ಎಚ್.ಪಿ.ಯಿಂದ ಆಲ್ ಇನ್ ಒನ್ ಪಿಸಿ ಶ್ರೇಣಿ ಬಿಡುಗಡೆ
Team Udayavani, Aug 11, 2022, 1:57 PM IST
ಬೆಂಗಳೂರು: PC ಮತ್ತು TV ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ PC ಗಳ ಹೊಸ ಶ್ರೇಣಿಯನ್ನು HP ಪರಿಚಯಿಸಿದೆ. ಉದ್ಯೋಗಿಗಳಿಗೆ ತಡೆರಹಿತ ಕೆಲಸ ಮತ್ತು ಮನರಂಜನಾ ಅನುಭವವನ್ನು ಇದು ಒದಗಿಸುತ್ತದೆ. ಹೊಸ ಆಲ್-ಇನ್-ಒನ್ PC ಗಳಲ್ಲಿ HP ENVY 34-ಇಂಚು ಮತ್ತು ಪೆವಿಲಿಯನ್ 31.5-ಇಂಚಿನ ಮಾನಿಟರ್ ಹೊಂದಿದ್ದು, ಇಂಟೆಲ್ 11th Gen ಮತ್ತು 12th Gen ನ ಶಕ್ತಿಯುತ ಪ್ರಸೆಸರ್‌ಗಳನ್ನು ಒಳಗೊಂಡಿದೆ. ಇದು ಉದ್ಯೋಗಕ್ಕೆ ಮತ್ತು ಮನರಂಜನೆ – ಹೀಗೆ ಬಹು-ಕಾರ್ಯಗಳಿಗೆ ಸೂಕ್ತವಾಗಿದೆ. ಕೆಲಸದ ನಡುವೆ ಗೇಮಿಂಗ್‌ಗೆ ಬದಲಾಯಿಸಲು ಅಥವಾ ಟಿವಿ ವೀಕ್ಷಿಸಲೂ ಆಯ್ಕೆಗಳನ್ನು ಹೊಂದಿದೆ.
HP ENVY 34-ಇಂಚಿನ ಆಲ್-ಇನ್-ಒನ್ :
ಡಿಸ್‌ಪ್ಲೇ
· ನೀಲಿ ಬೆಳಕನ್ನು ಕಡಿತಗೊಳಿಸುವ ಮತ್ತು ಹೊಂದಾಣಿಕೆ ಮಾಡಬಹುದಾದ ಫಿಲ್ಟರ್ ಜತೆಗೆ, TÜV ಪ್ರಮಾಣೀಕೃತ ಡಿಸ್‌ಪ್ಲೇ.
· 5K ಡಿಸ್‌ಪ್ಲೇ ಜತೆಗೆ 21:9 ಆಕಾರ ಅನುಪಾತವು ಸೃಜನಶೀಲ ಕೆಲಸಗಳಿಗೆ ಸೂಕ್ತವಾಗಿದೆ
ವಿನ್ಯಾಸ
· ಬಿಚ್ಚಬಹುದಾದ, ಮ್ಯಾಗ್ನೆಟಿಕ್ ಕ್ಯಾಮರಾ ಉತ್ತಮ ಕೋನಗಳಿಗಾಗಿ ಬೇರೆ ಬೇರೆ ಸ್ಥಾನಗಳಿಗೆ ಬದಲಾಯಿಸುವ ಸುಲಭ ಅವಕಾಶವನ್ನು ಹೊಂದಿದೆ.
· ಸುಧಾರಿತ ಕ್ಯಾಮೆರಾ ಸಂವೇದಕಗಳು ಮತ್ತು HP ವರ್ಧಿತ ಲೈಟಿಂಗ್ ವೀಡಿಯೊ ಚಾಟ್‌ಗಳನ್ನು ಆಹ್ಲಾದಕರಗೊಳಿಸುತ್ತವೆ.
· ಬೆಳಕಿನ ಪರಿಸ್ಥಿತಿ ಬದಲಾಗುತ್ತಿದ್ದರೂ ವೀಕ್ಷಣೆ ಅನುಭವ ಮತ್ತು ಸೌಕರ್ಯವನ್ನು ಸಕ್ರಿಯಗೊಳಿಸಲು ಆಂಟಿ-ರಿಫ್ಲೆಕ್ಷನ್ ಗ್ಲಾಸ್ ಹೊಂದಿದೆ
· ಅತ್ಯಂತ ತೆಳುವಾದ 3-ಬದಿಯ ಮೈಕ್ರೋ ಎಡ್ಜ್ ಬೆಜೆಲ್ ಡಿಸ್‌ಪ್ಲೇ ಪರಿಣಾಮಕಾರಿ ವಿನ್ಯಾಸದೊಂದಿಗೆ ಸುಂದರವಾಗಿದೆ.
