Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ
45 ಸಾವಿರಕ್ಕೆ ಸ್ನಾಪ್ಡ್ರಾಗನ್ 8s Gen 3 ಪ್ರೊಸೆಸರ್ ಫೋನ್!
Team Udayavani, Jul 24, 2024, 10:19 PM IST
ನವದೆಹಲಿ; ಗುಣಮಟ್ಟ ಮತ್ತು ಬಾಳಿಕೆಯಿಂದ ಹೆಸರಾಗಿರುವ ಆನರ್ ಬ್ರಾಂಡ್, ಆನರ್ 200 ಸರಣಿಯಲ್ಲಿ 2 ಹೊಸ ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್ ಫೋಲಿಯೊವನ್ನು ವಿಸ್ತರಿಸುತ್ತಿರುವ ಆನರ್ 200 ಪ್ರೊ 5ಜಿ ಮತ್ತು ಆನರ್ 200 5ಜಿ ಮಾಡೆಲ್ಗಳನ್ನು ಹೊರತಂದಿದೆ. ಆನರ್ ಗ್ರಾಹಕರಿಗೆ ಈ ಕೆಳಗಿನ ಸೇವಾ ಕೊಡುಗೆಗಳನ್ನು ಸಹ ಒದಗಿಸುತ್ತಿದೆ.
– ಖರೀದಿಸಿದ ದಿನಾಂಕದಿಂದ 6 ತಿಂಗಳೊಳಗೆ ಒಂದು ಬಾರಿ ಆಕ್ಸಿಡೆಂಟಲ್ ಡ್ಯಾಮೇಜ್ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ವಿಮಾ ಸೌಲಭ್ಯವಿದೆ.
– 90% ವರೆಗೆ ಭರವಸೆಯ ಬೈಬ್ಯಾಕ್ ಇನ್ವಾಯ್ಸ್ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾಗಿರುತ್ತದೆ
– 6 ತಿಂಗಳ ವಿಸ್ತರಿತ ವಾರಂಟಿ
– 18 ತಿಂಗಳವರೆಗೆ ಮನೆ ಬಾಗಿಲಿನಿಂದ ಪಿಕಪ್ ಮಾಡುವ ಮೂಲಕ ಉಚಿತ ಸರ್ವೀಸ್ ಸೌಲಭ್ಯ.
– ಉದ್ಯಮದಲ್ಲಿ ಮೊದಲ ಬಾರಿಗೆ 3 ತಿಂಗಳ ಸೈಬರ್ ಭದ್ರತಾ ರಕ್ಷಣೆ (50,000 ವರೆಗೆ)
ಆನರ್ 200 ಸರಣಿಯು ಟ್ರಿಪಲ್-ಕ್ಯಾಮೆರಾ ವ್ಯವಸ್ಥೆಯೊಂದಿಗೆ ಛಾಯಾಗ್ರಹಣದಲ್ಲಿ ಉತ್ತಮವಾಗಿದೆ: 50MP ಪೋರ್ಟ್ರೇಟ್ ಮುಖ್ಯ ಕ್ಯಾಮೆರಾ, 50 MP ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾ, 12 MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50 MP ಪೋರ್ಟ್ರೇಟ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಎರಡೂ ಸಾಧನಗಳು ಎಐ-ಚಾಲಿತ ಕಣ್ಣಿನ ಕಂಫರ್ಟ್ ಮತ್ತು ಅಮೋಲೆಡ್ ಕ್ವಾಡ್ ಕರ್ವ್ಡ್ ಪರದೆ ಹೊಂದಿವೆ. ಆನರ್ 200 ಪ್ರೊನಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಎಸ್ Gen 3 ಮತ್ತು ಆನರ್ 200 ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 7 Gen 3 ಪ್ರೊಸೆಸರ್ ಹೊಂದಿದೆ.
ಆನರ್ 200 ಸರಣಿಯು ಮಿಂಚಿನ ವೇಗದ 100W ವೈರ್ಡ್ ಸೂಪರ್ ಚಾರ್ಜ್ ಹೊಂದಿದೆ, ಕೇವಲ 41 ನಿಮಿಷಗಳಲ್ಲಿ ಆನರ್ 200 ಪ್ರೊ ಅನ್ನು ಚಾರ್ಜ್ ಮಾಡುತ್ತದೆ. ಪ್ರೊ ರೂಪಾಂತರವು 66W ವೈರ್ ಲೆಸ್ ಚಾರ್ಜ್ ಬೆಂಬಲಿಸುತ್ತದೆ. 5200 ಎಂಎಎಚ್ನ , ಸೆಕೆಂಡ್ ಜನರೇಷನ್ನ ಸಿಲಿಕಾನ್ ಕಾರ್ಬನ್ ಬ್ಯಾಟರಿ ಹೊಂದಿದೆ.
ಆನರ್ 200 ಪ್ರೊ 5ಜಿ ಬೆಲೆ 12 ಜಿಬಿ, 512 ಜಿಬಿಗೆ 57,999 ರೂ. ಇದ್ದು, ಅಮೆಜಾನ್.ಇನ್ ನಲ್ಲಿ 10 ಸಾವಿರ ರೂ. ಕೂಪನ್ ಡಿಸ್ಕೌಂಟ್ ಹಾಗೂ 3 ಸಾವಿರ ರೂ. ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್ ಇದೆ. ಅಂತಿಮವಾಗಿ 45 ಸಾವಿರ ರೂ.ಗೆ ದೊರಕುತ್ತದೆ.
ಆನರ್ 200 5ಜಿ, 12 GB + 512 GB ಬೆಲೆ 39,999 ರೂ ಇದ್ದು, ಇದಕ್ಕೆ 3 ಸಾವಿರ ರೂ. ಕೂಪನ್ ರಿಯಾಯಿತಿ,ಹಾಗೂ 2000 ರೂ. ಕ್ರೆಡಿಟ್ ಕಾರ್ಡ್ ರಿಯಾಯಿತಿ ಸೇರಿ 35 ಸಾವಿರ ರೂ. ಗೆ ದೊರಕುತ್ತದೆ. ಆನರ್ 200 5ಜಿ 8 ಜಿಬಿ, 256 ಜಿಬಿ ಬೆಲೆ 34,999 ರೂ. ಇದ್ದು, ಇದಕ್ಕೆ ಕೂಪನ್ ಹಾಗೂ ಕ್ರೆಡಿಟ್ ಕಾರ್ಡ್ನಿಂದ 4 ಸಾವಿರ ರೂ. ರಿಯಾಯಿತಿ ಇದ್ದು, 31 ಸಾವಿರ ರೂ.ಗೆ ದೊರಕಲಿದೆ.
ಇದನ್ನೂ ಓದಿ: Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.