ಕಂಪ್ಯೂಟರ್‌ನಲ್ಲಿ ಸೂಪರ್ ಸಾಧನೆ : ಕ್ವಾಂಟಮ್ ಸುಪ್ರಿಮಸಿ ಅಭಿವೃದ್ಧಿಪಡಿಸಿದ ಗೂಗಲ್
Team Udayavani, Oct 24, 2019, 6:30 AM IST
ಪ್ಯಾರಿಸ್: ಸಾಮಾನ್ಯ ಕಂಪ್ಯೂಟರುಗಳು 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುವ ಒಂದು ಪ್ರಮೇಯವನ್ನು ಕೇವಲ 200 ಸೆಕೆಂಡುಗಳಲ್ಲಿ ಮುಗಿಸುವ ಕ್ವಾಂಟಮ್ ಸುಪ್ರಿಮಸಿ ಎಂಬ ಸೂಪರ್ ಕಂಪ್ಯೂಟರ್ ಅನ್ನು ಗೂಗಲ್ ರೂಪಿಸಿದೆ. ಆದರೆ ಈ ಕಂಪ್ಯೂಟರ್ ಕೇವಲ 2000 ನೇ ಇಸ್ವಿಯಲ್ಲಿ ಚಾಲ್ತಿಯಲ್ಲಿದ್ದ ಫ್ಲಿಪ್ ಫೋನ್ ರೀತಿ ಕಾಣಿಸುತ್ತದೆ. ಸಾಮಾನ್ಯ ಕಂಪ್ಯೂಟರುಗಳು 1 ಅಥವಾ 0 ಹೊಂದಿರುವ ಬಿಟ್‌ಗಳ ಮೂಲಕ ಕೆಲಸ ಮಾಡುತ್ತವೆ. ಆದರೆ ಕ್ವಾಂಟಮ್ ಕಂಪ್ಯೂಟರುಗಳು 1 ಮತ್ತು 0 ಎರಡನ್ನೂ ಒಂದೇ ಬಾರಿಗೆ ನಿರ್ವಹಿಸುತ್ತವೆ. ಇದರಿಂದ ಅತ್ಯಂತ ವೇಗದಲ್ಲಿ ಕಂಪ್ಯೂಟರ್ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಈ ಸೂಪರ್ ಕಂಪ್ಯೂಟರ್‌ಗಾಗಿ ಸೈಕಾಮೋರ್ ಎಂಬ 54 ಕ್ಯೂಬಿಟ್ ಪ್ರೊಸೆಸರ್ ಅನ್ನು ಗೂಗಲ್ ಅಭಿವೃದ್ಧಿಪಡಿಸಿದೆ. ಸೂಪರ್ ಕಂಪ್ಯೂಟರ್ ವಲಯದಲ್ಲಿ ಇದೊಂದು ಮಹತ್ವದ ಸಾಧನೆ ಎಂದು ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್ ಸಂಶೋಧಕ ವಿಲಿಯಮ್ ಒಲಿವರ್ ಹೇಳಿದ್ದಾರೆ.
ಇದೇ ವೇಳೆ, ಈ ತಂಡದ ಸಾದನೆಯನ್ನು ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಕ್ವಾಂಟಮ್ ಸುಪ್ರಿಮಸಿಯನ್ನು ಮಶಿನ್ ಲರ್ನಿಂಗ್, ಕ್ವಾಂಟಮ್ ಕೆಮಿಸ್ಟ್ರಿ ಹಾಗೂ ಇತರ ತಂತ್ರಜ್ಞಾನಗಳಿಗೆ ಬಳಸಿಕೊಳ್ಳಲು ಗೂಗಲ್ ಸಂಶೋಧಕರು ಯತ್ನಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಕ್ವಾಂಟಮ್ ಪ್ರೊಸೆಸರ್‌ಗಳನ್ನು ಇತರ ಸಂಶೋಧಕರು ಹಾಗೂ ಸಂಸ್ಥೆಗಳಿಗೆ ಒದಗಿಸಲಿದ್ದು, ಅವು ಈ ಸೌಲಭ್ಯ ಬಳಸಿಕೊಂಡು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಬಹುದು. ಎನ್‌ಕ್ರಿಪ್ಷನ್ ಸಾಫ್ಟ್ವೇರ್ ಮತ್ತು ಕೃತಕ ಬುದ್ಧಿಮತ್ತೆ ಈ ಇದನ್ನು ಬಳಸಿಕೊಳ್ಳಬಹುದು.
ಈ ಮಧ್ಯೆಯೇ ಉತ್ತಮ ಹಾರ್ಡ್‌ವೇರ್ ಮತ್ತು ಸುಧಾರಿತ ತಾಂತ್ರಿಕತೆ ಬಳಸಿಕೊಂಡರೆ ಈ ಕ್ವಾಂಟಮ್ ಸುಪ್ರಿಮಸಿಯು ಇನ್ನಷ್ಟು ವೇಗವಾಗಿರಲಿದೆ ಎಂದು ಗೂಗಲ್ ವಿಜ್ಞಾನಿಗಳೇ ಹೇಳಿದ್ದಾರೆ. ಇದೇ ವೇಳೆ, ಕಳೆದ ತಿಂಗಳು ಈ ಕುರಿತ ವರದಿ ಸೋರಿಕೆಯಾದಾಗ ಸಾಫ್ಟ್ವೇರ್ ಕಂಪೆನಿ ಐಬಿಎಂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.