

Team Udayavani, Nov 13, 2020, 5:30 PM IST
ನವದೆಹಲಿ: ಅತ್ಯಂತ ಜನಪ್ರಿಯ ಆ್ಯಪ್ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಇದರ ಬಳಕೆ ಬಹಳ ಸುಲಭ ಮತ್ತು ಉಚಿತವಾದದ್ದು. ವಿಡಿಯೋ ಕಾಲ್, ವಾಯ್ಸ್ ಮೆಸೇಜ್, ಶೇರಿಂಗ್ ಮಿಡಿಯಾ ಫೈಲ್ಸ್ ಸೇರಿದಂತೆ ಬಳಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕೂಡ ಇದು ಕಲ್ಪಿಸಿದೆ.
ಮಾತ್ರವಲ್ಲದೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಕೂಡ ಇದ್ದು, ನಿಮ್ಮ ಮೆಸೇಜ್ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಇದನ್ನು ವಾಟ್ಸಾಪ್ ಸಂಸ್ಥೆ ಕೂಡ ಓದಲಾಗುವುದಿಲ್ಲ. ಅದಾಗ್ಯೂ ಇಂತಹ ಸೆಕ್ಯೂರ್ ಫೀಚರ್ ವಾಟ್ಸಾಪ್ ಒದಗಿಸಿದ್ದರೂ ಕೆಲವೊಮ್ಮೆ ನೀವು ಕೂಡ ಜಾಗರೂಕತೆ ವಹಿಸಬೇಕಾಗುತ್ತದೆ. ಆ ಮೂಲಕ ವಾಟ್ಸಾಪ್ ಚಾಟ್ ಗಳನ್ನು ಖಾಸಗಿಯಾಗಿರಿಸಿಕೊಳ್ಳಬೇಕಾಗುತ್ತದೆ.
ಎರಡು ಅಂಶಗಳ ದೃಢೀಕರಣ (two-factor authentication): ಈ ವಿಧಾನ ಬಳಸಿಕೊಂಡು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿನ ಅಪ್ಲಿಕೇಶನ್ ಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ಹೊಸ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆದಾಗ, ವೆರಿಫಿಕೇಶನ್ ಕೋಡ್ ಮೂಲಕ ನಿಮ್ಮ ಮೊಬೈಲ್ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಸರಿಯಾದ ಬಳಕೆದಾರರು ಲಾಗಿನ್ ಆಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಕೋಡ್ ಕಳುಹಿಸುವುದು ವಾಟ್ಸಾಪ್ ಗೆ ಅನಿವಾರ್ಯ.
ಒಂದು ವೇಳೆ ಲಾಗಿನ್ ಆಗದೆಯೂ ಏಕಾಏಕಿ ವೇರಿಫಿಕೇಶನ್ ಕೋಡ್ ನಿಮ್ಮ ಮೊಬೈಲ್ ನ ಇನ್ ಬಾಕ್ಸ್ ನಲ್ಲಿ ಕಾಣಿಸಿಕೊಂಡರೇ ಅದನ್ನು ನಿರ್ಲಕ್ಷಿಸಿ. ಮಾತ್ರವಲ್ಲದೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕೂಡಲೇ ಅಕೌಂಟ್ ಸೆಟ್ಟಿಂಗ್ ನಲ್ಲಿ Two step Verification ಎನೇಬಲ್ ಮಾಡಿ.
ನೆನಪಿಡಿ – ನೀವು ಕೇಳದ ಹೊರತು ವಾಟ್ಸಾಪ್ ನಿಮಗೆ ವೇರಿಫಿಕೇಶನ್ ಕೋಡ್ ಕಳುಹಿಸುವುದಿಲ್ಲ.
ಆ್ಯಪ್ ಗಳನ್ನು ಲಾಕ್ ಮಾಡಿ (Lock your app): ಇಂದಿನ ದಿನಗಳಲ್ಲಿ ಹಲವು ಸ್ಮಾರ್ಟ್ ಪೋನ್ ಗಳು ಲಾಕ್ ದ ಆ್ಯಪ್ ಆಯ್ಕೆಯನ್ನು ನೀಡುತ್ತದೆ. ಇಲ್ಲಿ ಕೋಡ್ ಗಳು ಮಾತ್ರವಲ್ಲದೆ ಪಿಂಗರ್ ಪ್ರಿಂಟ್ ಮತ್ತು ಫೇಸ್ ಐಡಿ ಆಯ್ಕೆಯೂ ಕಾಣಿಸಿಕೊಳ್ಳುತ್ತದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಮಾದರಿ ಆಯ್ಕೆಗಳು ಪ್ರತಿಯೊಂದು ಆ್ಯಪ್ ಗಳಿಗಿದ್ದರೆ ಅದನ್ನು ಎನೆಬಲ್ ಮಾಡಿ. ಒಂದು ವೇಳೆ ನೀವು ಫೋನನ್ನು ಎಲ್ಲಾದರೂ ಮರೆತರೂ ಬೇರಾರದರೂ ವಾಟ್ಸಾಪ್ ಸೇರಿದಂತೆ ಇತರ ಪೇಮೆಂಟ್ ಆ್ಯಪ್ ಗಳನ್ನು ಬಳಸುವ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ.
ಚಾಟ್ ಬ್ಯಾಕಪ್ ಆಯ್ಕೆ(Turn off chat backups): ವಾಟ್ಶಪ್ ನಿಮಗೆ ಚಾಟ್ ಗಳನ್ನು ಬ್ಯಾಕಪ್ ಮಾಡುವ ಅವಕಾಶ ಕಲ್ಪಿಸಿದೆ. ಆದರೇ ಈ ಆಯ್ಕೆಯನ್ನು ಟರ್ನ್ ಆಫ್ ಮಾಡುವುದೇ ಒಳಿತು. ಈ ಚಾಟ್ ಗಳು ಸಂಪೂರ್ಣವಾಗಿ ಗೂಗಲ್ ಡ್ರೈವ್ ಅಥವಾ ಐ ಕ್ಲೌಡ್ ನಲ್ಲಿ ಸೇವ್ ಆಗಿರುತ್ತದೆ. ಇವುಗಳನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಅದಾಗ್ಯೂ ಇವು ಸುರಕ್ಷಿತವಾಗಿರುವುದಿಲ್ಲ. ನಿಮ್ಮ ಸ್ಮಾರ್ಟ್ ಫೋನ್ ಇತರರ ಪಾಲಾದರೇ ಬ್ಯಾಕಪ್ ಡೌನ್ ಲೋಡ್ ಮಾಡಕೊಳ್ಳಬಹುದು. ವಾಟ್ಸಾಪ್ ನಿಮಗೆ ಚಾಟ್ ಬ್ಯಾಕಪ್ ಗಾಗಿ ಹಲವು ಆಯ್ಕೆಯನ್ನು ನೀಡಿದೆ. ಯಾವಾಗ ಚಾಟ್ ಬ್ಯಾಕಪ್ ಆಗಬೇಕು ಎಂಬುದನ್ನು ನೀವೇ ನಿರ್ಧರಿಸಿ. ಇದಕ್ಕಾಗಿ Only when i tap Back up ಆಯ್ಕೆಯನ್ನು ಬಳಸುವುದು ಒಳಿತು.
IPL 2025: ಐಪಿಎಲ್ನ ಸಹ ಪ್ರಾಯೋಜಕತ್ವ: ಜಿಯೋಸ್ಟಾರ್ ಜೊತೆ ಕೈಜೋಡಿಸಿದ ಕ್ಯಾಂಪಾ
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.