ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಈ ಮಂಟಪದಲ್ಲಿ ಮುಖ್ಯ ಸ್ತಂಭಗಳ ಒಂದು ಗುಂಪು ಮತ್ತು ಹಲವಾರು ಸಣ್ಣ ಸ್ತಂಭಗಳಿವೆ

Team Udayavani, Nov 26, 2024, 4:50 PM IST

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಉದಯವಾಣಿ ಸಮಾಚಾರ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇಗುಲದ ಸಂಗೀತ ಕಂಬಗಳಿಗೆ ಡಿಜಿಟಲ್‌ ಟಚ್‌ ನೀಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿದ್ದು, ಇನ್ನು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮೊಬೈಲ್‌ ಫೋನ್‌ ಗಳಲ್ಲಿಯೇ ಸಪ್ತ ಸ್ವರಗಳ ನಾದ ಕೇಳಬಹುದಾಗಿದೆ.

ಈ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ರಂಗ ಮಂಟಪದಲ್ಲಿರುವ 56 ಸಪ್ತ ಸ್ವರ ಸ್ತಂಭಗಳು. ಇದನ್ನು ಸರಿಗಮ
ಸ್ತಂಭಗಳು ಎಂದೂ ಕರೆಯುವುದುಂಟು. ಸ್ತಂಭಗಳನ್ನು ನಿಧಾನವಾಗಿ ಕೈಯಿಂದ ತಟ್ಟಿದಾಗ ಸಂಗೀತದ ನಾನಾ ಸ್ವರಗಳು
ಹೊರಹೊಮ್ಮುತ್ತವೆ. ಈ ಮಂಟಪದಲ್ಲಿ ಮುಖ್ಯ ಸ್ತಂಭಗಳ ಒಂದು ಗುಂಪು ಮತ್ತು ಹಲವಾರು ಸಣ್ಣ ಸ್ತಂಭಗಳಿವೆ.

ಪ್ರತಿಯೊಂದು ಮುಖ್ಯ ಸ್ತಂಭವೂ ರಂಗ ಮಂಟಪದ ಆಕಾರಕ್ಕೆ ಬೆಂಬಲವಾಗಿ ನಿಲ್ಲುವಂತೆ  ಗೋಚರಿಸುತ್ತದೆ. ಇದರ ಜತೆಗೆ ಮುಖ್ಯ ಸ್ತಂಭ ಗಳನ್ನು ಸಂಗೀತ ವಾದ್ಯಗಳ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗಿದ್ದು, ನೋಡುಗರ ಮನಸೂರೆಗೊಳ್ಳುತ್ತಿದೆ. ಅಲ್ಲದೇ ಪ್ರತಿಯೊಂದು ಮುಖ್ಯ ಸ್ತಂಭವೂ ಏಳು ಸಣ್ಣ ಸ್ತಂಭಗಳಿಂದ  ಸುತ್ತುವರಿದಿದೆ. ಇವು ಸಂಗೀತದ ಸಪ್ತ ಸ್ವರಗಳನ್ನು ಪ್ರತಿನಿಧಿಸುತ್ತವೆ. ಅವುಗಳನ್ನು ಮೀಟಿದಾಗ ನಾನಾ ಸ್ವರಗಳು ಹೊರ ಹೊಮ್ಮುತ್ತವೆ.

ಈ ಹಿನ್ನೆಲೆಯಲ್ಲಿ ಸ್ತಂಭಗಳನ್ನು ಕೈಯಿಂದ ತಟ್ಟಿ ಸಂಗೀತ ಅಲಿಸಲಾಗುತ್ತಿತ್ತು. ಇದರಿಂದ ಪುರಾತನ ಕಂಬಗಳಿಗೆ ಹಾನಿಯಾಗುವ
ಸಂಭವವಿತ್ತು. ಇದನ್ನು ತಪ್ಪಿಸಲು ಪುರಾತತ್ವ ಇಲಾಖೆ ಈಗ ಕ್ಯೂಆರ್‌ ಕೋಡ್‌ ಅಳವಡಿಸಿದೆ. ಆ ಮೂಲಕ ದೇಶ-ವಿದೇಶ
ಪ್ರವಾಸಿಗರನ್ನು ಸೆಳೆ ಯಲು ಮುಂದಾಗಿದೆ. ಈ 56 ಸ್ತಂಭಗಳಿಗೂ ಸೇರಿ ಒಟ್ಟು ಆರು ಕಡೆ ಕೋಡ್‌ಗಳನ್ನು ಆಳವಡಿಸಲು
ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ಕೋಡ್‌ಗಳನ್ನು ಅಳವಡಿಸಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಆರೂ ಕೋಡ್‌ ಗಳು ಕಾರ್ಯನಿರ್ವಹಿಸಲಿವೆ.

