ಗೋಲ್ಡ್ ಮೆಡಲ್ ನಿಂದ ಅಲಂಕಾರಿಕ ಶ್ರೇಣಿಯ ಹೂಪ್ಲಾ ಫ್ಯಾನ್‍: ಏನಿದರ ವೈಶಿಷ್ಠ್ಯತೆ?

Team Udayavani, Nov 11, 2021, 4:25 PM IST

ಗೋಲ್ಡ್ ಮೆಡಲ್ ನಿಂದ ಅಲಂಕಾರಿಕ ಶ್ರೇಣಿಯ ಹೂಪ್ಲಾ ಫ್ಯಾನ್‍: ಏನಿದರ ವೈಶಿಷ್ಠ್ಯತೆ?

ವಿದ್ಯುತ್‍ ಸ್ವಿಚ್‍ ಗಳು, ವಿದ್ಯುತ್‍ ವೈರ್ ಮತ್ತಿತರ ವಿದ್ಯುತ್‍ ಉಪಕರಣಗಳ ಬ್ರಾಂಡ್‍ ಆದ ಗೋಲ್ಡ್ ಮೆಡಲ್‍ ಎಲೆಕ್ಟ್ರಿಕಲ್ಸ್ ಸೀಲಿಂಗ್‍ ಫ್ಯಾನ್ ಗಳ ಮಾರುಕಟ್ಟೆಯಲ್ಲೂ ತನ್ನ ಅಸ್ತಿತ್ವ ಪ್ರದರ್ಶಿಸಿದೆ. ಈಗಾಗಲೇ ಏರ್ 9 ಪ್ಲಸ್, ಬ್ರೀಜ್, ಎಕ್ಸೆಲ್, ಲಿವೋ, ನೆಕ್ಸಾ, ಸ್ಪೆನ್ಸರ್, ಮಾಡುಲರ್ ಫೆರ್ರಿಯೋ ಮತ್ತಿತರ ಫ್ಯಾನ್‍ ಗಳನ್ನು ಹೊರತಂದಿದೆ. ಇತ್ತೀಚಿಗೆ ಅದು ಹೂಪ್ಲಾ ಎಂಬ ಅಲಂಕಾರಿಕ ಮಾದರಿಯ ಫ್ಯಾನ್ ಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್‍ ಪರಿಕಲ್ಪನೆಯಡಿ, ಭಾರತೀಯ ಕಂಪೆನಿಯಾದ ಗೋಲ್ಡ್ ಮೆಡಲ್ ಸಂಪೂರ್ಣ ಸ್ವದೇಶಿ ಬಿಡಿಭಾಗಗಳನ್ನು ಬಳಸಿ ಫ್ಯಾನ್‍ ಗಳನ್ನು ತಯಾರಿಸುತ್ತಿದೆ.

3 ಬ್ಲೇಡ್‍ ಗಳ ಈ ಹೂಪ್ಲಾ ಫ್ಯಾನ್‍ 1200 ಎಂಎಂ ಅಳತೆಯ ಬ್ಲೇಡ್‍ ಗಳನ್ನು ಹೊಂದಿದೆ. ಈ ಬ್ಲೇಡ್‍ ಗಳು ಮತ್ತು ಬಾಡಿ ಹೈಗ್ರೇಡ್‍ ಅಲ್ಯುಮೀನಿಯಂ ನಿಂದ ತಯಾರಾಗಿದೆ. ಫ್ಯಾನಿನ ಬ್ಲೇಡ್‍ ಮತ್ತು ಬಾಡಿಯನ್ನು ಧೂಳು ಅಂಟದಂತೆ ವಿನ್ಯಾಸ ಮಾಡಲಾಗಿದೆ. ಫ್ಯಾನಿನ ವಿನ್ಯಾಸ ಗಮನ ಸೆಳೆಯುತ್ತದೆ.

