ಮನೆಯಲ್ಲಿರಿ, ಸುರಕ್ಷಿತವಾಗಿರಿ, ಗೂಗಲ್ ಡೂಡಲ್ ಮೂಲಕ ಆಟವಾಡಿ !

ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಜನಪ್ರಿಯ ಮತ್ತು ಹಳೆಯ ಡೂಡಲ್‌ ಗಳ ಸರಣಿಯನ್ನು ಮತ್ತೆ ಪ್ರಸ್ತುತಪಡಿಸುತ್ತಿದೆ

Team Udayavani, Apr 29, 2020, 8:51 AM IST

google-doodle

ನ್ಯೂಯಾರ್ಕ್ : ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಜನಪ್ರಿಯ ಮತ್ತು ಹಳೆಯ ಡೂಡಲ್‌ಗಳ ಸರಣಿಯನ್ನು ಮತ್ತೆ ಪ್ರಸ್ತುತಪಡಿಸುತ್ತಿದೆ. ಇದರಲ್ಲಿ ವಿಶೇಷತೆ ಏನೆಂದರೇ ಗೇಮಿಂಗ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿದ್ದು  ದಿನಕ್ಕೊಂದು ಆಟವನ್ನು ಆಡುವ ಮೂಲಕ ಮನರಂಜನೆಯನ್ನು ಪಡೆಯಬಹುದು.

ಲಾಕ್‌ಡೌನ್ ಇರುವುದರಿಂದ, ಮನೆಯಲ್ಲೇ ಇರುವ ಸಂದರ್ಭದಲ್ಲಿ, ಹೊರಗಡೆ ಹೋಗಬೇಡಿ, ಒಳಾಂಗಣ ಆಟದಲ್ಲಿ ತೊಡಗಿಸಿಕೊಳ್ಳಿ ಎಂದು ಗೂಗಲ್ ಹೇಳಿದೆ. ಜತೆಗೆ ದಿನಕ್ಕೊಂದು ಆಕರ್ಷಕ, ಜನಪ್ರಿಯ ಹಳೆಯ ಡೂಡಲ್ ಸರಣಿಯನ್ನು ಕೂಡ ಪ್ರಕಟಿಸುತ್ತಿದ್ದು, ಈ ಬಾರಿ ಕ್ರೀಯಾಶೀಲತೆಯನ್ನು ಬಳಸಿಕೊಂಡು ಕ್ರಿಕೆಟ್ ಡೂಡಲ್ , ಫಿಶ್ ಚಿಂಗರ್, ಕೋಡಿಂಗ್ ಅನ್ನು ಈಗಾಗಲೇ  ಪ್ರಸ್ತುತಪಡಿಸಿದೆ.

ಸೋಮವಾರ, ಏ. 27ರಂದು ಗೂಗಲ್ ತನ್ನ ಮುಖಪುಟದ ಡೂಡಲ್‌ನಲ್ಲಿ ಕೋಡಿಂಗ್ ಗೇಮ್ ಅನ್ನು ಪ್ರಕಟಿಸಿದರೆ, ಮಂಗಳವಾರ ಜನಪ್ರಿಯ ಕ್ರಿಕೆಟ್ ಡೂಡಲ್ ಅನ್ನು ಪರಿಚಯಿಸಿದೆ.  ಬುಧವಾರ(ಏ.29) ದಂದು ಫಿಶ್ ಚಿಂಗರ್ ಎಂಬ ಸಂಗೀತ ವೈವಿಧ್ಯವನ್ನು ಪರಿಚಯಿಸಿದೆ. ಇದು ಸರಣಿಯಾಗಿ ಮುಂದುವರೆಯುತ್ತಿದ್ದು ಜನರಿಗೆ ಲಾಕ್ ಡೌನ್ ಅವಧಿಯಲ್ಲಿ  ಮನರಂಜನೆ ನೀಡುವುದಷ್ಠೇ ಉದ್ದೇಶ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ಹೊರಗಡೆ ಹೋಗಬೇಡಿ ಎಂದು ಗೂಗಲ್ ತಿಳಿಸಿದೆ.

2017ರಲ್ಲಿ ಪ್ರಕಟಿಸಿದ್ದ, 50 ಇಯರ್ಸ್ ಆಫ್ ಕಿಡ್ಸ್‌ ಕೋಡಿಂಗ್ ಎಂಬುದು ಬಹು ಆಕರ್ಷಣೆ ಪಡೆದಿತ್ತು. ಕಂಪ್ಯೂಟರ್ ಮತ್ತು ಐಟಿ ಕ್ಷೇತ್ರದಲ್ಲಿ ಕೋಡಿಂಗ್ ಅತ್ಯಂತ ಪ್ರಮುಖವಾಗಿದ್ದು, ಅದರ ಮಹತ್ವ ಸಾರುವ ಮತ್ತು ಮಕ್ಕಳಿಗೆ ವಿಶೇಷವಾಗಿ ಇಷ್ಟವಾಗುವಂತಹ ರೀತಿಯಲ್ಲಿ ಡೂಡಲ್ ರಚಿಸಲಾಗಿದೆ.

ಗೂಗಲ್ ತೆರೆಯುತ್ತಿದ್ದಂತೆ, ಅಲ್ಲಿರುವ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಡೂಡಲ್ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ನೆಚ್ಚಿನ ಆಟವನ್ನು ನೀವು ಮಿಸ್ ಮಾಡಿಕೊಳ್ಳುತ್ತಿದ್ದರೆ, ಗೂಗಲ್ ಡೂಡಲ್ ಮೂಲಕ ಆಡಬಹುದು . ಈಗಲೂ ಯಾವುದೇ ದಿನವಿಶೇಷವಿರಲಿ, ಗೂಗಲ್ ಅದನ್ನು ಸ್ಮರಣೀಯವಾಗಿಸಲು ಆಕರ್ಷಕ ಡೂಡಲ್ ಪ್ರಸ್ತುತಪಡಿಸುತ್ತದೆ.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.