ರಹಸ್ಯ ಭೇದಿಸಲು ಕಂಬ ಕತ್ತರಿಸಿದ್ದ ಬ್ರಿಟಿಷರು!

ಅಂದಿನ ಬ್ರಿಟಿಷ್‌ ಅಧಿಕಾರಿಗಳು ಸ್ತಪ ಸ್ವರಗಳ ಸ್ತಂಭಗಳಲ್ಲಿ ಅಡಗಿರುವ ರಹಸ್ಯವನ್ನು ಭೇದಿಸಲು ಯತ್ನಿಸಿದ್ದರು. ಈ ಕುತೂಹಲಕ್ಕೆ ತೆರೆ ಎಳೆಯಲು ಅವರು ಎರಡು ಸಂಗೀತ ಸ್ತಂಭಗಳನ್ನು ಕತ್ತರಿಸಿ, ಅದರೊಳಗಿಂದ ಸಂಗೀತ ಸ್ವರಗಳು ಮೂಡಿ ಬರಲು ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಆದರೆ, ಕಂಬಗಳ ಒಳಗೆ ಏನೂ ಕಂಡು ಬಂದಿಲ್ಲ. ಈ ಎರಡು ಸ್ತಂಭಗಳು ಈಗಲೂ ಹಾಗೇ ಉಳಿದಿವೆ.

ಹಂಪಿಯ ವಿಜಯ ವಿಠಲ್‌ ದೇವಾಲಯದ ರಂಗ ಮಂಟಪದಲ್ಲಿರುವ ಸಂಗೀತ ಕಂಬಗಳಲ್ಲಿ ಹೊರ ಹೊಮ್ಮುವ ನಾದವನ್ನು ಪ್ರವಾಸಿಗರು ಆಲಿಸಲು ಕ್ಯೂಆರ್‌ ಕೋಡ್‌ ಅಳವಡಿಸಲಾಗಿದೆ. ಸ್ಕ್ಯಾನ್‌ ಮಾಡಿ ಸ್ತಪ ಸ್ವರಗಳನ್ನು ಫೋನ್‌ಗಳಲ್ಲಿ ಆಲಿಸಿ ಆನಂದಿಸಬಹುದು.
●ನಿಹಿಲ್‌ದಾಸ್‌, ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ, ಭಾರತೀಯ ಪುರಾತತ್ವ ಇಲಾಖೆ, ಹಂಪಿ ವೃತ್ತ

ಹಂಪಿಗೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಆಗಮಿಸುತ್ತಾರೆ. ಅದರಲ್ಲಿಯೂ ವಿಜಯ ವಿಠಲ್‌ ದೇವಾಲಯವನ್ನು ವೀಕ್ಷಣೆ ಮಾಡದೆ ಅವರು ಮರಳುವುದಿಲ್ಲ. ಈಗ ಪುರಾತತ್ವ ಇಲಾಖೆ ಸಂಗೀತ ಕಂಬಗಳಿಗೆ ಕ್ಯೂ ಆರ್‌ ಕೋಡ್‌ ಅಳವಡಿಸಿದ್ದಾರೆ. ಇದರಿಂದ ಪ್ರವಾಸಿಗರಿಗೆ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
● ವಿರೂಪಾಕ್ಷಿ, ಗೈಡ್‌, ಹಂಪಿ

*ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-

Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

1-hampi-1

Deepawali; ಸರಣಿ‌ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!

16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ

Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.