ಎಚ್‌ಪಿಯ ಹೊಸ ಲ್ಯಾಪ್‌ಟಾಪ್‌ ಪ್ರೊಬುಕ್‌ 635 ಏರೋ ಜಿ 7

512 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್‌ ಇದ್ದು, ಅದನ್ನು 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದು.

Team Udayavani, Jan 27, 2021, 1:26 PM IST

ಎಚ್‌ಪಿಯ ಹೊಸ ಲ್ಯಾಪ್‌ಟಾಪ್‌ ಪ್ರೊಬುಕ್‌ 635 ಏರೋ ಜಿ 7

ಸಾಮಾನ್ಯವಾಗಿ ಭಾರತದ ಗ್ರಾಹಕರಿಗೆ ಲ್ಯಾಪ್‌ಟಾಪ್‌ ಎಂದ ತಕ್ಷಣ ನೆನಪಿಗೆ ಬರುವ ಹೆಸರು ಎಚ್‌ಪಿ ಪರ್ಸನಲ್‌ ಕಂಪ್ಯೂಟರ್‌, ಪ್ರಿಂಟರ್‌ಗಳು, ಲ್ಯಾಪ್‌ಟಾಪ್‌ ಗಳ ಮಾರಾಟದಲ್ಲಿ ತನ್ನದೇ ಸ್ಥಾನವನ್ನು ಎಚ್‌ಪಿ ಗಳಿಸಿಕೊಂಡಿದೆ. ಬಳಕೆದಾರರ ವಿಶ್ವಾಸಾರ್ಹ ಬ್ರಾಂಡ್‌ ಆದ ಎಚ್‌ಪಿ, ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್‌ ಲ್ಯಾಪ್‌ ಟಾಪ್‌ಗ್ಳನ್ನು ಇತ್ತೀಚಿಗಷ್ಟೇ ಮಾರುಕಟ್ಟೆಗೆ ತಂದಿದೆ.

ಇದನ್ನೂ ಓದಿ:ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’

ಲ್ಯಾಪ್‌ಟಾಪ್‌ ಗಳಲ್ಲೂ ಗೇಮಿಂಗ್‌, ಕಂಪನಿಗಳ ಕೆಲಸಗಳು, ಸಾಮಾನ್ಯ ಬಳಕೆಗಾಗಿ ಎಂದು ವಿಂಗಡಿಸಿ ಆಯಾ ಕೆಲಸಗಳಿಗೆ ಬೇಕಾದ ನಮೂನೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎಚ್‌ಪಿ ಇದೀಗ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಲ್ಯಾಪ್‌ಟಾಪ್‌ ಗಳನ್ನು ರೂಪಿಸಲಾಗಿದೆ.

ಈ ಹೊಸ ಮಾಡೆಲ್‌ನ ಹೆಸರು, ಎಚ್‌ಪಿ ಪ್ರೋಬುಕ್‌ 635 ಏರೋ ಜಿ7. ಎಎಂಡಿ ಪ್ರೊಸೆಸರ್‌ ಆಧಾರಿತಅ ತ್ಯಂತ ಹಗುರವಾದ ಬ್ಯುಸಿನೆಸ್‌ ನೋಟ್‌ ಬುಕ್‌ ಆಗಿರುವ ಇದರ ತೂಕ 1 ಕೆ.ಜಿ. ಗಿಂತ ಕಡಿಮೆಯಿದೆ. ಎಎಂಡಿ ರೈಝನ್‌ 4000 ಸರಣಿಯ ಪ್ರೊಸೆಸರ್‌ ಅನ್ನು ಇದಕ್ಕೆ ಬಳಸಲಾಗಿದೆ. ವಿಂಡೋಸ್‌ 10 ಪ್ರೊಫೆಷನಲ್‌ ಆವೃತ್ತಿ ಹೊಂದಿದೆ.

