ಫ್ಯುಯೆಲ್ ಪಂಪ್ ಸಮಸ್ಯೆ ನಿವಾರಣೆ ಹೇಗೆ?
Team Udayavani, May 17, 2019, 6:00 AM IST
ಕಾರುಗಳಲ್ಲಿ ಎಂಜಿನ್ ಚಾಲನೆಗೆ ನಿರಂತರ ಇಂಧನ ಪೂರೈಕೆಯಾಗುತ್ತಿರಬೇಕು. ಇಂಧನ ಅಡೆತಡೆ ಇಲ್ಲದಂತೆ ಪೂರೈಕೆಗೆ ನೆರವಾಗುವುದು ಫ್ಯುಯೆಲ್ ಪಂಪ್‌ಗ್ಳು. ಒಂದು ರೀತಿಯಲ್ಲಿ ವ್ಯಾಕ್ಯೂಮ್ ವ್ಯವಸ್ಥೆಯಂತೆ ಇದು ಕಾರ್ಯನಿರ್ವಹಿಸುತ್ತದೆ. ಟ್ಯಾಂಕ್‌ನಲ್ಲಿ ಜೋಡಣೆಯಾಗಿರುವ ಈ ಫ್ಯುಯೆಲ್ ಪಂಪ್ ಕಾರು ಸುಸ್ಥಿತಿಯಲ್ಲಿರಲು ಅಗತ್ಯ ಕೂಡ. ಫ್ಯುಯೆಲ್ ಪಂಪ್‌ಗ್ಳಲ್ಲಿ ಎರಡು ಮಾದರಿಗಳಿವೆ. ಎಲೆಕ್ಟ್ರಿಕ್ ಮತ್ತು ಮೆಕಾನಿಕಲ್. ಆಧುನಿಕ ಕಾರುಗಳಲ್ಲಿ ಎಲೆಕ್ಟ್ರಿಕ್ ಫ್ಯುಯೆಲ್ ಪಂಪ್‌ಗ್ಳು ಸಾಮಾನ್ಯ. ಆಧುನಿಕ ಫ್ಯುಯೆಲ್ ಪಂಪ್‌ಗ್ಳು ಇಂಧನ ಟ್ಯಾಂಕ್‌ನಿಂದ ಇಂಧನವನ್ನು ಎಳೆದುಕೊಳ್ಳುವುದರೊಂದಿಗೆ ಇಂಧನ ಮತ್ತು ಗಾಳಿಯನ್ನು ಫಿಲ್ಟರ್ ಮಾಡಿ ದಹನಕ್ಕೆ ಅನುಕೂಲ ಮಾಡಿಕೊಡುತ್ತವೆ.
ಫ್ಯುಯೆಲ್ ಪಂಪ್ ಶಬ್ದ
ಕಾರಿನ ಇಗ್ನಿಶನ್ ಆನ್ ಆದ ಕೂಡಲೇ ಒಂದು ಸಣ್ಣ ಮೋಟರ್ ಚಾಲೂ ಆದ ರೀತಿಯ ಶಬ್ದ 2 ಸೆಕೆಂಡ್‌ಗಳ ಕಾಲ ಕೇಳಬಹುದು. ಈ ಶಬ್ದ ನಿಮಗೆ ಸರಿಯಾಗಿ ಕೇಳಿಸದಿದ್ದರೆ, ಕಾರಿನ ಎಲ್ಲ ಗಾಜುಗಳನ್ನು ಬಂದ್ ಮಾಡಿ ಕಾರಿನೊಳಗೆ ಕೂತು ಮತ್ತೆ ಇಗ್ನಿಶನ್ ಆನ್ ಮಾಡಿ. ಒಂದು ವೇಳೆ ಆಗಲೂ ಕೇಳಿಸದಿದ್ದರೆ ಫ್ಯುಯೆಲ್ ಪಂಪ್‌ನಲ್ಲಿ ದೋಷವಿದೆ ಎಂದರ್ಥ. ಫ್ಯುಯೆಲ್ ಪಂಪ್‌ನಲ್ಲಿ ರಿಲೀಫ್ ವಾಲ್ ಎಂದಿದ್ದು, ಇದು ಹಾಳಾದರೆ, ಎಂಜಿನ್‌ಗೆ ಹೆಚ್ಚು ಇಂಧನವನ್ನು ಪೂರೈಸುತ್ತದೆ. ಇದರಿಂದ ಮೈಲೇಜ್ ಕೊರತೆಯಾಗಬಹುದು. ಒಂದು ನಿರ್ದಿಷ್ಟ ವೇಗದಲ್ಲಿ ನೀವು ಹೋಗುತ್ತಿದ್ದರೆ, ಅಕ್ಸಲರೇಟರ್ ಹೆಚ್ಚು ಅದುಮದೆ ಇದ್ದರೂ ಏಕಾಏಕಿ ಕಾರು ಪಿಕಪ್ ಪಡೆದರೆ ಫ್ಯುಯೆಲ್ ಪಂಪ್ ಹಾಳಾಗಿ ಹೆಚ್ಚಿನ ಇಂಧನ ಪೂರೈಸುತ್ತಿದೆ ಎಂದರ್ಥ.
