Motor vehicle sector; ದೇಶದಲ್ಲಿ ಹೆಚ್ಚಿದ ವಾಹನ ಮಾರಾಟ
Team Udayavani, Jul 18, 2023, 8:30 AM IST
ಭಾರತದಲ್ಲಿ ಮೋಟಾರು ವಾಹನ ಕ್ಷೇತ್ರದಲ್ಲಿ ವಾಹನಗಳ ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ. ಒಟ್ಟಾರೆ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ.10ರಷ್ಟು ಬೆಳವಣಿಗೆಯಾಗಿದೆ. ಪ್ಯಾಸೆಂಜರ್ ವಾಹನ ಹಾಗೂ ದ್ವಿಚಕ್ರ ವಾಹನವನ್ನು ಒಳಗೊಂಡಂತೆ ಈ ವರ್ಷದ ಜೂನ್‌ನಲ್ಲಿ 18,63,868 ವಾಹನಗಳು ದೇಶದಲ್ಲಿ ಮಾರಾಟವಾಗಿವೆ. ಕಳೆದ ವರ್ಷವೂ ಜೂನ್‌ನಲ್ಲಿ 17,01,105 ವಾಹನಗಳು ಮಾರಾಟವಾಗಿದ್ದವು.
ದಿ ಫೆಡರೇಶನ್ ಆಫ್ ಆಟೋ ಮೊಬೈಲ್ ಡೀಲರ್ ಅಸೋಸಿಯೇಶನ್ ವಾಹನಗಳ ಚಿಲ್ಲರೆ ಮಾರಾಟದ ಜೂನ್ ತಿಂಗಳ ಅಂಕಿಅಂಶ ವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವಾರ್ಷಿಕ ಆಧಾರದ ಮೇಲೆ ವಾಹನಗಳ ಮಾರಾಟವು ಜೂನ್ ತಿಂಗಳಿನಲ್ಲಿ ಶೇ.10ರಷ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಇದೇ ತಿಂಗಳಿನ ಆಧಾರದ ಮೇಲೆ ನೋಡಿದರೆ ಶೇ. 8ರಷ್ಟು ಚಿಲ್ಲರೆ ಮಾರಾಟದಲ್ಲಿ ಇಳಿಕೆಯಾಗಿದೆ.
ಪ್ಯಾಸೆಂಜರ್‌ವಾಹನಗಳ ಮಾರಾಟ ಏರಿಕೆ
ದೇಶದಲ್ಲಿ ಈ ವರ್ಷದ ಜೂನ್‌ನಲ್ಲಿ ಪ್ಯಾಸೆಂಜರ್ ವಾಹನಗಳ ಚಿಲ್ಲರೆ ಮಾರಾಟವು ಶೇ.5 ರಷ್ಟು ಹೆಚ್ಚಳವಾಗಿದ್ದು 2,95,299 ವಾಹನಗಳು ಮಾರಾಟ ವಾಗಿವೆ. 2022ರ ಜೂನ್‌ನಲ್ಲಿ 2,81,811 ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದವು. ಇದೇ ವೇಳೆ ಈ ವರ್ಷದ ಜೂನ್‌ನಲ್ಲಿ ದ್ವಿಚಕ್ರ ವಾಹನ ಗಳ ಮಾರಾಟದಲ್ಲೂ ಶೇ. 7ರಷ್ಟು ಏರಿಕೆ ಯಾಗಿದ್ದು 13,10,186 ವಾಹನಗಳು ಮಾರಾಟವಾಗಿವೆ. 2022ರ ಜೂನ್‌ನಲ್ಲಿ 12,27,149 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.
ತ್ರಿಚಕ್ರ ವಾಹನಗಳ ಮಾರಾಟ ಹೆಚ್ಚಳ
ಕಳೆದ ವರ್ಷ ಜೂನ್‌ನಲ್ಲಿ 49,299 ತ್ರಿಚಕ್ರ ವಾಹನಗಳ ಮಾರಾಟವಾಗಿದ್ದರೆ, ಈ ಬಾರಿ ಶೆ.75ರಷ್ಟು ಹೆಚ್ಚಳ ಕಂಡು, 86,511 ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ಟ್ರ್ಯಾಕ್ಟರ್‌ಗಳ ಚಿಲ್ಲರೆ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.45ರಷ್ಟು ಏರಿಕೆ ಕಂಡಿದೆ. ಕಮರ್ಶಿಯಲ್ ವಾಹನಗಳ ಮಾರಾಟದಲ್ಲಿ 73,212 ಯೂನಿಟ್‌ನಷ್ಟು ಏರಿಕೆಯಾಗಿದೆ.
-ಪ್ಯಾಸೆಂಜರ್ ವಾಹನ ಒಟ್ಟಾರೆ2,95,299 ಮಾರಾಟವಾಗಿದ್ದು ಮಾರುತಿ ಸುಜುಕಿ ಶೇ.41.09ರಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
– ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮೋಟಾರ್ ಬೈಕ್‌ಗಳು ಅತೀ ಹೆಚ್ಚು ಮಾರಾಟವಾಗಿದ್ದು, ಶೇ.32.56 ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
-ಬಜಾಜ್ ಆಟೋವು ಶೇ. 35.4 ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.
-ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಅತೀ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿದೆ. ಇದು ಶೇ.21.94ರಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.