Flipkart big billion day ಅ.8ರಿಂದ ಆರಂಭ; ಅತ್ಯಂತ ಕಡಿಮೆ ದರಕ್ಕೆ ದೊರಕಲಿದೆ ಐಫೋನ್ 14
ಗ್ಯಾಜೆಟ್ ಗಳು, ವಾಶಿಂಗ್ ಮೆಶಿನ್ ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಗಳಿಗೆ ಭರ್ಜರಿ ರಿಯಾಯಿತಿ!
Team Udayavani, Oct 6, 2023, 2:24 PM IST
ಬೆಂಗಳೂರು: ಭಾರತೀಯ ಗ್ರಾಹಕರು ಬಹಳ ನಿರೀಕ್ಷೆಯಿಂದ ಎದುರು ನೋಡುವ ವರ್ಷಕ್ಕೊಮ್ಮೆ ಮಾತ್ರ ಬರುವ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳ ಅಕ್ಟೋಬರ್ 8 ರಿಂದ ಆರಂಭವಾಗಲಿದೆ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಅ. 8ರಿಂದ 15ರವರೆಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ಒಂದು ದಿನ ಮೊದಲೇ ಅಂದರೆ ಅ. 7 ರಿಂದಲೇ ಇದರ ಪ್ರಯೋಜನ ಹೊಂದಲಿದ್ದಾರೆ. ಬಿಗ್ ಬಿಲಿಯನ್ ಡೇಸ್ 10ನೇ ವರ್ಷದ ಮಾರಾಟ ಮೇಳ ಇದಾಗಿದೆ.
ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ನಾನಾ ಗ್ಯಾಜೆಟ್ ಗಳು, ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಗಳು, ಉಡುಪುಗಳು ಸೇರಿದಂತೆ ನಾನಾ ವಿಭಾಗಗಳ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ದೊರಕುತ್ತದೆ.
ಫ್ಲಿಪ್ ಕಾರ್ಟ್ ನಲ್ಲಿ ಮಾಮೂಲಿ ದಿನಗಳಲ್ಲಿ ದೊರಕುವ ವಸ್ತುಗಳ ಬೆಲೆ ಬಿಬಿಡಿ ದಿನಗಳಲ್ಲಿ ಕಡಿಮೆ ಇರುತ್ತದೆ. ಮಾತ್ರವಲ್ಲದೇ ಈ ಬಾರಿ ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಮಹಿಂದ್ರಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಖರೀದಿಸಿದರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕಲಿದೆ. ಅಲ್ಲದೇ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಶೇ. 10ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಇಎಂಐ ಖರೀದಿಗಳಿಗೂ ಶೇ. 10 ರ ರಿಯಾಯಿತಿ ದೊರಕುತ್ತದೆ.
ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಉಳ್ಳವರಿಗೆ ಶೇ. 5ರಷ್ಟು ತಕ್ಷಣದ ರಿಯಾಯಿತಿ ಮತ್ತು ಶೇ. 5ರಷ್ಟು ಅನ್ ಲಿಮಿಟೆಟ್ ಕ್ಯಾಶ್ ಬ್ಯಾಕ್ ದೊರಕಲಿದೆ. ಪ್ರಮುಖ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ ಬಡ್ಡಿ ರಹಿತ ಇಎಂಐ ಸೌಲಭ್ಯ ಇರಲಿದೆ.
ಐಫೋನ್ 14 ಗೆ ಭರ್ಜರಿ ರಿಯಾಯಿತಿ: ಬಿಬಿಡಿ ಸೇಲ್ ನಲ್ಲಿ ಐಫೋನ್ 14 ಅನ್ನು ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ನೀಡುವುದಾಗಿ ಫ್ಲಿಪ್ ಕಾರ್ಟ್ ವೆಬ್ ಸೈಟ್ ತಿಳಿಸಿದೆ. 40 ಸಾವಿರದಿಂದ 50 ಸಾವಿರದೊಳಗೆ ಅದರ ದರ ಇರಲಿದೆ. ಈಗ ಐಫೋನ್ 14ನ 128 ಜಿಬಿ ಆವೃತ್ತಿಯ ದರ 65 ಸಾವಿರ ರೂ. ಇದೆ.
ಐಫೋನ್ 14 ಪ್ಲಸ್ ದರ 128 ಜಿಬಿ ಮಾದರಿಗೆ ಈಗ 74 ಸಾವಿರ ರೂ. ಇದೆ. ಈ ಮಾದರಿಯು 50 ರಿಂದ 60 ಸಾವಿರದೊಳಗೆ ದೊರಕುವ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಐಫೋನ್ 15 ಸರಣಿಯ ಫೋನ್ ಗಳು ತಮ್ಮ ಕೈಗೆಟುಕುವುದಿಲ್ಲ 14 ಸರಣಿಯ ಫೋನ್ ಗಳನ್ನಾದರೂ ಕೊಳ್ಳೋಣ ಎಂದುಕೊಂಡಿರುವ ಗ್ರಾಹಕರಿಗೆ ಇದು ಬಂಪರ್ ಆಫರ್ ಎನ್ನಬಹುದು. ಐಫೋನ್ 12 ಮಾದರಿ 32,999 ರೂ.ಗೆ ದೊರಕಲಿದೆ. ಈಗ ಇದರ 64 ಜಿಬಿ ಮಾದರಿಯ ದರ 49 ಸಾವಿರ ರೂ. ಇದೆ!
ಇನ್ನು ರೆಡ್ಮಿ ನೋಟ್ 12 ಪ್ರೊ 5ಜಿ ಫೋನ್ 17,999 ರೂ. ಗಳಿಗೇ ದೊರಕಲಿದೆ. ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 21 ಎಫ್ ಇ 29,999 ರೂ., ಎಫ್ 14 5ಜಿ 9,999 ರೂ., ಮೋಟೋ ಜಿ54 5ಜಿ (256 ಜಿಬಿ) 14,999 ರೂ.ಗೆ ದೊರಕಲಿದೆ. ಗೂಗಲ್ ಪಿಕ್ಸಲ್ 7 36,499 ರೂ.ಗೆ, ನಥಿಂಗ್ ಫೋನ್ 1, 22,999 ರೂ.ಗೆ ಮತ್ತು ನಥಿಂಗ್ ಫೋನ್ 2 32,999 ರೂ.ಗೆ ದೊರಕಲಿದೆ. (ಈಗ ಈ ಫೋನ್ ಬೆಲೆ 44,999 ರೂ. ಇದೆ)
ಇದಲ್ಲದೇ ಫಾಸಿಲ್, ಟೈಟನ್, ಟಾಮಿ ಹಿಲ್ ಫಿಗರ್, ಪೊಲೀಸ್ ನಂಥ ದುಬಾರಿ ವಾಚ್ ಬ್ರಾಂಡ್ ಗಳಿಗೂ ಶೇ. 60ರಷ್ಟು ರಿಯಾಯಿತಿಯನ್ನೂ ಘೋಷಿಸಲಾಗಿದೆ.
ಇದಲ್ಲದೆ ವಾಶಿಂಗ್ ಮೆಷಿನ್ ಗಳು, ಏರ್ ಟಿಕಟ್ ಗಳು, ಸ್ಮಾರ್ಟ್ ವಾಚ್ ಗಳು, ಇಯರ್ ಬಡ್ ಗಳು, ಗ್ರೋಸರಿ ಪದಾರ್ಥಗಳು ರಿಯಾಯಿತಿ ದರದಲ್ಲಿ ದೊರಕಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.