ಸರ್ಕಾರದ ತೆಕ್ಕೆಗೆ ವೊಡಾಫೋನ್?ಸರ್ಕಾರದ ನಿರ್ಧಾರದಿಂದ ವೊಡಾಫೋನ್ ಗೆ ಏನು ಅನುಕೂಲ
ಟಾಟಾ ಟೆಲಿಸರ್ವಿಸಸ್ ಮತ್ತು ಟಿಟಿಎಂಎಲ್ ಕೂಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗುವುದಿಲ್ಲ
Team Udayavani, Jan 13, 2022, 1:17 PM IST
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವೊಡಾಫೋನ್-ಐಡಿಯಾ ಕಂಪನಿಯು ತನ್ನ ತರಂಗಾಂತರದ ಬಡ್ಡಿ ಮತ್ತು ಎಜಿಆರ್ (ಹೊಂದಾಣಿಕೆ ಮಾಡಲಾದ ಆದಾಯ) ಬಾಕಿಯನ್ನು ಷೇರುಗಳಾಗಿ ಪರಿವರ್ತಿಸುವುದಾಗಿ ಮಂಗಳವಾರ ಘೋಷಿಸಿದೆ. ಇದರಿಂದಾಗಿ ಈ ಬಾಕಿ ಎಷ್ಟಿ ದೆಯೋ ಅಷ್ಟು ಮೌಲ್ಯದ ಷೇರು ಗಳು ಕೇಂದ್ರ ಸರ್ಕಾರದ ಪಾಲಾಗಲಿದೆ. ಆಗ ಸರ್ಕಾರವು ಈ ಕಂಪನಿಯ ಅತಿದೊಡ್ಡ ಷೇರುದಾರನಾಗಿ ಹೊರಹೊಮ್ಮಲಿದೆ.
ಸರ್ಕಾರದ ನಿರ್ಧಾರವೇನು?
ವೊಡಾಫೋನ್‌ನ ನಿರ್ವಹಣೆಯಲ್ಲಿ ಸದ್ಯಕ್ಕೆ ಯಾವುದೇ ಪಾತ್ರ ವಹಿಸದಿರಲು ಸರ್ಕಾರ ನಿರ್ಧರಿ ಸಿದೆ. ಕಂಪನಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿ ಬದಲಾಯಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಷ್ಟದಲ್ಲಿರುವ ಕಂಪನಿಯಲ್ಲಿ ಸ್ಥಿರತೆ ಬಂದೊಡನೆ ಅಲ್ಲಿಂದ ನಿರ್ಗಮಿಸುವುದು ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ. ವೊಡಾಫೋನ್ ಐಡಿಯಾ ಮಾತ್ರವಲ್ಲ, ಟಾಟಾ ಟೆಲಿಸರ್ವಿಸಸ್ ಮತ್ತು ಟಿಟಿಎಂಎಲ್ ಕೂಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ವೊಡಾ ಫೋನ್‌ಗೆ ಏನು ಅನುಕೂಲ?
*ಬಾಕಿಯನ್ನು ಷೇರುಗಳ ರೂಪದಲ್ಲಿ ಪಾವತಿಸುವ ನಿರ್ಧಾರದಿಂದಾಗಿ ಸಂಭಾವ್ಯ ಹೂಡಿಕೆದಾರರಲ್ಲಿ ಸ್ಪಷ್ಟನೆ ಸಿಗುತ್ತದೆ ಮತ್ತು ನಂಬಿಕೆ ಮೂಡುತ್ತದೆ.
*4 ವರ್ಷಗಳ ಮೊರಟೊರಿಯಂನಿಂದಾಗಿ ಕಂಪನಿಯು 60 ಸಾವಿರ ಕೋಟಿ ರೂ.ಗಳನ್ನು ಮೀಸಲು ಮೊತ್ತವಾಗಿಡಲು ಸಾಧ್ಯವಾಗುತ್ತದೆ.
*ಬ್ಯಾಂಕ್ ಸಾಲ ಪಾವತಿಸಲು, ತನ್ನ ಜಾಲ ವಿಸ್ತರಿಸಲು ಮತ್ತು 5ಜಿ ಸೇವೆಗೆ ತರಂಗಾಂತರ ಖರೀದಿಸಲು ಈ ಮೊತ್ತವನ್ನು ಬಳಸಬಹುದು.
*ಬಡ್ಡಿ ಮರು ಪಾವತಿ ಮಾಡುವ ಅಗತ್ಯವಿರದ ಕಾರಣ ಹೆಚ್ಚುವರಿ 16,000 ಕೋಟಿ ರೂ. ಉಳಿತಾಯವಾಗುತ್ತದೆ.
* ಎಲ್ಲದಕ್ಕಿಂತಲೂ ಮುಖ್ಯವಾಗಿ ಸರ್ಕಾರದ ಉಪಸ್ಥಿತಿಯು ಕಂಪನಿಯನ್ನು ದೀರ್ಘಾವಧಿ ಉಳಿಯಲು ಸಹಾಯ ಮಾಡುತ್ತದೆ.
* 1.94 ಲಕ್ಷ ಕೋಟಿ ರೂ.ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ ವೊಡಾಫೋನ್ ಗಿದ್ದ ಒಟ್ಟು ಸಾಲದ ಮೊತ್ತ
* 16,000 ಕೋಟಿ ರೂ. ಈಗ ಕಂಪ ನಿಯು ಸರ್ಕಾರಕ್ಕೆ ಪಾವತಿಸಲು ಬಾಕಿಯಿರುವ ಮೊತ್ತ
ವೊಡಾ ಫೋನ್ ಷೇರು ಝೂಮ್
“ಕಂಪನಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ಇರಾದೆ ಸರ್ಕಾರಕ್ಕಿಲ್ಲ’ ಎಂದು ವೊಡಾಫೋನ್ ಐಡಿಯಾ ಸಿಇಒ ರವೀಂದರ್ ಟಕ್ಕರ್ ಹೇಳಿದ್ದೇ ತಡ, ಕಂಪನಿಯ ಷೇರು ಏಕಾಏಕಿ ಜಿಗಿದಿದೆ. ಮಂಗಳವಾರ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರದ ಕಾರಣ, ಷೇರು ಮೌಲ್ಯ ಶೇ.20.53ರಷ್ಟು ಕುಸಿದು 11.80ರೂ.ಗೆ ಇಳಿದಿತ್ತು. ಬುಧವಾರ ಇದು ಶೇ.13ರಷ್ಟು ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.