ಗೂಗಲ್ ಫೋನ್ ಹೊಸ ಫೀಚರ್: ಇನ್ನು ಯಾರು, ಏಕೆ ಕರೆ ಮಾಡುತ್ತಿದ್ದಾರೆ ಎಲ್ಲವೂ ತಿಳಿಯಲಿದೆ !
Team Udayavani, Sep 9, 2020, 3:37 PM IST
ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್ ಇದೀಗ ತನ್ನ ಪೋನ್ ಆ್ಯಪ್ ನಲ್ಲಿ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇದು ಟ್ರೂ ಕಾಲರ್ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದ್ದು ಅದರೇ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡು ಸಾಕಷ್ಟು ಕುತೂಹಲ ಕೆರಳಿಸಿದೆ.
ಹೌದು. ಗೂಗಲ್ ಫೋನ್ ಆ್ಯಪ್ ನಲ್ಲಿ ವೇರಿಫೈಡ್ ಕಾಲ್ಸ್ (ಪರಿಶೀಲಿಸಲ್ಪಟ್ಟ ಕರೆಗಳು) ಫೀಚರ್ ಬಂದಿದ್ದು, ಇನ್ನು ಮುಂದೆ ಕರೆ ಮಾಡುವವರ ಹೆಸರು, ಕರೆ ಮಾಡಿರುವುದಕ್ಕೆ ಕಾರಣ, ಪ್ರೋಫೈಲ್ ಫೋಟೋ ಅಥವಾ ಲೋಗೋ, ಗೂಗಲ್ ನಿಂದ ದೃಢಿಕರಿಸಲ್ಪಟ್ಟ ಚಿಹ್ನೆ ಎಲ್ಲಾ ಅಂಶಗಳು ಕಾಣಿಸಿಕೊಳ್ಳಲಿದೆ. ಆ ಮೂಲಕ ವಂಚನೆಯ ಕರೆಗಳನ್ನು ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿದೆ.
ವೇರಿಫೈಡ್ ಕಾಲ್ಸ್ ಎಂಬುದು Google Phone Appನ ಹೊಸ ಫೀಚರ್. ಹಲವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಇದು ಇನ್ ಬಿಲ್ಟ್ ಆ್ಯಪ್ ಆಗಿದೆ. ಅದಾಗ್ಯೂ ಒಂದು ವಾರದ ನಂತರ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಸಿಗಲಿದೆ. ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
ಮಾತ್ರವಲ್ಲದೆ ಈ ಫೀಚರ್ ಅನ್ನು ಭಾರತವೂ ಸೇರಿದಂತೆ ಅಮೆರಿಕಾ, ಮೆಕ್ಸಿಕೋ, ಬ್ರೆಜಿಲ್, ಸ್ಪೇನ್ ದೇಶಗಳಲ್ಲಿ ಪ್ರಥಮವಾಗಿ ಜಾರಿಗೆ ತರಲಾಗಿದೆ. ತದನಂತರ ಉಳಿದ ದೇಶಗಳಲ್ಲಿ ಬಳಕೆಗೆ ಸಿಗಲಿದೆ. ಕಳೆದ 5 ತಿಂಗಳಿನಿಂದ ಈ ಫೀಚರ್ ಪರೀಕ್ಷೆಗೊಳಪಟ್ಟಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ಗೂಗಲ್ ತಿಳಿಸಿದೆ.
ಅದಾಗ್ಯೂ ಸುರಕ್ಷತೆಗಾಗಿ ಮಾತ್ರ ಈ ಫೀಚರ್ ಜಾರಿಗೆ ತಂದಿದ್ದು, ಗೂಗಲ್ ಯಾವುದೇ ರೀತಿಯಲ್ಲೂ ವ್ಯಕ್ತಿಗಳ ವ್ಯಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಫೀಚರ್ ಸುಲಭವಾಗಿ ಕರೆ ಮಾಡುವವರ ಕುರಿತು ಮಾಹಿತಿ ನೀಡುತ್ತದೆ. ಇದರಿಂದ ಅನಗತ್ಯ ಕರೆಗಳ ಕಿರಿ ಕಿರಿಯೂ ತಪ್ಪುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.