ಟ್ವಿಟರ್, ಫೇಸ್‌ಬುಕ್‌ಗೆ ಪ್ರಕಾಶನ ಸಂಸ್ಥೆ ಸ್ಥಾನಮಾನ
"ವೈಯಕ್ತಿಕ ದತ್ತಾಂಶ ಸುರಕ್ಷೆ' ಮೇಲಿನ ಸಂಸದೀಯ ಸಮಿತಿಯ ಕೇಂದ್ರಕ್ಕೆ ಸಲಹೆ
Team Udayavani, Nov 25, 2021, 11:15 AM IST
ನವದೆಹಲಿ: ಟ್ವಿಟರ್, ಫೇಸ್‌ಬುಕ್‌ಗಳನ್ನು ಪ್ರಕಾಶನ ಸಂಸ್ಥೆಗಳೆಂದು ಪರಿಗಣಿಸಬೇಕು. ಅವುಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಸಾಂವಿಧಾನಿಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕು ಎಂದು ಸಂಸತ್ತಿನ ಉನ್ನತ ಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
2019ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿರುವ ವೈಯಕ್ತಿಕ ದತ್ತಾಂಶ ಸುರಕ್ಷಾ ಮಸೂದೆಯ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿರುವ ಸಂಸದೀಯ ಜಂಟಿ ಸಮಿತಿ, ಈ ಸಲಹೆಯನ್ನು ಕೇಂದ್ರದ ಮುಂದಿಟ್ಟಿದೆ. ದತ್ತಾಂಶ ಸಂರಕ್ಷಣೆ ವಿಚಾರದಲ್ಲಿ ವಿದೇಶಿ ಕಂಪನಿಗಳಾದ ಆ್ಯಪಲ್, ಗೂಗಲ್, ಅಮೆಜಾನ್‌ನಂಥ ಕಂಪನಿಗಳನ್ನೂ ನಿಯಂತ್ರಿಸಬಹುದಾದ ಅಧಿಕಾರ ಆ ಸಂಸ್ಥೆಗೆ ಇರಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ಅಧಿಕಾರ ಸಚಿವ ಸುಧಾಕರ್ ಅವರ ಪಿತ್ರಾರ್ಜಿತ ಆಸ್ತಿಯಲ್ಲ: ಸಿದ್ದರಾಮಯ್ಯ ವಾಗ್ದಾಳಿ
“ಕಾಯ್ದೆಯಡಿ ದತ್ತಾಂಶ ಸುರಕ್ಷಾ ಆಯೋಗವನ್ನು ನೇಮಿಸಲು ಉದ್ದೇಶಿಸಲಾಗಿದೆ. ಆಯೋಗ ರಚನೆಯಾದ ನಂತರ, ವೈಯಕ್ತಿಕ ಮಾಹಿತಿಯನ್ನು ಹೊರದೇಶಗಳ ಸರ್ವರ್‌ಗಳಲ್ಲಿ ಸಂರಕ್ಷಿಸುವ ವ್ಯವಸ್ಥೆಗೆ ಮೊರೆ ಹೋಗುವುದನ್ನು ಕೈಬಿಟ್ಟು, ದೇಶೀಯ ಮಟ್ಟದಲ್ಲೇ ಅಪಾರ ದತ್ತಾಂಶ ಸಂಗ್ರಹಾಗಾರವನ್ನು ರಚಿಸುವತ್ತ ಹೆಜ್ಜೆಯಿಡಬೇಕು. ಇದಕ್ಕೆ ಎಲ್ಲಾ ದೇಶೀಯ ಸಂಸ್ಥೆಗಳು, ಅಗತ್ಯಬಿದ್ದರೆ ವಿದೇಶಿ ಸಂಸ್ಥೆಗಳ ಸಹಕಾರ ಪಡೆಯಬೇಕು” ಎಂದು ಸಮಿತಿ ಅಧ್ಯಕ್ಷ ಬಿಜೆಪಿಯ ಪಿ.ಪಿ. ಚೌಧರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.