ಸಿದ್ಧವಾಗುತ್ತಿದೆ 150 ಕೆಜಿ ತೂಕ ಹೊರಬಲ್ಲ ಡ್ರೋನ್!
ಬೆಂಗಳೂರಿನ "ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್' ಸಂಸ್ಥೆಯ ಪ್ರಯತ್ನ
Team Udayavani, Dec 13, 2021, 10:25 AM IST
ಸಾಂದರ್ಭಿಕ ಚಿತ್ರ,
ನವದೆಹಲಿ: ಡ್ರೋನ್‌ಗಳ ಮೂಲಕ ಔಷಧ, ಆಹಾರ ಮತ್ತಿತರ ಉಪಯುಕ್ತ ಸಾಮಗ್ರಿಗಳನ್ನು ತಲುಪಿಸುವ ಹೊಸ ಪದ್ಧತಿ ಆರಂಭವಾಗಿದೆ. ಆದರೆ, ಅದರಲ್ಲಿ 1ರಿಂದ 5 ಕೆಜಿ ತೂಕದ ವಸ್ತುಗಳನ್ನು ಮಾತ್ರ ಕಳುಹಿಸಬಹುದಾಗಿದೆ. ಈ ಮಿತಿಯನ್ನು ದೂರಮಾಡಲು ನಿರ್ಧರಿಸಿರುವ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಯೊಂದು, ಸುಮಾರು 150 ಕೆಜಿಯಷ್ಟು ಭಾರವನ್ನು ಹೊತ್ತೂಯ್ಯುವ ಹಾಗೂ ನಿಗದಿತ ದೂರವನ್ನು ಬೇಗನೇ ಕ್ರಮಿಸುವಂಥ ಡ್ರೋನ್ ಒಂದನ್ನು ತಯಾರಿಸಲು ಮುಂದಾಗಿದೆ.
ಬೆಂಗಳೂರಿನ “ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್’ ಸಂಸ್ಥೆಯು ಸ್ಪೈಸ್‌ಜೆಟ್ ಸಂಸ್ಥೆಯೊಂದಿಗೆ ಜಂಟಿಯಾಗಿ “ಹೆವಿ ಲಿಫ್ಟ್’ ಡ್ರೋನ್‌ಗಳನ್ನು ತಯಾರಿಸುತ್ತಿದೆ. ಈ ಡ್ರೋನ್ ಸುಮಾರು 150ಕೆ.ಜಿ ತೂಕದ ಸಾಮಾಗ್ರಿಯನ್ನು 150 ಕಿ.ಮೀ ದೂರದವರೆಗೆ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರಲಿದೆ.
ಸದ್ಯಕ್ಕೆ 150 ಕಿ.ಮೀ. ದೂರದ ಹಾದಿಯನ್ನು ಕ್ರಮಿಸಲು ಸಾಮಾನ್ಯ ಡ್ರೋನ್‌ಗಳು 72 ಗಂಟೆ ತೆಗೆದುಕೊಳ್ಳುತ್ತಿವೆ. ಆದರೆ, ಈ ಡ್ರೋನ್, 8 ರಿಂದ 12 ಗಂಟೆಯೊಳಗೆ ಇಷ್ಟು ದೂರವನ್ನು ಕ್ರಮಿಸುತ್ತವೆ ಎಂದು ಹೇಳಲಾಗಿದೆ. ಹಾಗಾಗಿ, ಇದನ್ನು ಗಂಟೆಗೆ 100ಕಿ.ಮೀ ವೇಗದಲ್ಲಿ ಸಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸೂರ್ಯ ಶಕ್ತಿಯ ಬಳಕೆಯ ವಿಸ್ತಾರಕ್ಕೆ ಪ್ರಯತ್ನ; ಮೋಹನ ಭಾಸ್ಕರ ಹೆಗಡೆ ಕರೆ
ಎಚ್‌ಎಎಲ್ ಸಹಕಾರ:
ಈ ವಿಶೇಷ ಡ್ರೋನ್ ತಯಾರಿಕೆಗೆಂದೇ ಹಿಂದೂಸ್ಥಾನ್ ಏರೋನಾಟಿಕಲ್ ಸಂಸ್ಥೆ(ಎಚ್‌ಎಎಲ್)ನೊಂದಿಗೂ ಕೈ ಜೋಡಿಸಲಾಗಿದೆ. ಎಚ್‌ಎಎಲ್‌ನಲ್ಲಿ ಸೇನಾ ಬಳಕೆಯ ಡ್ರೋನ್‌ಗಳಿಗಾಗಿ ಮಾನವರಹಿತ ವೈಮಾನಿಕ ವಾಹನ(ಯುಎವಿ) ತಯಾರಿಸಲಾಗುತ್ತದೆ. ವಿವಿಧ ಯುಎವಿ ಬಳಸಿ, ಡ್ರೋನ್‌ಗಳನ್ನೂ ತಯಾರಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಈ ಹೊಸ ಡ್ರೋನ್ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ.
ಅಂಕಿ-ಅಂಶ:
150 ಕಿ.ಮೀ. - ಸಂಭಾವ್ಯ ಡ್ರೋನ್ ಪ್ರತಿ ಗಂಟೆಗೆ ಸಾಗಬಲ್ಲ ವೇಗ
8 ರಿಂದ 12- ಎಪ್ಪತ್ತೆರಡು ಕಿ.ಮೀ. ದೂರವನ್ನು ಕ್ರಮಿಸಲು ಡ್ರೋನ್ ತೆಗೆದುಕೊಳ್ಳುವ ಸಮಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.