ರಾಜ್ ಕುಂದ್ರಾ ಪ್ರಕರಣದಲ್ಲಿ “ಹಾಟ್ ಶಾಟ್ಸ್” ಹೆಸರು ಮುಂಚೂಣಿ: ಈ ಆ್ಯಪ್ ನ ಹಿನ್ನೆಲೆಯೇನು ?
ಸ್ಟ್ರೀಮಿಂಗ್ ಅಪ್ಲಿಕೇಶನ್ ‘ಹಾಟ್ ಶಾಟ್ಸ್’ ನ್ನು ಗೂಗಲ್ ಮತ್ತು ಆ್ಯಪಲ್ ಪ್ಲೇ ಸ್ಟೋರ್ ಡಿಲೀಟ್ ಮಾಡಿದೆ.
Team Udayavani, Jul 21, 2021, 8:29 AM IST
ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಒಟ್ಟಾರೇ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ ‘ಹಾಟ್ ಶಾಟ್ಸ್’ ನ್ನು ಗೂಗಲ್ ಮತ್ತು ಆ್ಯಪಲ್ ಪ್ಲೇ ಸ್ಟೋರ್ ಡಿಲೀಟ್ ಮಾಡಿದೆ.
ಇದೀಗ ಈ ಅಪ್ಲಿಕೇಶನ್ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಲಭ್ಯವಿಲ್ಲವಾಗಿದ್ದು, APK ಫೈಲ್ ಗಳು ಮಾತ್ರ ಇತರ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಸಿಗುತ್ತಿದೆ. ಈಗಾಗಲೇ ಇನ್ ಸ್ಟಾಲ್ ಆಗಿರುವ ಮೊಬೈಲ್ ಗಳಲ್ಲಿ ಮಾತ್ರ ಹಾಟ್ ಶಾಟ್ಸ್ ಆ್ಯಪ್ ನ ಕೆಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ.
ಈ ಆ‍್ಯಪ್ ನಲ್ಲಿ ಫೋಟೋಶೂಟ್, ಕಿರುಚಿತ್ರ, ಜಗತ್ತಿನ ಪ್ರಸಿದ್ದ ಸಿನೆಮಾ ತಾರೆಗಳ ಜೀವನ ಶೈಲಿಗಳನ್ನು ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಅಶ್ಲೀಲತೆಯ ಪ್ರಮಾಣವೂ ಹೆಚ್ಚಾಗಿತ್ತು ಎಂದು ವರದಿ ತಿಳಿಸಿದೆ.
ಇದರ ಜೊತೆಗೆ ಜಗತ್ತಿನ ವಿವಿಧ ಮೊಡೆಲ್ ಗಳ ಜೊತೆ ಲೈವ್ ಸಂವಾದವನ್ನು ಈ ಆ್ಯಪ್ ಮೂಲಕ ನಡೆಸಬಹುದಿತ್ತು. ಈ ಆ್ಯಪ್ ‘ಮಿಸ್ ಹಾಟ್ ಶಾಟ್ಸ್ ಕಂಟೆಸ್ಟ್ 2019” ನ್ನು ಕೂಡ ಆಯೋಜಿಸಿತ್ತು ಎಂದು ತಿಳಿದುಬಂದಿದೆ.
ಕಿರುಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿನ ಕೆಲಸದ ನೆಪದಲ್ಲಿ ಹೊಸ ನಟರನ್ನು ಆಮಿಷಕ್ಕೆ ಒಳಪಡಿಸಲಾಗುತಿತ್ತು. ನಂತರ ಅವರ ಇಚ್ಚೆಗೆ ವಿರುದ್ಧವಾಗಿ ನಗ್ನ ಮತ್ತು ಅರೆ-ನಗ್ನ ಚಲನಚಿತ್ರಗಳ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದೇ ಅರೆನಗ್ನ ಚಿತ್ರಗಳನ್ನು ಈ ಹಾಟ್ ಶಾಟ್ಸ್ ಆ್ಯಪ್ ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಮುಂಬೈ ಪೊಲೀಸರು ಅನುಮಾನಿಸಿದ್ದಾರೆ. ಇದೀಗ ಹಾಟ್ ಶಾಟ್ಸ್ ಗೆ ಲಿಂಕ್ ಆಗಿದ್ದ ವೆಬ್ ಸೈಟನ್ನು ಕೂಡ ಡಿಲೀಟ್ ಮಾಡಲಾಗಿದ್ದು, ಡೇಟಾ ಸಂಗ್ರಹ ಮಾಹಿತಿಯ ಪ್ರಕಾರ ಇದು 2019ರ ಮಾರ್ಚ್ ರಂದು ಯುಕೆಯಲ್ಲಿ ನೋಂದಣಿಯಾಗಿತ್ತು.
ಉದ್ಯಮಿ ರಾಜ್ ಕುಂದ್ರಾ ಈ ಹಾಟ್ ಶಾಟ್ಸ್ ಆ್ಯಪ್ ಗೆ ಹಣಕಾಸಿನ ನೆರವು ಒದಗಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಆದರೆ ರಾಜ್ ಕುಂದ್ರಾ ಆ್ಯಪ್ ಉದ್ಯಮದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
Miss HotShot contest 2019? Download the HotShots app and Vote for me! HotShots app available on Play store #rumasharma #hotshotsapp pic.twitter.com/UpMuz0GACO
— Ruma Sharma♕ (@rumasharmaa) August 21, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.