ಎಚ್‌ಪಿ ಏಷ್ಯಾ ಎಸ್‌ಎಂಬಿ ಔಟ್‌ ಲುಕ್‌ ವರದಿ 2020 ರ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಹಂತದ ವ್ಯಾಪಾರ ವ್ಯವಹಾರಗಳು ಕೋವಿಡ್‌ ಪರಿಣಾಮದಿಂದ ತಮ್ಮ ಬಹುತೇಕ ಎಲ್ಲಾ ಬ್ಯಾಂಕಿಂಗ್‌ ವ್ಯವಹಾರಗಳನ್ನು ಡಿಜಿಟಲ್‌ ಗೆ ಪರಿವರ್ತನೆ ಮಾಡಿಕೊಂಡಿವೆ. ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವ ಎಸ್‌ಎಂಬಿಗಳು, ಉದ್ಯಮಿಗಳುಮತ್ತು ಮೊಬೈಲ್‌ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡೇ ಎಚ್‌ಪಿ ಪ್ರೋಬುಕ್‌
635 635 ಏರೋ ಜಿ7 ಅನ್ನು ವಿನ್ಯಾಸಗೊಳಿ ಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಚ್‌ಪಿ ಪ್ರೋಬುಕ್‌ 635 ಏರೋ ಜಿ7 ವೈಶಿಷ್ಟ್ಯಗಳು ಡಿಸ್‌ಪ್ಲೇ: 13.3 ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಪ್ರೋಬುಕ್‌ 635 ಏರೋ ಮೆಗ್ನಿಶಿಯಂ ಮಿಶ್ರಲೋಹದಿಂದ ತಯಾರಿಸಲಾದ ಮೊದಲ ಪ್ರೋಬುಕ್‌ ಆಗಿದ್ದು, ಇದು ಮೆಗ್ನಿàಶಿಯಂನ ಹಗುರ ಮತ್ತು ಅಲ್ಯೂಮೀನಿಯಂನ ಶಕ್ತಿ ಹೊಂದಿದೆ.

ಸಂಪರ್ಕ: ಬಳಕೆದಾರರು ವೈ-ಫೈ 6 ಮತ್ತು ಕ್ಯಾಟ್‌9 ಎಲ್‌ ಟಿಇ ವೈರ್‌ ಲೆಸ್‌ ವಾತಾವರಣದಲ್ಲಿಯೂ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಗಿಗಾಬೈಟ್‌ ವೇಗದಲ್ಲಿ ಸಂಪರ್ಕವನ್ನು ಸುಲಭವಾಗಿ ಸಾಧಿಸಬಹುದು.

ಭದ್ರತೆ: ಎಚ್‌ಪಿ ಶ್ಯೂರ್‌ ವ್ಯೂ ರಿಫ್ಲೆಕ್ ಬಳಕೆದಾರರಿಗೆ ವಿವೇಚನೆಯಿಂದ ಕಾರ್ಯ ನಿರ್ವಹಣೆ ಮಾಡಲು  ಅನುವು ಮಾಡಿಕೊಡುತ್ತದೆ. ಅದರಲ್ಲಿನ ಕಾಪರ್‌ ಬಣ್ಣದ ಪ್ರತಿಫಲಿತ ಗೌಪ್ಯತೆಯ ಪರದೆಯು ವಿಶ್ವದ ಅತ್ಯಾಧುನಿಕ ಗೌಪ್ಯತೆಯಾಗಿದೆ. ಇದು ಪ್ರಕಾಶಮಾನವಾದ ಮತ್ತು ಮಂದ ಬೆಳಕಿನ ಪರಿಸರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ದೀರ್ಘ‌ ಬಾಳಿಕೆಯ ಬ್ಯಾಟರಿ ದೀರ್ಘ‌ ಬಾಳಿಕೆಯ ಬ್ಯಾಟರಿ ಹೊಂದಿದ್ದು 18 ರಿಂದ 23 ಗಂಟೆಗಳ ಕಾಲ ಕೆಲಸ ಮಾಡಬಹುದೆಂದು ಕಂಪನಿ ತಿಳಿಸಿದೆ. ಕೇವಲ 30
ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್‌ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿರುವ ಎಎಂಡಿ ರೈಝೆನ್‌ 4000 ಸೀರೀಸ್‌ ಮೊಬೈಲ್‌ ಪ್ರೊಸೆಸರ್‌ಗೆ, ಎಎಂಡಿ ರೇಡಿಯನ್‌ ವೆಗಾ ಗ್ರಾಫಿಕ್ಸ್ ಸೌಲಭ್ಯವಿದೆ. 8 ಕೋರ್‌ನ ಪ್ರೊಸೆಸರ್‌ ಹೊಂದಿದೆ.

512 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್‌ ಇದ್ದು, ಅದನ್ನು 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದು. 8 ಜಿಬಿ ರ್ಯಾಮ್‌ ಇದ್ದು, 32 ಜಿಬಿವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಇದರ ದರ 74,999 ರೂ. ಗಳಿಂದ ಆರಂಭಗೊಳ್ಳುತ್ತದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಸ್ಟೋರ್‌ ಗಳಲ್ಲಿ ಈ ಲ್ಯಾಪ್‌ ಟಾಪ್‌ ಲಭ್ಯ.

ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.