ಫ್ಯೂಚರ್-ಎಸ್
Team Udayavani, Oct 8, 2018, 6:00 AM IST
ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಹೊಸ ಹೊಸ ವಾಹನ ತಯಾರಿಸುವ ಮಾರುತು ಸುಜುಕಿ, ಇದೀಗ ಫ್ಯೂಚರ್-ಎಸ್ ಎಂಬ ಹೊಸ ಕಾರನ್ನು ಉತ್ಪಾದಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗಿರುವ ಈ ಕಾರು, ಉತ್ಪಾದನೆಯ ಹಂತದಲ್ಲೇ ಭಾರೀ ಸದ್ದು ಮಾಡಿದೆ.
ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಮಾರುಕಟ್ಟೆಯ ವ್ಯಾಪ್ತಿ, ಬೇಡಿಕೆ, ಜನಪ್ರಿಯತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿರುವ ಮಾರುತಿ ಸುಜುಕಿ, ಇದೀಗ ನೂತನ ವಿನ್ಯಾಸಕ್ಕೆ ಹೆಚ್ಚಿನ ಒಲವು ತೋರಿಸುತ್ತಿರುವುದು ಗಮನಾರ್ಹ. ಸಾಮಾನ್ಯವಾಗಿ, ನವ್ಯ ವಿನ್ಯಾಸಕ್ಕೆ ಹೆಚ್ಚೇನೂ ಮಹತ್ವ ಕೊಡದೇ ಮಾರುಕಟ್ಟೆಯಲ್ಲಿ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ, ಈಗ ಗ್ರಾಹಕನ ಉಳಿದ ಬೇಡಿಕೆಗಳ ಬಗ್ಗೆಯೂ ಮಹತ್ವ ನೀಡಿ ಬದಲಾವಣೆಗೆ ಮುಂದಾಗಿದೆ.
ಎಸ್‌ಯುವಿ ಸೆಗ್ಮೆಂಟ್ ವಾಹನಗಳ ಸಾಲಿಗೆ ಸೇರಿದ ವಿತಾರಾ ಬ್ರಿàಜಾ ಯಶಸ್ವಿನ ಬಳಿಕ, ಇದೀಗ ಮತ್ತೂಂದು ವಿಭಿನ್ನ ವಿನ್ಯಾಸದ ಮಿನಿ ಎಸ್‌ಯುವಿ ಫ್ಯೂಚರ್-ಎಸ್ ಕಾರನ್ನು ಪರಿಚಯಿಸಲು ಕಂಪನಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರನ್ನು ಪ್ರದರ್ಶಿಸಿರುವ ಕಂಪನಿ, ಈ ಕಾರಿನ ಮೇಲೆ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಂಡಿದೆ.
ಉತ್ಪಾದನೆಯ ವಿಧಾನ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಅಗತ್ಯ ಅಂಶಗಳನ್ನು ರೂಢಿಸಿಕೊಂಡಿರುವ ಮಾರುತಿ ಸುಜುಕಿ, ಈ ಕಾರಿನ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತಾ ಎನ್ನುವುದು ಮಾರುಕಟ್ಟೆಯಲ್ಲಿನ ಸದ್ಯದ ಚರ್ಚಾ ವಿಷಯಗಳಲ್ಲಿ ಒಂದಾಗಿದೆ. ಈ ತನಕ ಮಾರುತಿ ಸುಜುಕಿ ದೇಶದ ಮಧ್ಯಮ ವರ್ಗದವರು ಕೊಂಡುಕೊಳ್ಳುವಂತಹ ಕಾರುಗಳನ್ನು ಪರಿಚಯಯಿಸುವಲ್ಲಿ ಹಾಗೂ ಯಶಸ್ಸು ಸಾಧಿಸುತ್ತಲೇ ಬಂದಿದ್ದು, ಫ್ಯೂಚರ್-ಎಸ್ ಮತ್ತೂಂದು ಯಶಸ್ಸು ತಂದುಕೊಡುವುದರ ಜತೆಗೆ ಸ್ಪರ್ಧಾತ್ಮಕ ದಿನದ ಗ್ರಾಹಕನನ್ನು ಆಕರ್ಷಿಸುವುದೆ? ಎನ್ನುವ ಕುತೂಹಲವಿದೆ.
