಕಲಿದೆ. ಪ್ರತಿನಿತ್ಯ ಯಾವೆಲ್ಲಾ ವಸ್ತುಗಳ ಮಾರಾಟವಾಗುತ್ತದೆ ಎಂಬ ವಿಷಯನ್ನು ದಿನದಾರಂಭದಲ್ಲಿ ಮಾಹಿತಿ ನೀಡಲಿದೆ. ಈ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 10% ಕ್ಕಿಂತ ಹೆಚ್ಚು ಡಿಸ್ಕೌಂಟ್ , 5 % ಕ್ಕಿಂತ ಹೆಚ್ಚು ಕ್ಯಾಶ್ ಬ್ಯಾಕ್ ಸಿಗಲಿದೆ. ಜೊತೆಗೆ ಮೊದಲ ಬಾರಿಗೆ ಗ್ರಾಹಕರು ವಿಮೆಗಳ ಮೂಲಕವೂ ವಸ್ತುಗಳನ್ನು ಖರೀದಿ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ.
ದಿ ಬಿಗ್ ಬಿಲಿಯನ್ ಡೇಸ್ ಗಾಗಿ ಭಾರತದ ಪ್ರಮುಖ ತಾರೆಗಳಾದ ಅಮಿತಾಬ್ ಬಚ್ಚನ್ , ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ, ಎಂ,ಎಸ್ ಧೋನಿ ಮುಂತಾದವರೊಂದಿಗೆ ಫ್ಲಿಪ್ ಕಾರ್ಟ್ ಪಾಲುದಾರಿಕೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.