ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಾನರ್ V40 5G ಸ್ಮಾರ್ಟ್ ಪೋನ್ ವೈಶಿಷ್ಟ್ಯತೆಗಳೇನು?
Team Udayavani, Jan 22, 2021, 6:31 PM IST
ನವದೆಹಲಿ: ವಾರಗಳ ಹಿಂದೆಯಷ್ಟೇ ತನ್ನ ಫೀಚರ್ ಗಳ ಕುರಿತಾದ ಮಾಹಿತಿ ಸೋರಿಕೆಯ ಬಳಿಕ ಇದೀಗ ಹಾನರ್ V40 5G ಸ್ಮಾರ್ಟ್ ಪೋನ್ ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಹಾನರ್, ಹುವಾಯಿ ಕಂಪನಿಯಿಂದ ಹೊರಬಂದ ಬಳಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾದ ಮೊದಲ ಮೊಬೈಲ್ ಪೋನ್ ಆಗಿದೆ.
ತನ್ನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಈ ಸ್ಮಾರ್ಟ್ ಪೋನ್, 5G ನೆಟ್ ವರ್ಕ್ ಸಪೋರ್ಟ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಬಲಿಷ್ಟ ಡೈಮೆನ್ಸಿಟಿ ಚಿಪ್ ಅನ್ನು ಒಳಗೊಂಡಿದೆ.
V40 5G ಸ್ಮಾರ್ಟ್ ಪೋನ್ ನ ವೈಶಿಷ್ಟ್ಯತೆಗಳು
ಮೀಡಿಯಾ ಟೆಕ್ ಡೈಮೆನ್ಸಿಟಿ 1000+5G ಚಿಪ್ ಸೆಟ್ ನೊಂದಿಗೆ ರೂಪುಗೊಂಡಿರುವ ಈ ಸ್ಮಾರ್ಟ್ ಪೋನ್ ತನ್ನಲ್ಲಿ ಹಲವಾರು ವಿಭಿನ್ನ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಡಿಸ್ ಪ್ಲೇ ವಿನ್ಯಾಸ
ಹೊಸ ಹಾನರ್ V40 5G ಸ್ಮಾರ್ಟ್ ಪೋನ್ ತನ್ನ ಬಲ ಹಾಗೂ ಎಡಭಾರದಲ್ಲಿ ಕರ್ವ್ಡ್ ಜೊತೆಗೆ OLED ಡಿಸ್ ಪ್ಲೇ ಅನ್ನು ಒಳಗೊಂಡಿದೆ. ಅಲ್ಲದೆ ಈ ಮೊಬೈಲ್ ಪೋನ್ ತನ್ನ ಸ್ಕ್ರೀನ್ ನಲ್ಲಿ ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದ್ದು,ಫುಲ್ ಹೆಚ್. ಡಿ ರೆಸ್ಯೂಲೇಷನ್ ಜೊತೆಗೆ 10.7 ಬಿಟ್ ಕಲರ್ ಡೆಪ್ತ್ ಅನ್ನು ಹೊಂದಿದೆ. ಹಾಗೂ ಡಿಸ್ ಪ್ಲೇ ನಲ್ಲಿಯೇ ಇಂಟಿಗ್ರೇಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಇದರಲ್ಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್
ಕ್ಯಾಮರಾ
ಈ ಸ್ಮಾರ್ಟ್ ಪೋನ್ ತನ್ನಲ್ಲಿ 50 MP ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, ಇದರ ಜೊತೆಗೆ 8 MP ಅಲ್ಟ್ರಾ ವೈಡ್ ಕ್ಯಾಮರಾ ಹಾಗೂ 2 MP ಮೈಕ್ರೋ ಲೆನ್ಸ್ ಕ್ಯಾಮರಾವನ್ನು ಒಳಗೊಂಡಿದೆ. ಇನ್ನು ಮುಂಭಾಗದಲ್ಲಿ 16 MP ಕ್ಯಾಮರಾ ಇದ್ದು, ಈ ಕ್ಯಾಮರಾಗಳ ಸಹಾಯದಿಂದ ಸೂಪರ್ ಸ್ಲೋ ಮೋಷನ್ ವಿಡಿಯೋ ಸೇರಿದಂತೆ 4K HDR ಪೋಟೋಗ್ರಾಫಿಯನ್ನು ಮಾಡಬಹುದಾಗಿದೆ. ಲೇಸರ್ ಅಟೊಫೋಕಸ್ ಹಾಗೂ LED ಫ್ಲ್ಯಾಶ್ ಅನ್ನು ಕೂಡ ಈ ಸ್ಮಾರ್ಟ್ ಫೊನ್ ನಲ್ಲಿ ಕಾಣಬಹುದಾಗಿದೆ.
ಬ್ಯಾಟರಿ ಸಾಮರ್ಥ್ಯ
ಹೋನರ್ V40 5G ಸ್ಮಾರ್ಟ್ ಪೋನ್ ಒಟ್ಟು 4,200 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಸೂಪರ್ ಫಾಸ್ಟ್ ವಯರ ಚಾರ್ಜಿಂಗ್ ಜೊತೆಗೆ 50W ಫಾಸ್ಟ್ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಹೊಂದಿದೆ.
ಇದನ್ನೂ ಓದಿ:‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಬಣ್ಣಗಳ ಲಭ್ಯತೆ
ಈ ಸ್ಮಾರ್ಟ್ ಪೋನ್ ಮ್ಯಾಜಿಕ್ ನೈಟ್ ಬ್ಲ್ಯಾಕ್, ಟೈಟಾನಿಯಂ ಸಿಲ್ವರ್, ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಬಳಕೆದಾರರನ್ನು ತಲುಪಲಿದೆ.ಬೆಲೆ: ಹೋನರ್ V40 5G ಸ್ಮಾರ್ಟ್ ಪೋನ್ ಒಟ್ಟು ಎರಡು ರೀತಿಯ ಬೆಲೆಯಲ್ಲಿ ಬಳಕೆದಾರರನ್ನು ತಲುಪಲಿದ್ದು, 8GB RAM +128 GB ಸ್ಟೋರೇಜ್ ಗಾಗಿ 3.559 ಯುವಾನ್ ಹಾಗೂ 8GB RAM +256 GB ಸ್ಟೋರೇಜ್ ಗಾಗಿ 3,999 ಯುವಾನ್ ಗೆ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.