ನಿಮ್ಮ ಫೋಟೋವನ್ನು ವಾಟ್ಸಾಪ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬೇಕೆ? ಇಲ್ಲಿದೆ ಸುಲಭ ಉಪಾಯ
Team Udayavani, Mar 19, 2022, 1:09 PM IST
ಹೊಸದಿಲ್ಲಿ: ವಾಟ್ಸಾಪ್ ತನ್ನ ಬಳಕೆದಾರರಿಗೆ 2018 ರಲ್ಲಿ ಮೊದಲ ಬಾರಿಗೆ ಸ್ಟಿಕ್ಕರ್ ಗಳನ್ನು ಒದಗಿಸಿತ್ತು. ಚಾಟ್ (ಸಂಭಾಷಣೆ) ಮಾಡುವಾಗ ಸ್ಟಿಕ್ಕರ್ ಗಳನ್ನು ಬಳಸುವುದು ಇದೀಗ ಜನಪ್ರಿಯವಾಗಿದೆ. ಈ ಹಿಂದೆ, ನಿಮ್ಮ ಚಿತ್ರಗಳನ್ನು ಸ್ಟಿಕ್ಕರ್ ಗಳನ್ನಾಗಿ ರಚಿಸಲು ಮತ್ತು ಕಳುಹಿಸಲು ನೀವು ಮತ್ತೊಂದು ಅಪ್ಲಿಕೇಶನ್ ನ ಸಹಾಯ ಪಡೆಯಬೇಕಿತ್ತು. ಆದರೆ ಇದೀಗ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ನ ಸಹಾಯವಿಲ್ಲದೆ ನಿಮ್ಮ ಸ್ಟಿಕ್ಕರ್ ಅನ್ನು ರಚಿಸಬಹುದು.
ಈ ಹಿಂದೆ, ವಾಟ್ಸಾಪ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಬೇರೆ ಆ್ಯಪ್ ಡೌನ್‌ಲೋಡ್ ಮಾಡಬೇಕಾಗಿತ್ತು. ಆದರೆ ಇನ್ನೂ ವಾಟ್ಸಾಪ್ ನಲ್ಲೇ ಈ ಸೌಲಭ್ಯ ನೀಡಲಾಗಿದೆ.
ಇದನ್ನೂ ಓದಿ:ನೂರು ಕೋಟಿ ರೂ. ಬಾಚಿದ ವಿವೇಕ್ ಅಗ್ನಿಹೋತ್ರಿಯ ‘ದಿ ಕಾಶ್ಮೀರ್ ಫೈಲ್’
ಈ ಫೀಚರ್ ಸದ್ಯ ವಾಟ್ಸಾಪ್ ವೆಬ್‌ನಲ್ಲಿ ಮಾತ್ರ ಲಭ್ಯವಿದೆ. ವಾಟ್ಸಾಪ್ ವೆಬ್ ನ ಸ್ಟಿಕ್ಕರ್ ಫಿಚರ್ ಬಳಸಿಕೊಂಡು ಕಸ್ಟಮ್ ಸ್ಟಿಕ್ಕರ್ ಗಳನ್ನು ಸುಲಭವಾಗಿ ರಚಿಸಬಹುದು. ವಿಶೇಷ ಸಂದರ್ಭಗಳಲ್ಲಿ ನಿಮಗಾಗಿ ಕಸ್ಟಮೈಸ್ ಮಾಡಿದ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ನೀವು ಈ ಹಂತಗಳನ್ನು ಬಳಸಿ ತಯಾರಿಸಬಹುದು.
ಹಂತ 1: ವಾಟ್ಸಾಪ್ ವೆಬ್‌ನಲ್ಲಿ ಯಾವುದೇ ಸಂಭಾಷಣೆ (ಚಾಟ್) ವಿಂಡೋಗೆ ಹೋಗಿ.
ಹಂತ 2: ಅಟ್ಯಾಚ್ ಮೆಂಟ್ ಚಿಹ್ನೆಯನ್ನು ಟ್ಯಾಪ್ ಮಾಡುವ ಮೂಲಕ ಸ್ಟಿಕ್ಕರ್ ಅನ್ನು ಆಯ್ಕ ಮಾಡಿ.
ಹಂತ 3: ಇದು ಈಗ ಫೈಲ್ ಎಕ್ಸ್‌ಪ್ಲೋರರ್ ವಿಂಡೋವನ್ನು ತೆರೆಯುತ್ತದೆ. ವಾಟ್ಸಾಪ್ ಸ್ಟಿಕ್ಕರ್ ಆಗಿ ಪರಿವರ್ತಿಸಲು ಫೋಟೋವನ್ನು ಆಯ್ಕೆ ಮಾಡಿ.
ಹಂತ 4: ಅದರ ನಂತರ, ಬಾಕ್ಸ್ ನ ಮೂಲೆಯನ್ನು ಸರಿಹೊಂದಿಸಿ ಮತ್ತು ಕಳುಹಿಸುವ ಬಾಣವನ್ನು ಸ್ಪರ್ಶಿಸಿ.
ಹಂತ 5: ಬಳಕೆದಾರರು ಸ್ಟಿಕ್ಕರ್ ಅನ್ನು ರೈಟ್ ಕ್ಲಿಕ್ ಮಾಡುವ ಮೂಲಕ ಅಥವಾ ಅದರ ಮೇಲೆ ದೀರ್ಘವಾಗಿ ಒತ್ತುವ ಮೂಲಕ ಉಳಿಸಬಹುದು.
ಹಂತ 6: ಪರ್ಸನಲೈಸ್ಡ್ ವಾಟ್ಸಾಪ್ ಸ್ಟಿಕ್ಕರ್ ಮೇಲೆ ರೈಟ್ ಕ್ಲಿಕ್ ಮಾಡುವ ಮೂಲಕ ಅಥವಾ ದೀರ್ಘವಾಗಿ ಒತ್ತುವ ಮೂಲಕ, ಬಳಕೆದಾರರು ಅದನ್ನು ಉಳಿಸಬಹುದು. ಅದನ್ನು ಉಳಿಸಿದ ನಂತರ, ನೀವು ಅದನ್ನು ನಂತರ ಬಳಸಿಕೊಳ್ಳಬಹುದು.
ಹಂತ 7: ಅಲ್ಲದೆ, ನೀವು ಕಟ್ ಬ್ಯಾಕ್‌ಗ್ರೌಂಡ್‌ನೊಂದಿಗೆ ಫೋಟೋ ತೆಗೆದರೆ, ವಾಟ್ಸಾಪ್ ಸ್ಟಿಕ್ಕರ್‌ಗಳು ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ಕಾಣಿಸುವಂತೆಯೇ ಕಾಣಿಸುವುದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.