ಆನ್ ಲೈನ್ ಶಿಕ್ಷಣ ಸಾಂಪ್ರದಾಯಿಕ ತರಗತಿ ಕಲಿಕೆಗೆ ಪೂರಕ: ಎಚ್‍ಪಿ ಸಮೀಕ್ಷೆ
Team Udayavani, Jan 21, 2022, 11:11 AM IST
ಬೆಂಗಳೂರು: HP ಇಂಡಿಯಾ ಫ್ಯೂಚರ್ ಆಫ್ ಲರ್ನಿಂಗ್ ಸ್ಟಡಿ ನಡೆಸಿದ ಸಮೀಕ್ಷೆ ಪ್ರಕಾರ, ಕೋವಿಡ್‍ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್‍ಲೈನ್ ಶಿಕ್ಷಣವು ಮಕ್ಕಳ ಕಲಿಕೆಯನ್ನು ನಿರಂತರಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸಿದೆ.
ಶೇ. 98ರಷ್ಟು ಪೋಷಕರು ಮತ್ತು ಶೇ. 99 ಶಿಕ್ಷಕರು ಆನ್‌ಲೈನ್ ಶಿಕ್ಷಣವು ಕಲಿಕೆಯನ್ನು ಮುನ್ನಡೆಸುತ್ತಿದೆ ಆನ್‌ಲೈನ್ ಕಲಿಕೆಯು ಸಾಂಪ್ರದಾಯಿಕ ತರಗತಿಯ ಕಲಿಕೆಗೆ ಪೂರಕವಾಗಿದೆ ಎಂದು ಶೇ. 91ರಷ್ಟು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಉನ್ನತ ಮಟ್ಟದ ಶಿಕ್ಷಣಕ್ಕಾಗಿ, ಸಾಂಪ್ರದಾಯಿಕ ತರಗತಿಗಳು ಪುನಾರಂಭವಾದ ನಂತರವೂ ಆನ್‌ಲೈನ್ ಕಲಿಕೆಯನ್ನು ಕೆಲವು ರೂಪದಲ್ಲಿ ಮುಂದುವರಿಸಲು ವಿದ್ಯಾರ್ಥಿಗಳು ಬಯಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಆನ್‌ಲೈನ್ ಮತ್ತು ತರಗತಿಯ ಕಲಿಕೆಯನ್ನು ಸಂಯೋಜಿಸಿದಾಗ ಚೆನ್ನಾಗಿ ಅರ್ಥವಾಗುತ್ತದೆ, ಮತ್ತು ದೀರ್ಘಾವಧಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ- ಇವು ವಿದ್ಯಾರ್ಥಿಗಳು ಹೈಬ್ರಿಡ್ ಕಲಿಕೆಗೆ ಆದ್ಯತೆ ನೀಡುವ ಪ್ರಮುಖ ಕಾರಣಗಳಾಗಿ ಹೊರಹೊಮ್ಮಿವೆ.
ಸಾಂಕ್ರಾಮಿಕ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಆಗಾಗ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗುತ್ತದೆ. ಆದರೆ, ಆನ್ ಲೈನ್ ಕಲಿಕೆಯನ್ನು ಅಳವಡಿಸಿದ್ದರಿಂದ ಕಲಿಕೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಂತರವಾಗಿ ಮುಂದುವರಿಯುತ್ತದೆ.
ಸವಾಲಿನ ಈ ಕಾಲದಲ್ಲಿ ತಂತ್ರಜ್ಞಾನವು ಸಹಾಯಕನಾಗಿ ಹೊರಹೊಮ್ಮಿದೆ. ಕಲಿಕೆಯ ಮೇಲೂ ಇದರ ಪ್ರಭಾವ ಗಾಢವಾಗಿದೆ. ಡಿಜಿಟಲ್ ಕಲಿಕೆಯತ್ತ ಒಲವು ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಿದೆ ಎಂದು HP ಇಂಡಿಯಾದ ಎಂಡಿ ಕೇತನ್ ಪಟೇಲ್ ತಿಳಿಸಿದ್ದಾರೆ.
