ಶಾರ್ಟ್ ವಿಡಿಯೋದತ್ತ ಗೂಗಲ್ ಚಿತ್ತ
ಟಿಕ್ ಟಾಕ್ ಸಂಸ್ಥೆ ಮೊದಲು ಶಾರ್ಟ್ ವಿಡಿಯೋ ಸೌಲಭ್ಯವನ್ನು ಆರಂಭಿಸಿತ್ತು.
Team Udayavani, Jan 2, 2021, 1:50 PM IST
ನವದೆಹಲಿ: ವಿಶ್ವದ ಬೃಹತ್ ಸರ್ಚ್ ಇಂಜಿನ್ ಸೈಟ್ ಆಗಿರುವ ಗೂಗಲ್, ತನ್ನ ಬಳಕೆದಾರರಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಇದೀಗ ಶಾರ್ಟ್ ವಿಡಿಯೋ ಸೌಲಭ್ಯ ನೀಡುವತ್ತ ಚಿಂತನೆ ನಡೆಸಿದೆ.
ಟಿಕ್ ಟಾಕ್ ಸಂಸ್ಥೆ ಮೊದಲು ಆರಂಭಿಸಿದ್ದ ಈ ಶಾರ್ಟ್ ವಿಡಿಯೋ ಸೌಲಭ್ಯವನ್ನು ತದನಂತರ ಇನ್ಸ್ಟಾಗ್ರಾಮ್ ಸೇರಿದಂತೆ ಫೇಸ್ ಬುಕ್ ಜಾಲತಾಣಗಳೂ ಇದನ್ನು ಅಳವಡಿಸಿಕೊಂಡವು. ಇದೀಗ ಈ ಪ್ರಯೋಗಕ್ಕೆ ಗೂಗಲ್ ಕೂಡಾ ಕೈ ಹಾಕಿದ್ದು, ಈ ಸೌಲಭ್ಯದ ಮೂಲಕ ಬೇರೆ ಬೇರೆ ಜಾಲತಾಣಗಳಲ್ಲಿರುವ ವಿಡಿಯೋಗಳನ್ನು ಗೂಗಲ್ ಮೂಲಕ ವೀಕ್ಷಿಸಬಹುದಾಗಿದೆ.
ಮಾಹಿತಿ ಪ್ರಕಾರ ಗೂಗಲ್ ಸರ್ಚ್ ಬಾರ್ ನ ಬಲಭಾಗದಲ್ಲಿ ಶಾರ್ಟ್ ವಿಡಿಯೋ ಎಂಬ ಪ್ರತ್ಯೇಕ ಆಯ್ಕೆಯನ್ನು ನೀಡಲಿದ್ದು, ಈ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ಅದು ಟಿಕ್ ಟಾಕ್ ಅಥವಾ ಇತರ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಓಪನ್ ಆಗಲಿದೆ ಎನ್ನಲಾಗಿದೆ.
ಈ ಶಾರ್ಟ್ ವಿಡಿಯೋ ಸೌಲಭ್ಯವನ್ನು ಆರಂಭಿಸುವ ಕುರಿತಾಗಿ ಚಿಂತನೆಯನ್ನು ನಡೆಸುತ್ತಿದ್ದು ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ . ಸದ್ಯಕ್ಕೆ ಕೆಲವೇ ಕೆಲವು ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ಯಾವುದೇ ಅಧಿಕೃತ ಮಾಹಿತಿಗಳನ್ನು ಈವರೆಗೂ ಗೂಗಲ್ ಸಂಸ್ಥೆ ಹಂಚಿಕೊಂಡಿಲ್ಲ.
ಇದನ್ನೂ ಓದಿ:ಏಪ್ರಿಲ್ 1ಕ್ಕೆ ಯುವರತ್ನ ರಿಲೀಸ್
ಒಂದು ವೇಳೆ ಈ ಹೊಸ ಪ್ರಯೋಗ ಯಶಸ್ವಿಯಾದರೆ ಗೂಗಲ್ ಸಂಸ್ಥೆ ಸದ್ಯಕ್ಕೆ ಈ ಹೊಸ ಸೌಲಭ್ಯವನ್ನು ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರ ನೀಡಲಿದೆ ಹಾಗೂ ಮುಂಬರುವ ದಿನಗಳಲ್ಲಿ ಡೆಸ್ಕ್ ಟಾಪ್ ಸೇರಿದಂತೆ ಇತರ ಬಳಕೆದಾರರಿಗೂ ನೀಡುವ ಸಾದ್ಯತೆಗಳಿವೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.