ಹೂಪ್ಲಾ ಫ್ಯಾನ್ 72 ವ್ಯಾಟ್ಸ್ ಮೋಟರ್ ಹೊಂದಿದೆ. ಈ ಮೋಟರ್ ಜೋಡಿ ಬಾಲ್‍ ಬೇರಿಂಗ್‍ ಉಳ್ಳದ್ದಾಗಿದ್ದು, ಮೋಟರ್ ಸಂಪೂರ್ಣ ಹೈಗ್ರೇಡ್‍ ಕಾಪರ್ ವೈಂಡಿಂಗ್‍ ಹೊಂದಿದೆ. ಕಾಪರ್‍ ವೈಂಡಿಂಗ್‍ ಬಾಳಿಕೆಗೆ ಹೆಸರುವಾಸಿಯಾಗಿದೆ.

ವಿಶಾಲವಾದ ಬ್ಲೇಡ್‌ಗಳೊಂದಿಗೆ 230 CMM ಗಾಳಿಯನ್ನು ನೀಡುತ್ತದೆ. ಮೋಟರ್‍ 380 RPM ವೇಗ ಹೊಂದಿದೆ. ಹೀಗಾಗಿ ಕೋಣೆಯ ಹೆಚ್ಚಿನ ಪ್ರದೇಶಕ್ಕೆ ಗಾಳಿ ತಲುಪುತ್ತದೆ. ಕಡಿಮೆ ವಿದ್ಯುತ್‍ ಬಳಸಿಕೊಳ್ಳುತ್ತದೆ. ಹೆಚ್ಚಿನ ಫ್ಯಾನ್‍ ಗಳ ಸಮಸ್ಯೆಯೆಂದರೆ ಅವುಗಳ ಶಬ್ದ. ಮೂರು ಅಥವಾ ನಾಲ್ಕನೇ ನಂಬರ್‍ ಗೆ ಹಾಕಿದಾಗ ಹೆಚ್ಚು ಶಬ್ದ ಮಾಡುತ್ತವೆ. ಅಲ್ಲದೇ ಒಂದು ಅಥವಾ ಎರಡನೇ ಸಂಖ್ಯೆಗೆ ಹೆಚ್ಚು ವೇಗವಾಗಿ ತಿರುಗತೊಡಗುತ್ತವೆ. ಆದರೆ ಹೂಪ್ಲಾದಲ್ಲಿ ಆ ಸಮಸ್ಯೆ ಇಲ್ಲ. ಹೆಚ್ಚು ವೇಗದಲ್ಲೂ ಕಡಿಮೆ ಶಬ್ದ ಹೊಂದಿದೆ.

ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಗೋಲ್ಡ್, ಸಿಲ್ವರ್, ಬ್ಲೂ, ಬ್ರೌನ್ ಮೆಟಾಲಿಕ್‍ ಬಣ್ಣಗಳನ್ನು ಹೊಂದಿದೆ. ಪ್ರೀಮಿಯಂ ವಿನ್ಯಾಸ ಮತ್ತು ಶಕ್ತಿಯುತ ಮೋಟಾರ್ ಹೊಂದಿದೆ. ಐಷಾರಾಮಿ ವಿನ್ಯಾಸ ಹೊಂದಿದ್ದರೂ ಕೈಗೆಟುಕುವ ದರದಲ್ಲಿ ಈ ಫ್ಯಾನನ್ನು ನೀಡುತ್ತಿದ್ದು, ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುವ ಫ್ಯಾನ್‍ ಗಳು ಇವಾಗಿವೆ ಎಂದು ಕಂಪೆನಿ ತಿಳಿಸಿದೆ.

ಫ್ಯಾನ್ ನ ಗರಿಷ್ಠ ಮಾರಾಟ ಬೆಲೆ ರೂ 3450 ರೂ. ಇದೆ. ಹೂಪ್ಲಾ ಫ್ಯಾನ್‍ ಗಳಿಗೆ 2 ವರ್ಷದ ವಾರಂಟಿ ಸಹ ಲಭ್ಯವಿದೆ. ಎಲ್ಲ ಎಲೆಕ್ಟ್ರಿಕಲ್ಸ್ ಮಳಿಗೆಗಳಲ್ಲಿ ದೊರಕುತ್ತದೆ.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.