ಫ್ಯೂಚರ್-ಎಸ್ ವಿನ್ಯಾಸ: ವಿನ್ಯಾಸದಲ್ಲಿ ಫ್ಯೂಚರ್-ಎಸ್ ಕಾರು ವಿಭಿನ್ನವಾಗಿದೆ. ಮೇಲ್ನೋಟಕ್ಕೆ, ಉಳಿದಾವ ಕಂಪನಿಯ ಕಾರುಗಳಿಗೂ ಹೋಲಿಕೆ ಮಾಡಿಕೊಳ್ಳುವಂತಿಲ್ಲ. ಆದರೆ, ಕೆಲವೊಂದು ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಣ್ಣ-ಪುಟ್ಟ ಹೋಲಿಕೆಗಳು ಕಂಡುಬರುತ್ತವೆ. ಮಿನಿ ಎಸ್‌ಯುವಿ ಸೆಗ್ಮೆಂಟ್‌ನ ಈ ಕಾರು ಹ್ಯಾಚ್‌ಬ್ಯಾಕ್ ಮಾದರಿಗಿಂತಲೂ ಬೇರೆಯದೇ ಆದ ಔಟ್‌ಲುಕ್ ಹೊಂದಿದೆ. ಕಾರಿನ ಉದ್ದವನ್ನು ನಾಲ್ಕು ಮೀಟರ್ ಮೀರದಂತೆ ಜಾಣ್ಮೆಯಿಂದ ವಿನ್ಯಾಸಗೊಳಿಸಿದೆ.
ಫ್ರಂಟ್ ಲುಕ್ ಅನ್ನು ತಕ್ಷಣಕ್ಕೆ ಹಳೆಯ ಅಂಬಾಸಿಡರ್ ಕಾರನ್ನು, ಅಕ್ಕ-ಪಕ್ಕದಿಂದ ನೋಡಿದಾಗ ಸ್ವಿಫ್ಟ್ ಕಾರಿನ ಲುಕ್ ನೆನಪಿಸಬಹುದು. ಆದರೆ ಈ ಎರಡೂ ಕಾರುಗಳು ಮಿಶ್ರಣದಂತಿದೆ ಎಂದಾಗಲಿ, ಅವುಗಳ ತದ್ರೂಪಿನಂತಿದೆ ಎಂದಾಗಲಿ ಹೇಳುವಂತಿಲ್ಲ. ಸದ್ಯಕ್ಕಿರುವ ಮಾತಿಯಂತೆ ಕಾರಿನ ಒಳ ವಿನ್ಯಾಸ ಇತ್ತೀಚಿಗಿನ ಕಾರುಗಳಿಗೆ ಸ್ಪರ್ಧೆಯೊಡ್ಡುವಂತಿದೆ. ಚಾಲಕ ಸ್ನೇಹಿಯಾದ ತಂತ್ರಜ್ಞಾನ ಅಳವಡಿಕೆಯಲ್ಲೂ ಒಂದು ಹೆಜ್ಜೆ ಮುಂದುವರಿದೇ ವಿನ್ಯಾಸಗೊಳಿಸಿದೆ. ಇವೆಲ್ಲದರ ಜತೆಗೆ ಅಲಾಯ್ ವೀಲ್‌ಗಳು ಈ ಕಾರ್ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಎಂಜಿನ್ ಸಾಮರ್ಥ್ಯವೇನು?: ಫ್ಯೂಚರ್-ಎಸ್ ಕಾರು ಗಾತ್ರದಲ್ಲಿ ಚಿಕ್ಕದೆನಿಸಿದರೂ, ಸಾಮರ್ಥ್ಯದ ಎಂಜಿನ್ ಒದಗಿಸುವುದರಲ್ಲಿ ಮಾರುತಿ ಸುಜುಕಿ ತನ್ನ ಎಂದಿನ ಸ್ಟ್ಯಾಂಡರ್ಡ್‌ನಲ್ಲಿ ರಾಜಿ ಮಾಡಿಕೊಂಡಿಲ್ಲ. 1.2ಲೀಟರ್ ಜತೆ 1200ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಅಷ್ಟೇ ಅಲ್ಲ, ಗ್ರಾಹಕರ ಅಪೇಕ್ಷೆಯ ಮೇರೆಗೆ ಮುಂಬರುವ ದಿನಗಳಲ್ಲಿ ಬ್ಯಾಟರಿ ಚಾಲಿತ ವ್ಯವಸ್ಥೆಯ ವೇರಿಯಂಟ್ ಕೂಡ ಪರಿಚಯಿಸುವುದಾಗಿ ಕಂಪನಿ ಹೇಳಿಕೊಂಡಿದೆ.
2019ರಲ್ಲಿ ಬಿಡುಗಡೆ?: ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ ಫ್ಯೂಚರ್ ಎಸ್ ಕಾರನ್ನು 2019ರಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ ಬಳಿಕ ಸಿಕ್ಕಿರುವ ಫೀಡ್‌ಬ್ಯಾಕ್ ಪ್ರಕಾರ ಒಂದಿಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.
ಎಕ್ಸ್ ಶೋ ರೂಂ ಬೆಲೆ: ಮಾರುಕಟ್ಟೆಯಲ್ಲಿ ಸದ್ಯಕ್ಕೆ ಚರ್ಚೆಯಾಗುತ್ತಿರುವ ಮಾಹಿತಿಯ ಪ್ರಕಾರ ಈ ಕಾರಿನ ಆರಂಭಿಕ ಬೆಲೆ 4.50 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
* ಗಣಪತಿ ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.