ಬೆಂಗಳೂರಿನಲ್ಲಿ ಮಳಿಗೆ ತೆರೆದ ಯುಎಸ್ ಮೂಲದ ಗಾರ್ಮಿನ್
Team Udayavani, Nov 8, 2022, 8:36 PM IST
ಬೆಂಗಳೂರು: ಅಮೆರಿಕ ಮೂಲಕ ಫಿಟ್‍ನೆಸ್ ಸ್ಮಾರ್ಟ್ ವಾಚ್‍ಗಳ ಬ್ರಾಂಡ್ ಗಾರ್ಮಿನ್ ಬೆಂಗಳೂರಿನ ತನ್ನ ಮೊದಲ ಎಕ್ಸ್ಪೀರಿಯೆನ್ಷಲ್ ಬ್ರ್ಯಾಂಡ್ ಸ್ಟೋರ್ ಆರಂಭಿಸಿದೆ.
ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸಲು ಸ್ಥಾಪಿಸಿರುವ ಈ ಮಳಿಗೆಯು 500 ಚದರ ಅಡಿ ವಿಸ್ತಾರವಾಗಿದ್ದು, ಎಲ್ಲಾ ಫಿಟ್ನೆಸ್ ಉತ್ಸಾಹಿಗಳಿಗೆ ಉತ್ಪನ್ನ ಅನುಭವವನ್ನು ಒದಗಿಸಲು ಸಜ್ಜಾಗಿದೆ.
ಹೊಸ ಬ್ರ್ಯಾಂಡ್ ಮಳಿಗೆಯು ಗಾರ್ಮಿನ್ ನ Fenix 7 ಸರಣಿ, Instinct 2 Solar ಸರಣಿಗಳು, Forerunner 922/255 ಮತ್ತು Venu SQ2 ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಒಳಗೊಂಡಂತೆ ಫಿಟ್ನೆಸ್, ಹೊರಾಂಗಣ, ಆರೋಗ್ಯ-ಆರೈಕೆ ಮುಂತಾದ ವಿಭಾಗಗಳಲ್ಲಿ ಬ್ರ್ಯಾಂಡಿನ ಸಂಪೂರ್ಣ ಉತ್ಪನ್ನ ಸರಣಿಯನ್ನು ಹೊಂದಿದೆ.
ಗ್ರಾಹಕರಿಗೆ ಅದರ ವೈಶಿಷ್ಟ್ಯಗಳೊಂದಿಗೆ ಮಾರ್ಗದರ್ಶನ ನೀಡಲು ಮತ್ತು ಅವರ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚು ಸೂಕ್ತವಾದ ಗ್ಯಾಜೆಟ್ ಆಯ್ಕೆಗೆ ನೆರವಾಗಲು ಬ್ರ್ಯಾಂಡ್ ತಜ್ಞರು ಮಳಿಗೆಯಲ್ಲಿ ಲಭ್ಯವಿರುತ್ತಾರೆ.
ಗಾರ್ಮಿನ್ ದೇಶದಾದ್ಯಂತ ಬ್ರಾಂಡಿನ ರಿಟೇಲ್ ಹೆಜ್ಜೆಗುರುತನ್ನು ಬಲಪಡಿಸುವತ್ತ ಹೆಜ್ಜೆ ಇಟ್ಟಿದೆ, ಹೊಸ ಮಳಿಗೆಯು ಬೆಂಗಳೂರಿನ ಹೃದಯಭಾಗದ ನಂ. 84, ಬ್ರಿಗೇಡ್ ರಸ್ತೆ, ಅಶೋಕ್ ನಗರದಲ್ಲಿದೆ. ಹೊಸ ಮಳಿಗೆಯು ಒಂದೇ ಸೂರಿನಡಿಯಲ್ಲಿ ಕಂಪನಿಯ ಧರಿಸಬಹುದಾದ ಸಾಧನಗಳ ಸಂಪೂರ್ಣ ಶ್ರೇಣಿಯನ್ನು ಹೊಂದಿರುತ್ತದೆ.
ಈ ಶುಭಾರಂಭದೊಂದಿಗೆ, ಭಾರತದಲ್ಲಿ ಗಾರ್ಮಿನ್ ನ ಒಟ್ಟು ಬ್ರಾಂಡ್ ಸ್ಟೋರ್ ಗಳ ಸಂಖ್ಯೆ 3 ಕ್ಕೆ ಏರಲಿದೆ, ಅದರಲ್ಲಿ ಇತರ ಎರಡು ಸ್ಟೋರ್ ಗಳು ಪ್ರಸ್ತುತ ಪುಣೆ ಮತ್ತು ದೆಹಲಿ NCR ನಲ್ಲಿವೆ. ಇದಲ್ಲದೇ, ಹೀಲಿಯೋಸ್ ವಾಚ್ ಸ್ಟೋರ್, ಜಸ್ಟ್ ಇನ್ ಟೈಮ್, ಕ್ರೋಮಾ ಹಾಗೆಯೇ ಆನ್ಲೈನ್ ಪಾಲುದಾರರು ಸೇರಿದಂತೆ ಇತರ ಮಲ್ಟಿಬ್ಯಾಂಡ್ ಸ್ಟೋರ್ ಗಳಂತಹ ಪಾಲುದಾರ ಮಾಧ್ಯಮಗಳ ಮೂಲಕವೂ ಗಾರ್ಮಿನ್ ತನ್ನ ಮಾರಾಟವನ್ನು ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್ ಬೆಳೆಯಲು ಪ್ಲಾನ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.