ಮುಂದಿನ ತಿಂಗಳು ಹುವೈ ಮಡಚುವ ಫೋನ್ ಮಾರುಕಟ್ಟೆಗೆ
ಮಡಿಚಿದರೆ ಮೊಬೈಲ್, ತೆರೆದರೆ ಟ್ಯಾಬ್
Team Udayavani, Sep 29, 2019, 6:47 PM IST
ಬೀಜಿಂಗ್: ದ.ಕೊರಿಯಾದ ಮೊಬೈಲ್ ತಯಾರಿಕೆ ಕಂಪೆನಿ ಸ್ಯಾಮ್ಸಂಗ್ ಮಡಚುವ ಫೋನ್ ಅಲ್ಲಿನ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬೆನ್ನಲ್ಲೇ ಈಗ ಚೀನಾದ ಹುವೈ ಕಂಪೆನಿ ಮಡಚುವ ಫೋನ್ ಬಿಡುಗಡೆ ಮಾಡಲಿದೆ. ಮಾರುಕಟ್ಟೆಗೆ ಈ ಫೋನ್ ಅನ್ನು ಅಕ್ಟೋಬರ್ ವೇಳೆಗೆ ಬಿಡುಗಡೆ ಮಾಡುವುದಾಗಿ ಅದು ಹೇಳಿದೆ. ಈ ಬಗ್ಗೆ ಹುವೈ ಸಿಇಒ ರಿಚರ್ಡ್ ಯು ಅವರು ಕೂಡ ಖಚಿತಪಡಿಸಿದ್ದಾರೆ.
ಈಗಾಗಲೇ ಸ್ಯಾಮ್ಸಂಗ್ ಮಡಚುವ ಫೋನ್ ಬಿಡುಗಡೆ ಮಾಡಿದ್ದರೂ ಹಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಗೆ ವಿಳಂಬವಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಸಹಜವಾಗಿ ಹುವೈ ಫೋನ್ ನ ಮೇಲೆ ಕುತೂಹಲ ಹೆಚ್ಚಿದೆ. ಅಲ್ಲದೇ 5ಜಿ ಸೇರ್ಪಡೆ ಕಾರಣ ಹುವೈ ಮೊಬೈಲ್ ಮಾರುಕಟ್ಟೆಗೆ ತಡವಾಗಿ ಆಗಮಿಸಿದೆ ಎನ್ನಲಾಗಿದೆ.
ಹುವೈ ಮಡಚುವ ಫೋನ್ ಹೇಗಿದೆ?
ಹುವೈ ಮಡಚುವ ಫೋನ್ 6.6 ಇಂಚಿನ ಎರಡು ಅಮೋಲ್ಡ್ ಡಿಸ್ ಪ್ಲೇ ಹೊಂದಿದ್ದು, ಇದನ್ನು ತೆರೆದಾಗ 8 ಇಂಚಿನಷ್ಟು ವಿಸ್ತಾರವಾಗುತ್ತದೆ. 11 ಎಂ.ಎಂ.ರಷ್ಟು ದಪ್ಪ ಹೊಂದಿದೆ. 5ಜಿ ಕೂಡ ಹೊಂದಿದೆ. ಆದರೆ ಇದರಲ್ಲಿ ಹೆಡ್ ಫೋನ್ ಜಾಕ್ ಇಲ್ಲ. 7ಎನ್.ಎಮ್. ಹೈಸಿಲಿಕಾನ್ ಕಿರಿನ್ 980 ಚಿಪ್ ಸೆಟ್ ಇರಲಿದೆ. 2 ಸಿಮ್ ಕಾರ್ಡ್ ಹಾಕಲು ಅವಕಾಶವಿದೆ. 4500 ಎಮ್.ಎ.ಎಚ್. ಬ್ಯಾಟರಿ ಹೊಂದಿದೆ. ಕೇವಲ 30 ನಿಮಿಷದಲ್ಲಿ ಶೇ.85ರಷ್ಟು ಚಾರ್ಜ್ ಆಗುತ್ತದೆ. 8 ಜಿಬಿ ರ್ಯಾಮ್ ಮತ್ತು 512 ಜಿಬಿ ರೋಮ್ ಹೊಂದಿದೆ. ಬೆಲೆ ತಿಳಿದುಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.