ಮಾರುಕಟ್ಟೆಗೆ ಲಗ್ಗೆಯಿಟ್ಟ ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸ್ಮಾರ್ಟ್ ಫೋನ್
Team Udayavani, Dec 24, 2020, 9:20 PM IST
ನವದೆಹಲಿ: ಹೊಸ ಹೊಸ ಫೀಚರ್ ಗಳ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ಹುವಾಯ್ ಕಂಪನಿಯು ತನ್ನ ಬಳಕೆದಾರರಿಗಾಗಿ ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಅತ್ಯಧ್ಭುತ 2 ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸಿದೆ.
ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಮೊಬೈಲ್ ಪೋನ್ ಗಳು ಬರೋಬ್ಬರಿ 120 Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಮತ್ತು 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮರಾಗಳನ್ನು ಒಳಗೊಂಡಿದೆ. ಹಾಗೂ 66 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನೂ ಒಳಗೊಂಡಿದೆ.
ಈ ಮೊಬೈಲ್ ಪೋನ್ ಗಳ ಇನ್ನಷ್ಟು ಸೌಲಭ್ಯಗಳನ್ನು ಗಮನಿಸುವುದಾದಾರೆ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಮೊಬೈಲ್ ಪೋನ್ ಗಳು 6.57 ಇಂಚು ಹಾಗೂ 6.72 ಇಂಚಿನ OLED ಪ್ಯಾನಲ್ ಗಳನ್ನು ಒಳಗೊಂಡಿದೆ. ಈ ಎರಡು ವಿಧದ ಡಿಸ್ ಪ್ಲೇಗಳು ತನ್ನದೇ ಆದ ವಿಭಿನ್ನ ಸಾಮರ್ಥ್ಯವನ್ನು ಒಳಗೊಂಡಿದ್ದು, ನೋವಾ 8ನ ಡಿಸ್ ಪ್ಲೇ 1080×2340 ಪಿಕ್ಸೆಲ್ ಹೆಚ್ ಡಿ ರೆಸ್ಯೂಲೇಷನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 240Hz ಟಚ್ ಸ್ಯಾಂಪಲಿಂಗ್ ಅನ್ನೂ ಒಳಗೊಂಡಿದೆ.
ಇನ್ನು ನೋವಾ 8 ಪ್ರೋ ಸರಣಿಯ ಮೊಬೈಲ್ 1236×2676 ಫುಲ್ HD ರೆಸ್ಯೂಲೇಷನ್ ಸಪೋರ್ಟ್ ಆಗುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 300Hz ಟಚ್ ಸ್ಯಾಂಪಲಿಂಗ್ ರೇಟ್ ಅನ್ನೂ ಒಳಗೊಂಡಿದೆ. ಮೊಬೈಲ್ ಗಳ ಡಿಸ್ ಪ್ಲೇಯು 10 ಬಿಟ್ ಕಲರ್ ಡೆಪ್ತ್ ಅನ್ನು ಒಳಗೊಂಡಿದ್ದು ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ರೀಡರ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಸೌತ್ ಆಯ್ತು ,ಈಗ ಬಿ ಟೌನ್ ಪಯಣ ಬೆಳೆಸಿದ ರಶ್ಮಿಕಾ : ಬಾಲಿವುಡ್ ನಲ್ಲಿ ಕಿರಿಕ್ ಬೆಡಗಿ ಮಿಂಚು
ನೋವಾ 8 ಮೊಬೈಲ್ ಪೋನ್ 8 ಜಿಬಿ RAM ಅನ್ನು ಒಳಗೊಂಡಿದ್ದು, ಇದರಲ್ಲಿ 128 ಜಿಬಿ ಇಂಟರ್ನಲ್ ಸ್ಟೋರೇಜ್ ಸೌಲಭ್ಯವಿದೆ. ಇನ್ನು ನೋವಾ 8 ಪ್ರೋ ಸರಣಿಯು ತನ್ನಲ್ಲಿ 2.58Hz kirin 985 ಚಿಪ್ ಸಪ್ ಸೆಟ್ ಅನ್ನು ಒಳಗೊಂಡಿದೆ. ಈ ನಡುವೆ ಈ ಎರಡೂ ಪೋನ್ ಗಳು EMUI 11 ಮೂಲದ ಆ್ಯಂಡ್ರಾಯ್ಡ್ 10 OS ಹೊಂದಿದೆ.
ಕ್ಯಾಮರಾ ಫೀಚರ್ ಗಳು
ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಎರಡೂ ಮೊಬೈಲ್ ಪೋನ್ ಗಳು 64 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಒಳಗೊಂಡಿದೆ. ಅಲ್ಲದೆ 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಜೊತೆಗೆ 120 FOV ಮತ್ತು 2 ಮೆಗಾಪಿಕ್ಸಲ್ ಮೈಕ್ರೋ ಕ್ಯಾಮರಾವನ್ನು ಒಳಗೊಂಡಿದೆ. ಇದರ ಜೊತೆಗೆ 4CM ಪೋಕಲ್ ಲೆಂಥ್ ಮತ್ತು 2 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಇದು ಹೊಂದಿದೆ. ಇನ್ನು ನೋವಾ ಪ್ರೋನಲ್ಲಿ ಎರಡು ಸೆಲ್ಫಿ ಕ್ಯಾಮರಾ ಜೊತೆಗೆ f/2.0 ಅಪಾರ್ಚರ್ ಹೊಂದಿರುವ 16 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಗಳಿವೆ.
ಇದನ್ನೂ ಓದಿ:ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗ್ರಾಹಕರಿಗೆ ಅವಶ್ಯಕ : ಆಲ್ಬರ್ಟ್ ಡಿ’ಸೋಜಾ
ಬ್ಯಾಟರಿ ಸಾಮರ್ಥ್ಯ
ಹುವಾಯಿ ನೋವಾ 8 ಒಟ್ಟು 3800 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ನೋವಾ 8 ಪ್ರೋ ಒಟ್ಟು 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ
ಈ ಎರಡು ಮೊಬೈಲ್ ಗಳು ಹಸಿರು, ಕಪ್ಪು, ಪರ್ಪಲ್ ಹಾಗೂ ಗ್ರೇಡಿಯಂಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.