ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲಿ ಹೊಸ ತಂತ್ರಜ್ಞಾನ ರೂಪಿಸಲು ಸರ್ಕಾರದ ಚಿಂತನೆ
Team Udayavani, Jan 3, 2021, 8:37 PM IST
ನವದೆಹಲಿ: ಭಾರತ ಡಿಜಿಟಲೀಕರಣದ ಹಾದಿಯಲ್ಲಿ ಸಾಗುತ್ತಿದ್ದು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲು ಇಡುತ್ತಿದೆ. ಇದಕ್ಕೆ ಪೂರಕವೆಂಬತೆ ಭಾರತ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಮೆಜಾನ್ ನ ಅಲೆಕ್ಸಾ ಹಾಗೂ ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲೆ ಇ-ಆಡಳಿತ ಸೇವೆಯೊಂದನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದೆ.
ಈ ಕುರಿತಾಗಿ ಕಳೆದ ಶುಕ್ರವಾರ (ಜ. 1) ಸರ್ಕಾರ ಅಮೆಜಾನ್‌ನ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತೆಯೇ ಧ್ವನಿ ಸಹಾಯಕವನ್ನು ಅಭಿವೃದ್ಧಿಪಡಿಸಲು ಬಿಡ್‌ಗಳನ್ನು ಆಹ್ವಾನಿಸಿದೆ.
ವರದಿಗಳ ಪ್ರಕಾರ ಏಐ( ಆರ್ಟಿಫೀಶಿಯಲ್ ಇಂಟಲಿಜೆನ್ಸ್) ಮೂಲದ ಫ್ಲ್ಯಾಟ್ ಫಾರ್ಮ್ ಗಳ ಮುಖಾಂತರ ವಿವಿಧ ಭಾಷೆಗಳಲ್ಲಿ ಸಾರ್ವಜನಿಕರೊಂದಿಗೆ ವ್ಯವಹರಿಸಲು ಸಹಯಕವಾಗುವಂತೆ ಹೊಸ ತಂತ್ರಜ್ಞಾನವನ್ನು ರೂಪಿಸಲಾಗುತ್ತದೆ. ಮಾತ್ರವಲ್ಲದೆ ಈ ತಂತ್ರಜ್ಞಾನ ಸಾರ್ವಜನಿಕರ ಭಾವನೆಗಳನ್ನು ವಿಶ್ಲೇಷಿಸುವುದರ ಜೊತೆಗೆ ಡೇಟಾ ಸಂಗ್ರಹಣೆಗೂ ನೆರವಾಗಲಿದೆ.
ಈ ಕುರಿತಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಗೂಗಲ್ ಆಸಿಸ್ಟೆಂಟ್ ಮಾದರಿಯಲ್ಲಿ ತಂತ್ರಜ್ಞಾನ ರೂಪಿಸಲು ಪ್ರಸ್ಥಾವನೆಗಳನ್ನು ಆಹ್ವಾನಿಸಿದ್ದು, ಇದನ್ನು ಉಮಾಂಗ್( UMANG-Unified Mobile Application for New-age Governanc) ಫ್ಲ್ಯಾಟ್ ಫಾರ್ಮ್ ನಲ್ಲಿ ಅಳವಡಿಸಲು ಮುಂದಾಗಿದೆ. ಈಗಾಗಲೇ ಉಮಾಂಗ್ ನಲ್ಲಿ ಹಲವಾರು ಸರ್ಕಾರಿ ಸೇವೆ ಆಧಾರಿತ ಆ್ಯಪ್ ಗಳು ಕಾರ್ಯನಿರ್ವಹಿಸುತ್ತಿದೆ.
UMANG ನಲ್ಲಿ ಜನರಿಗೆ ಡಿಜಿಟಲ್ ಪ್ಲಾಟ್ ಫಾರ್ಮ್ ನ ಮೂಲಕ ಆಡಳಿತ ಸೇವೆ, ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ಹಲವು ಮಾಹಿತಿಗಳು ಲಭ್ಯವಾಗುತ್ತದೆ.
ಸರ್ಕಾರ ರೂಪಿಸಲು ಮುಂದಾಗಿರುವ ಅಲೆಕ್ಷಾ ಅಥವಾ ಗೂಗಲ್ ಅಸಿಸ್ಟೆಂಟ್ ಮಾದರಿಯ ತಂತ್ರಜ್ಞಾನದಲ್ಲಿ, ಬರಹದ ರೂಪದಲ್ಲಿರುವ ಮಾಹಿತಿಗಳು, ವಾಯ್ಸ್ ಗಳಾಗಿ ಕನ್ ವರ್ಟ್ ಆಗುವುದು. ಜೊತೆಗೆ ಸರ್ಕಾರದ ಯೋಜನೆಗಳು ಮತ್ತು ಸೇವೆಗಳ ಕುರಿತಾಗಿ ನಿಯಮಿತವಾಗಿ ಮಾಹಿತಿ ನೀಡುತ್ತದೆ. ಆದರೇ ಈ ಯೋಜನೆ ಪೂರ್ಣಗೊಳ್ಳಲು ಸರಿಸುಮಾರು ನಾಲ್ಕು ವರುಷಗಳ ಬೇಕಾಗುವುದು ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಆಯುರ್ವೇದಿಕ್ ಔಷಧದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ
ಈ ನಡುವೆ ಅಮೇಜಾನ್ ನ ಅಲೆಕ್ಸಾ ಇತ್ತೀಚೆಗೆ ತನ್ನಲ್ಲಿ ಹೊಸ ಫಿಚರ್ ಅನ್ನು ಅಳವಡಿಸಿಕೊಂಡಿದ್ದು, ಗ್ರೂಪ್ ವಾಯ್ಸ್ ಮತ್ತು ಗ್ರೂಪ್ ವಿಡೀಯೋ ಮತ್ತು ವಾಯ್ಸ್ ಕಾಲ್ ಗಳನ್ನು ಮಾಡುವ ಸೌಲಭ್ಯವನ್ನು ನೀಡಿದೆ. ಈ ಮೂಲಕ ಎಕೋ ಡಿವೈಸ್ ನಲ್ಲಿ ಎಕೋಡಾಟ್, ಎಕೋ ಶೋಗಳನ್ನು ಹೊಂದಿದ್ದರೆ ಅಲೆಕ್ಸಾಗೆ ಆದೇಶ ನೀಡುವ ಮೂಲಕ ಗ್ರೂಪ್ ಕಾಲ್ ಗಳನ್ನು ಮಾಡಬಹುದಾಗಿದೆ. ಆದರೆ ಅಲೆಕ್ಸಾ ದಲ್ಲಿ ನೀವು ಸಂವಹನ ನಡೆಸಲಿರುವ ಗ್ರೂಪ್ ಅನ್ನು ಮೊದಲೇ ನೊಂದಾಯಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.