ವಾಹನ ಮಾರಾಟದಲ್ಲಿ ಏರಿಕೆ; ಚಿಪ್ ಕೊರತೆ ನೀಗಿದ ಹಿನ್ನೆಲೆ ಚೇತರಿಸಿಕೊಂಡ ಸಂಸ್ಥೆಗಳು
Team Udayavani, Sep 3, 2022, 10:18 AM IST
ನವದೆಹಲಿ: ಕೊರೊನಾ ಸಮಸ್ಯೆ, ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಾಗಿ ಹೊಡೆತ ಕಂಡಿದ್ದ ಮೋಟಾರು ವಾಹನ ಸಂಸ್ಥೆಗಳು ಇದೀಗ ಮತ್ತೆ ಚಿಗುರಿವೆ. ಆಗಸ್ಟ್‌ನಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಮಾರಾಟ ಅತ್ಯಧಿಕವಾಗಿತ್ತು ಎಂದು ಸಂಸ್ಥೆಗಳು ತಿಳಿಸಿವೆ.
ಮಾರುತಿ ಸುಜುಕಿ ಸಂಸ್ಥೆಯು ಆಗಸ್ಟ್‌ನಲ್ಲಿ 22,162 ಎಸ್-ಪ್ರಸೊÕà, ಆಲ್ಟೋ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅದು 20,461 ಆಗಿತ್ತು. ಹಾಗೆಯೇ ಒಂದೇ ತಿಂಗಳಲ್ಲಿ 71,557 ಬಲೆನೊ, ಸೆಲೆರಿಯೋ, ಡಿಜೈರ್, ಇಗ್ನಿಸ್, ಸ್ವಿಫ್ಟ್, ಟೂರ್ ಎಸ್ ಮತ್ತು ವ್ಯಾಗನಾರ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.57 ಹೆಚ್ಚಿದೆ. ಅದೇ ರೀತಿ ಎಸ್‌ಯುವಿ ಮಾರಾಟದಲ್ಲೂ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ದ್ವಿಚಕ್ರ ವಾಹನ ಮಾರಾಟಗಾರರಾಗಿರುವ ಬಜಾಜ್‌ನಲ್ಲಿ ಕಳೆದ ವರ್ಷದ ಆಗಸ್ಟ್‌ಗಿಂತ ಈ ವರ್ಷದ ಆಗಸ್ಟ್‌ನಲ್ಲಿ ಶೇ.49 ಹೆಚ್ಚು ಮಾರಾಟವಾಗಿದ್ದರೆ, ಟಿವಿಎಸ್ ಸಂಸ್ಥೆಯಲ್ಲಿ ಶೇ.33 ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.