ಕಾರ್ಯಕ್ಷಮತೆ
· 11th Gen 8-Core i9 ಪ್ರೊಸೆಸರ್ ಮತ್ತು NVIDIA® GeForce RTX 3060 ಬಳಕೆದಾರರಿಗೆ ಸೃಜನಶೀಲ ಅಗತ್ಯಗಳನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತದೆ
· 16 MP ಕ್ಯಾಮೆರಾ ಬಿನ್ನಿಂಗ್ ತಂತ್ರಜ್ಞಾನ ಮತ್ತು ದೊಡ್ಡ ಸಂವೇದಕದ ಜೊತೆಗೆ ಉತ್ತಮ ಕಾಂಟ್ರಾಸ್ಟ್ ಮತ್ತು ರೆಸಲ್ಯೂಶನ್ ಹೊಂದಿದೆ.
· HP ಕ್ವಿಕ್ ಡ್ರಾಪ್, ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್, HP ವರ್ಧಿತ ಲೈಟಿಂಗ್ ಮುಂತಾದವು ಸೃಜನಾತ್ಮಕ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
HP ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್:
ಡಿಸ್‌ಪ್ಲೇ
· 31.5-ಇಂಚಿನ UHD ಡಿಸ್‌ಪ್ಲೇ, HDR 400, DCI-P3 98% ಮತ್ತು QHD/sRGB 99% ಹೊಂದಿರುವ ಡಿಸ್‌ಪ್ಲೇ ಇದರ ವೈಶಿಷ್ಟ್ಯವೆನಿಸಿದೆ.
· HP Eyesafe® ಪ್ರಮಾಣೀಕೃತವಿದ್ದು; ಫ್ಲಿಕರ್-ಫ್ರೀ TUV ಪ್ರಮಾಣೀಕೃತ; ಆಂಟಿ-ಗ್ಲೇರ್ ಪ್ಯಾನಲ್ ಹೊಂದಿದೆ
ವಿನ್ಯಾಸ
· ENERGY STAR® ಪ್ರಮಾಣೀಕೃತವಾಗಿದೆ ಮತ್ತು EPEAT® ಸಿಲ್ವರ್‌ನಲ್ಲಿ ನೋಂದಾಯಿಸಲಾಗಿದೆ
· ತೆಳುವಾದ ವಿನ್ಯಾಸವು ಕಡಿಮೆ ಜಾಗದಲ್ಲಿ ಹೊಂದಿಕೊಳ್ಳುತ್ತದೆ. ವೈರ್‌ಲೆಸ್ ಮೌಸ್, ಕೀಬೋರ್ಡ್ ಮತ್ತು ಚಾರ್ಜಿಂಗ್ ಸೌಲಭ್ಯಗಳು ವೈರ್‌ಗಳ ಅಗತ್ಯ ಇಲ್ಲದಂತೆ ಮಾಡುತ್ತದೆ.
ಕಾರ್ಯಕ್ಷಮತೆ
· 12th Gen Intel i5 ಮತ್ತು i7 ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ.
· ಹಲವು HDMI ಪೋರ್ಟ್‌ಗಳ ಕಾರಣದಿಂದ ಎಲ್ಲ ಮನರಂಜನಾ ಅಗತ್ಯಗಳನ್ನು ಒಗ್ಗೂಡಿಸಬಹುದು ಮತ್ತು B&O ಮೂಲಕ ಉತ್ತಮ ಆಡಿಯೋ ಹೊಂದಿದೆ.
· ರಿಮೋಟ್‌ನ ಯುನಿವರ್ಸಲ್ ರಿಮೋಟ್ ಸ್ವಿಚ್ ಮೇಲೆ ಒಂದು ಸಲ ಕ್ಲಿಕ್ ಮಾಡಿದರೆ ಸಾಕು, ಕೆಲಸವನ್ನು ಪ್ಲೇ ಆಗಿ ಪರಿವರ್ತಿಸುವುದು
ಬೆಲೆ ಮತ್ತು ಲಭ್ಯತೆ
· HP ENVY 34-ಇಂಚಿನ ಆಲ್-ಇನ್- ರೂ. 1,75,999/-
· HP ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್ : ರೂ. 99,999/- ಗೆ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.