![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 10, 2022, 10:52 AM IST
ವಾಷಿಂಗ್ಟನ್: ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಲ್ಲಿ ಗೂಗಲ್ ನಿಷೇಧಿಸಿದೆ.
ಈ ನಿಷೇಧಿತ ಅಪ್ಲಿಕೇಶನ್ ಗಳಲ್ಲಿ 10 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾದ ಮುಸ್ಲಿಂ ಪ್ರಾರ್ಥನೆ ಅಪ್ಲಿಕೇಶನ್‌ಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್ ಮತ್ತು ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಗಳು ಸೇರಿವೆ. ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಆ್ಯಪ್ ನಲ್ಲಿ ಡೇಟಾ-ಸ್ಕ್ರ್ಯಾಪಿಂಗ್ ಕೋಡ್ ಒಳಗೊಂಡಿರುವುದು ಕಂಡುಬಂದಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಈಗ ಗೂಗಲ್ ಪ್ಲೇ ಸ್ಟೋರ್ ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ನಿಖರವಾದ ಸ್ಥಳ ಮಾಹಿತಿ, ಇಮೇಲ್ ಮತ್ತು ಫೋನ್ ಸಂಖ್ಯೆಗಳು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ವಿಡಿಯೋ ಬ್ಲ್ಯಾಕ್‌ಮೇಲ್: ಕಬಾಬ್ ಕತೆ ಹೇಳಿ ಸಂಗತಿ ಮುಚ್ಚಿಟ್ಟ ಬಾಲಕಿ
ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ಆಕ್ರಮಣಕಾರಿ ಕೋಡ್ ಅನ್ನು ಇಬ್ಬರು ಸಂಶೋಧಕರು ಕಂಡುಹಿಡಿದ್ದಾರೆ. ಸೆರ್ಜ್ ಈಗೆಲ್‌ಮನ್ ಮತ್ತು ಜೋಯಲ್ ರಿಯರ್ಡನ್ ಎಂಬಿಬ್ಬರು ಆಪ್‌ಸೆನ್ಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಮೊಬೈಲ್ ಆ್ಯಪ್ ಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸುವ ಕೆಲಸ ಮಾಡುತ್ತಾರೆ. ಇವರು 2021 ರಲ್ಲಿ ತಮ್ಮ ಸಂಶೋಧನೆಗಳೊಂದಿಗೆ ಗೂಗಲ್ ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.