Googleನ ಹೊಸ ಫೀಚರ್: ಇನ್ನು ನಿಮ್ಮ ಮೊಬೈಲೇ ನೀಡಲಿದೆ ಭೂಕಂಪನದ ಎಚ್ಚರಿಕೆ!
Team Udayavani, Aug 12, 2020, 3:24 PM IST
ನವದೆಹಲಿ: ಭೂಕಂಪನದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಮೊಬೈಲ್ ಫೀಚರ್ ಒಂದನ್ನು ಬಳಕೆಗೆ ತರುವ ಕುರಿತು ಗೂಗಲ್ ಮಾಹಿತಿ ನೀಡಿದೆ. ಈಗಾಗಲೇ ಆ್ಯಂಡ್ರಾಯ್ಡ್ ಆಧಾರಿತ ಭೂಕಂಪನ ಪತ್ತೆ ಹಚ್ಚುವ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಜಾರಿಗೊಳಿಸಲಾಗಿದೆ.
ಆ್ಯಂಡ್ರಾಯ್ಡ್ ಪೋನ್ ಗಳು ಭೂಕಂಪನ ಅಲರ್ಟ್ ಸಿಸ್ಟಮ್ ಅನ್ನು ಒಳಗೊಂಡಿರಲಿದ್ದು, ಈ ಸೌಲಭ್ಯ ಜಗತ್ತಿನಾದ್ಯಂತ ಜನರಿಗೆ ದೊರೆಯುತ್ತದೆ. ಇದರ ಪ್ರಕಾರ ಪ್ರತಿ ಆ್ಯಂಡ್ರಾಯ್ಡ್ ಫೋನ್ ಗಳು ಮಿನಿ ಸಿಸ್ಮೋಮೀಟರ್ ಆಗಿ ಬದಲಾಗುತ್ತದೆ. ಆ ಮೂಲಕ ಜಗತ್ತಿನ ಅತೀ ದೊಡ್ಡ ಭೂಕಂಪನ ಕುರಿತ ಎಚ್ಚರಿಕೆ ನೀಡುವ ನೆಟ್ ವರ್ಕ್ ಇದಾಗಿರಲಿದೆ ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ,
ಈ ಫೀಚರ್ ಅನ್ನು ಮೊದಲು ಕ್ಯಾಲಿಪೋರ್ನಿಯಾದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 700 ಸಿಸ್ಮೋ ಮೀಟರ್ ಗಳನ್ನು ವಿವಿಧೆಡೆ ಅಳವಡಿಸಲಾಗಿತ್ತು. ಈ ಸಮಯದಲ್ಲಿ ಭೂಕಂಪವಾಗುವ 5 ಸೆಕೆಂಡುಗಳಿಗೂ ಮೊದಲು ಭೂಮಿ ಕಂಪಿಸುತ್ತಿರುವ ತರಂಗಾಂತರಗಳನ್ನು ಸಿಸ್ಮೋಮೀಟರ್ ಗಳು ರವಾನಿಸುತ್ತಿದ್ದವು. ಈ 5 ಸೆಕೆಂಡುಗಳು ಜನರ ಪ್ರಾಣ ಉಳಿಸಲು ನೆರವಾಗುವ ಸಾಧ್ಯತೆಯೂ ಇದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.
ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್ ಪೋನ್ ಗಳೂ ಅತೀ ಸಣ್ಣದಾದ ಆ್ಯಕ್ಸಲರೋ ಮೀಟರ್ ಅನ್ನು ಒಳಗೊಂಡಿದ್ದು ಭೂಮಿ ಕಂಪಿಸುವಾಗ ಸಿಗ್ನಲ್ ಗಳನ್ನು ಪಡೆಯಲು ನೆರವಾಗುತ್ತದೆ. ಮಾತ್ರವಲ್ಲದೆ ಯಾವ ಸ್ಥಳದಲ್ಲಿ ಭೂಮಿ ಕಂಪಿಸುತ್ತಿದೆ ಎಂಬ ಮಾಹಿತಿಯನ್ನು ತಿಳಿಯಲು ಸಹಾಯಕವಾಗುತ್ತದೆ.
ಈ ಫೀಚರ್ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ರಾಷ್ಟ್ರಗಳ ಆ್ಯಂಡ್ರಾಯ್ಡ್ ಪೋನ್ ಗಳಿಗೆ ಲಭ್ಯವಾಗುತ್ತದೆ ಎಂದು ಗೂಗಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.