ಕೋವಿಡ್19 ಕುರಿತು ಜನರನ್ನು ಎಚ್ಚರಿಸಲು ಗೂಗಲ್ ಮ್ಯಾಪ್ ನಿಂದ ಹೊಸ ಫೀಚರ್: ಏನಿದರ ವಿಶೇಷತೆ ?
Team Udayavani, Jun 9, 2020, 8:47 AM IST
ನ್ಯೂಯಾರ್ಕ್: ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಪಸರಿಸುತ್ತಿರುವುದರಿಂದ ಗೂಗಲ್ ತನ್ನ ಮ್ಯಾಪ್ ನಲ್ಲಿ “ಕೋವಿಡ್ -19 ನಿರ್ಬಂಧಿತ ಪ್ರದೇಶ” ಫೀಚರ್ ಅಳವಡಿಸಲು ಮುಂದಾಗಿದೆ ಎಂದು ಆಲ್ಫಾಬೆಟ್ ಇಂಕ್ ಯೂನಿಟ್ ಮಾಹಿತಿ ನೀಡಿದೆ.
ಕೋವಿಡ್ ಸಂಬಂಧಿತ ಪ್ರಯಾಣ ನಿರ್ಬಂಧಗಳ ಕುರಿತು ಬಳಕೆದಾರರನ್ನು ಎಚ್ಚರಿಸಲು ಮತ್ತು ನಿರ್ದಿಷ್ಟ ಸ್ಥಳದಲ್ಲಿ ವೈರಸ್ ಪ್ರಭಾವ ಹೇಗಿದೆ ಎಂಬ ಮಾಹಿತಿ ನೀಡಲು ಈ ಫೀಚರ್ ರೂಪಿಸಲಾಗಿದ್ದು, ಪ್ರವಾಸ ಗಳನ್ನು ಉತ್ತಮವಾಗಿ ಯೋಜಿಸಲು ಇದು ನೆರವಾಗುತ್ತದೆ ಎಂದಿದೆ.
ಮಾತ್ರವಲ್ಲದೆ ಈ ಫೀಚರ್ ನೆರವಿನಿಂದ ನಿರ್ದಿಷ್ಟ ಸಮಯದಲ್ಲಿ ರೈಲು ನಿಲ್ದಾಣ ಜನದಟ್ಟಣೆಯಿಂದ ಕೂಡಿದೆಯೇ ? ಅಥವಾ ನಿರ್ದಿಷ್ಟ ಮಾರ್ಗದಲ್ಲಿ ಬಸ್ಸುಗಳು ಸೀಮಿತ ವೇಳಾಪಟ್ಟಿಯಲ್ಲಿ ಚಲಿಸುತ್ತಿದೆಯೇ ಎಂದು ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಗೂಗಲ್ ಹೇಳಿದೆ.
ಅರ್ಜೆಂಟೀನಾ, ಫ್ರಾನ್ಸ್, ಭಾರತ, ನೆದರ್ಲ್ಯಾಂಡ್ಸ್, ಯುನೈಟೆಡ್ ಸ್ಟೇಟ್ಸ್, ಯುಕೆ ಸೇರಿದಂತೆ ಇತರ ದೇಶಗಳಲ್ಲಿ ಈ ಫೀಚರ್ ಅನ್ನು ಬಳಕೆಗೆ ತರಲಾಗುವುದು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಮಾತ್ರವಲ್ಲದೆ ಈ ಹೊಸ ಫೀಚರ್ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್ ನಿಂದ ಪ್ರಾರಂಭವಾಗುವ ಕೋವಿಡ್-19 ಚೆಕ್ ಪೋಸ್ಟ್ ಗಳ ವಿವರಗಳು ಮತ್ತು ರಾಷ್ಟ್ರೀಯ ಗಡಿಗಳನ್ನು ದಾಟಲು ಇರುವ ನಿರ್ಬಂಧಗಳ ಮಾಹಿತಿಯನ್ನು ಒಳಗೊಂಡಿರುತ್ತದೆ .
ಕಳೆದ ಮೂರು ತಿಂಗಳಿನಿಂದ, ಕಂಪನಿಯು 131 ದೇಶಗಳಲ್ಲಿನ ಶತಕೋಟಿ ಗೂಗಲ್ ಬಳಕೆದಾರರ ಫೋನ್ ಗಳಿಂದ ಸ್ಥಳ ಡೇಟಾವನ್ನು ವಿಶ್ಲೇಷಿಸಿ ಈ ಕ್ರಮವನ್ನು ಕೈಗೊಂಡಿದೆ. ಗೂಗಲ್ ತನ್ನ ಸರ್ಚ್ ಆ್ಯಡ್ ಬ್ಯುಸಿನೆಸ್ ಗೆ ಬಿಲಿಯನ್ ಗಟ್ಟಲೇ ಹೂಡಿಕೆ ಮಾಡಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.