ಮನರಂಜನೆಯಿಂದ ಕಲಿಕೆಯವರೆಗೆ, ಭಾರತವು ಬಹುತೇಕ ವೀಡಿಯೊ-ಫಸ್ಟ್ ದೇಶವಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು (63%), ಶಿಕ್ಷಕರು (57%) ಮತ್ತು ಪೋಷಕರು (61%) ವೀಡಿಯೊ ರೂಪದಲ್ಲಿ ಅಧ್ಯಯನದ ವಸ್ತುವಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ 82% ಶಿಕ್ಷಕರು ಉತ್ತಮ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಹೆಚ್ಚಿನ ಪರಿಕರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಆದರೆ 74% ರಷ್ಟು ಜನರು ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಬಳಸಲು ಮತ್ತು ಅವರ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈಬ್ರಿಡ್ ಕಲಿಕೆಗೆ ಪಿಸಿ ಉತ್ತಮ: ಪ್ರತಿಕ್ರಿಯಿಸಿದವರಲ್ಲಿ, 88% ಶಿಕ್ಷಕರು, 72% ವಿದ್ಯಾರ್ಥಿಗಳು ಮತ್ತು 89% ಪೋಷಕರು ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಲಿಕೆಗೆ ಪಿಸಿಗಳು ಸೂಕ್ತವೆಂದು ನಂಬುತ್ತಾರೆ. ಆನ್‌ಲೈನ್ ಕಲಿಕೆಗಾಗಿ ಪಿಸಿಗಳು ಅಗತ್ಯ ಎಂದು 79% ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಕಣ್ಣಿನ ಮೇಲೆ ಒತ್ತಡ ನಿವಾರಣೆ, ಫೈಲ್‌ಗಳ ತ್ವರಿತ ವರ್ಗಾವಣೆ ಮತ್ತು ಉತ್ತಮ ಕಾರ್ಯನಿರ್ವಹಣೆ ಪಿಸಿಗಳು ಆದರ್ಶ ಆಯ್ಕೆಯಾಗಿ ಹೊರಹೊಮ್ಮಲು ಪ್ರಮುಖ ಕಾರಣಗಳಾಗಿವೆ.
ಪ್ರಿಂಟರ್ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸೃಜನಶೀಲತೆಯನ್ನು ಬೆಂಬಲಿಸುತ್ತದೆ
ಪ್ರತಿಕ್ರಿಯಿಸಿದವರಲ್ಲಿ, 75% ಶಿಕ್ಷಕರು ಕಡತಗಳಿಗೆ ಮತ್ತು ಮನೆಗೆಲಸದ ಸಲ್ಲಿಕೆಗಾಗಿ ಪ್ರಿಂಟರ್‌ಗಳನ್ನು ಬಳಸುವುದಕ್ಕೆ ಆದ್ಯತೆ ನೀಡಿದ್ದಾರೆ. ಪ್ರಿಂಟರ್‌ಗಳಿದ್ದರೆ ಕಲಿಕೆಯ ಫಲಿತಾಂಶವನ್ನು ಸುಧಾರಿಸಬಹುದೆಂದು 82% ವಿದ್ಯಾರ್ಥಿಗಳು ನಂಬುತ್ತಾರೆ. ಇದಲ್ಲದೆ, ಸುಲಭವಾಗಿ ವೀಕ್ಷಿಸಬಹುದಾದ ನೋಟ್ಸ್ ಮತ್ತು ಪ್ರ್ಯಾಕ್ಟೀಸ್ ಶೀಟ್‌ಗಳ ಅನುಕೂಲವು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ನಿಲುವಿಗೆ ಕಾರಣವಾಗಿದೆ.
207 ಶಿಕ್ಷಕರು (ವಯಸ್ಸು: 28 – 50 ವರ್ಷಗಳು), 679 ಪೋಷಕರು (ವಯಸ್ಸು: 30 – 60 ವರ್ಷಗಳು) ಮತ್ತು 711 ವಿದ್ಯಾರ್ಥಿಗಳು (ವಯಸ್ಸು: 14 – 22 ವರ್ಷಗಳು) ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಲಕ್ನೋ, ಚಂಡೀಗಢ, ಪಾಟ್ನಾ, ಗುವಾಹಟಿ, ಇಂದೋರ್, ರಾಂಚಿ ಮತ್ತು ಕೊಚ್ಚಿಯಂತಹ 13 ನಗರಗಳಲ್ಲಿ ಸಂದರ್ಶನಗಳನ್ನು ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.