ಪರಿಹಾರವೇನು?
ಇಂಧನ ಪೈಪ್‌ನಲ್ಲಿ ಸಮಸ್ಯೆ, ಕಸ ಸಿಕ್ಕಿಹಾಕಿಕೊಂಡಿದ್ದರೆ, ಅವು ಗಳನ್ನು ಶುಚಿಗೊಳಿಸಬಹುದು. ಆದರೆ ಕಾರ್ಯವೆಸಗದೇ ಇದ್ದ ಸಂದರ್ಭಗಳಲ್ಲಿ ಅವುಗಳನ್ನು ಬದಲಾಯಿಸ ಬೇಕಾಗುತ್ತದೆ. ಫ್ಯುಯೆಲ್ ಪಂಪ್‌ಗ್ಳು ನಾಲ್ಕೈದು ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತವೆ. ಕಲಬೆರಕೆ, ಕೆಟ್ಟ ಇಂಧನದಿಂದ ಸಮಸ್ಯೆಯಾಗಬಹುದು. ಮೆಕ್ಯಾನಿಕ್‌ಗಳು ಇದನ್ನು ಬದಲಿಸಿಕೊಡಬಲ್ಲರು.
ಫ್ಯುಯೆಲ್ ಪಂಪ್ ಹಾಳಾದರೆ ಏನಾಗುತ್ತದೆ?
ಫ್ಯುಯೆಲ್ ಪಂಪ್ ಹಾಳಾದರೆ ಪ್ರಮುಖವಾಗಿ ನಾಲ್ಕು ಸಮಸ್ಯೆಗಳು ಷ್ಟಿಯಾಗಬಹುದು.
ಫ್ಯುಯೆಲ್ ಪಂಪ್‌ನಲ್ಲಿ ಶಬ್ದ
ಸ್ವಲ್ಪ ಕಿಲೋಮೀಟರ್ ಓಡಿದ ಬಳಿಕ ಎಂಜಿನ್ ಸ್ಥಗಿತ (ಇಂಧನ ಸರಿಯಾಗಿ ಪೂರೈಕೆಯಾಗದೆ)
ಎಂಜಿನ್ ಸ್ಟಾರ್ಟ್ ಆಗಲು ಸಮಸ್ಯೆ
ಹೈವೇ ಚಾಲನೆ ವೇಳೆ ಎಂಜಿನ್ ಪವರ್‌ನಲ್ಲಿ ಸಮಸ್ಯೆ
ಏನು ಮಾಡಬೇಕು?
ಫ್ಯುಯೆಲ್ ಪಂಪ್ ಹಾಳಾಗಿರುವುದನ್ನು ಕಂಡುಹುಡುಕಲು ಕೆಲವೊಂದು ವಿಧಾನಗಳಿವೆ.
ಇಂಧನ ಟ್ಯಾಂಕ್ ಪರಿಶೀಲಿಸಿ: ಒಂದು ವೇಳೆ ಕಾರು ಸ್ಟಾರ್ಟ್ ಆಗುತ್ತಿಲ್ಲ ಎಂದಾದರೆ ಮೊದಲು ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲಿಸಿ.
- ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.