ಬೆಂಗಳೂರಿನ ಇಂದಿರಾನಗರದಲ್ಲಿ 2ನೇ ಬ್ರಾಂಡ್ ಸ್ಟೋರ್ ಆರಂಭಿಸಿದ ಗಾರ್ಮಿನ್
Team Udayavani, Feb 13, 2023, 9:40 PM IST
ಬೆಂಗಳೂರು: ಸ್ಮಾರ್ಟ್ ವೇರಬಲ್ ಉತ್ಪನ್ನಗಳ ಪ್ರೀಮಿಯಂ ಬ್ರಾಂಡ್ ಆದ ಗಾರ್ಮಿನ್ ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಎರಡನೇ ಬ್ರಾಂಡ್ ಸ್ಟೋರ್ ಅನ್ನು ಆರಂಭಿಸಿದೆ.
ಈ ಹೊಸ ಎಕ್ಸ್ ಪೀರಿಯನ್ಸ್ ಸ್ಟೋರ್ ಗ್ರಾಹಕರಿಗೆ ಗಾರ್ಮಿನ್ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಲಭವಾಗಿ ಖರೀದಿಸಲು ಮತ್ತು ಉತ್ಪನ್ನಗಳ ಅನುಭವ ಪಡೆಯಲು ಪೂರಕವಾಗಿದೆ. 255 ಚದರ ಅಡಿ ವಿಸ್ತೀರ್ಣ ಹೊಂದಿರುವ ಮಳಿಗೆಯು ಎಲ್ಲಾ ಫಿಟ್‌ನೆಸ್ ಉತ್ಸಾಹಿಗಳಿಗೆ ಮೌಲ್ಯವಧಿತ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ. ಗಾರ್ಮಿನ್ ಇಂಡಿಯಾದ ಮುಖ್ಯಸ್ಥ ಯೇಸುದಾಸ್ ಪಿಳ್ಳೈ ಮತ್ತು ಸ್ಟೋರ್ ನ ಮುಖ್ಯಸ್ಥ ರಾಜೇಶ್ ಲುಕಾಡ್ ಸ್ಟೋರ್ ಗೆ ಚಾಲನೆ ನೀಡಿದರು.
ಯೇಸುದಾಸ್ ಪಿಳ್ಳೈ ಮಾತನಾಡಿ, “2022 ರಲ್ಲಿ ಸ್ಮಾರ್ಟ್ ವೇರಬಲ್ಸ್ ಮಾರುಕಟ್ಟೆಯು ಅಗಾಧವಾದ ಬೆಳವಣಿಗೆಯನ್ನು ಕಂಡಿದೆ, ಗಾರ್ಮಿನ್‌ನ ಉನ್ನತ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆ ಆಧಾರಿತ ಸ್ಮಾರ್ಟ್‌ವಾಚ್‌ಗಳ ಅನುಭವ ಹೊಂದಲು ಬೆಂಗಳೂರಿನಲ್ಲಿ ಎರಡನೇ ಬ್ರಾಂಡ್ ಸ್ಟೋರ್ ಅನ್ನು ಆರಂಭಿಸಲಾಗಿದೆ ಎಂದರು.
ಹೊಸ ಮಳಿಗೆಯು ಫಿಟ್‌ನೆಸ್, ಹೊರಾಂಗಣ ಮತ್ತು ವೆಲ್‌ನೆಸ್‌ನಂತಹ ವಿಭಾಗಗಳಾದ್ಯಂತ ಗಾರ್ಮಿನ್ ಸ್ಮಾರ್ಟ್‌ವಾಚ್‌ಗಳ ಸಂಪೂರ್ಣ ಶ್ರೇಣಿಯನ್ನು ಹೊಂದಿದೆ, ಇದರಲ್ಲಿ ಹೊಸದಾಗಿ ಪ್ರಾರಂಭಿಸಲಾದ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್, ಫೆನಿಕ್ಸ್/ಎಪಿಕ್ಸ್ ಸರಣಿ, ಫೋರ್‌ರನ್ನರ್ 955/255, ವೇಣು SQ2 ಮತ್ತು ಇನ್ನೂ ಹೆಚ್ಚಿನವುಗಳು ಗ್ರಾಹಕರಿಗೆ ಲಭ್ಯವಿರುತ್ತವೆ. ಉತ್ಪನ್ನದ ವೈಶಿಷ್ಟ್ಯಗಳು ಮತ್ತು ಆಯ್ಕೆಯೊಂದಿಗೆ ಗ್ರಾಹಕರಿಗೆ ಸಹಾಯ ಮಾಡಲು ಬ್ರ್ಯಾಂಡ್ ತಜ್ಞರು ಅಂಗಡಿಯಲ್ಲಿ ಲಭ್ಯವಿರುತ್ತಾರೆ.
ಅಪ್ರೋಚ್ S62, ಅಪ್ರೋಚ್ S12, Epix Gen2, Venu2, Venu2Plus, Vivomove Sport, Lily, Edge 830&530, Edge, Fenix Solar, ಮುಂತಾದ ಆಯ್ದ ಉತ್ಪನ್ನಗಳ ಮೇಲೆ 10% ವಿಶೇಷ ಉದ್ಘಾಟನಾ ರಿಯಾಯಿತಿಯನ್ನು ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.