ಹೊಸ ಫೀಚರ್ ಗಳನ್ನು ಪರಿಚಯಿಸಲಿರುವ ಗೂಗಲ್-ಒಪೇರಾ
Team Udayavani, Dec 7, 2019, 5:18 PM IST
ಕ್ಯಾಲಿಫೋರ್ನಿಯಾ / ನಾರ್ವೆ: ತಾಂತ್ರಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಅಂತಹದೇ ಹೊಸ ಸಾಹಸಕ್ಕೆ ಗೂಗಲ್ ಮತ್ತು ಒಪೇರಾ ಸಜ್ಜಾಗಿದ್ದು, ಸರ್ಚ್ ಬ್ರೌಸರ್‌ಗಳಲ್ಲಿ ವಿನೂತನ ಫೀಚರ್ ಗಳನ್ನು ಬಿಡುಗಡೆ ಮಾಡಲಿದೆ.
ಡಾರ್ಕ್ ಮೂಡ್ ಸೌಲಭ್ಯ ಲಭ್ಯ
ಹೊಸ ಗುಣಲಕ್ಷಣಗಳನ್ನು ಪರಿಚಯಿಸಲಿರುವ ಗೂಗಲ್ ಸುದ್ದಿ ಪ್ರಕಾಶಕರಿಗಾಗಿ ನೂತನ ಸಾಧನವೊಂದನ್ನು ಹೊರತರಲಿದ್ದು, ಆಂಡ್ರಾಯ್ಡ ಮೊಬೈಲ್‌ನಲ್ಲಿ ಇತರೆ ಯಾವುದೇ ವೆಬ್ ಪುಟವನ್ನು ಡಾರ್ಕ್ ಮೋಡ್‌ಗೆ ಪರಿವರ್ತಿಸಲು ಒಪೇರಾ ಅನುಮತಿ ನೀಡಲಿದೆ.
ರಿಯಲ್‌ಟೈಮ್ ಕಂಟೆಂಟ್ ಇನ್‌ಸೈಟ್ಸ್ (ಆರ್‌ಸಿಐ)
ಗೂಗಲ್: ರಿಯಲ್‌ಟೈಮ್ ಕಂಟೆಂಟ್ ಇನ್‌ಸೈಟ್ಸ್ ಎಂಬ ಹೊಸ ಫೀಚರ್ ಅನ್ನು ಗೂಗಲ್ ಪರಿಚಯಿಸಲಿದ್ದು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದ ಹೊಸ ಲಕ್ಷಣಗಳನ್ನು ಒಳಗೊಂಡಿದೆ. ಸುದ್ದಿ ಪ್ರಕಾಶಕರಿಗೆ ಆ ಫೀಚರ್ ಉಪಯುಕ್ತವಾಗಲಿದ್ದು, ಟ್ರೆಂಡಿಂಗ್ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಕಾಶಕರಿಗೆ ಹೆಚ್ಚು ನೈಜ-ಸಮಯದ ಅಂಕಿ-ಅಂಶವನ್ನು ಇದು ಒದಗಿಸುತ್ತದೆ ಎಂದು ಗೂಗಲ್ ಅಧಿಕೃತ ಬ್ಲಾಗ್ ತಿಳಿಸಿದೆ. ಸುದ್ದಿ ತಯಾರಕರಿಗೆ ಓದುಗರಿಗೆ ಯಾವ ಲೇಖನಗಳು ಹೆಚ್ಚು ಇಷ್ಟವಾಗಲಿವೆ ಎಂಬುದನ್ನು ಗುರುತಿಸಲು ಆರ್‌ಸಿಐ ನೆರವಾಗಲಿದ್ದು, ಟ್ರೆಂಡಿಂಗ್ ವಿಷಯಗಳೊಂದಿಗೆ ಓದುಗರ ಆಸಕ್ತಿಗಳನ್ನು ಅರಿತುಕೊಂಡು ಸುದ್ದಿಗಳು ಬರುತ್ತಿದ್ದಂತೆ ವಿಷಯವನ್ನು ರಚಿಸುವುದು ಇದರ ಉದ್ದೇಶವಾಗಿದೆ.
ಒಪೇರಾ:ವೆಬ್ ಪುಟಗಳು ಯಾವುದೇ ಆಗಿರಲಿ, ಆದರೆ ಅದನ್ನು ಬಳಸುವಾಗ ನಿಮ್ಮ ಕಣ್ಣುಗಳಿಗೆ ಒತ್ತಡ ಕಡಿಮೆ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೊಸ ನೈಟ್ ಮೋಡ್ ಲಕ್ಷಣದೊಂದಿಗೆ ಆಂಡ್ರಾಯ್ಡ್ ಬ್ರೌಸರ್ ಒಪೇರಾದ ಹೊಸ ಆವೃತ್ತಿ-55 ಬಂದಿದೆ.ಈ ಹೊಸ ಆವೃತ್ತಿಯು ಬಿಳಿ ವೆಬ್ ಪುಟಗಳನ್ನು ಡಾರ್ಕ್ ಆಗಿ ಪರಿವರ್ತಿಸಲು ಅವಕಾಶವಿದೆ. ಬಳಕೆದಾರರು ಬ್ರೌಸರ್‌ನ ಬಣ್ಣವನ್ನು ಸೆಟಿಂಗ್ ಅಲ್ಲಿ ಹೊಂದಿಸಬಹುದು. ಅಲ್ಲದೇ ಮೊಬೈಲ್ ಅಲ್ಲಿರುವ ನೀಲಿ ಬೆಳಕನ್ನು ತಡೆಹಿಡಿಯಲು ಸೂಪರ್-ಡಾರ್ಕ್ ಮೋಡ್ ಸಹ ಇರಲಿದೆ ಎಂದು ಒಪೇರಾ ಅಧಿಕೃತ ಬ್ಲಾಗ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.