ಭಾರತೀಯ ಕುವರಿ ಅದಿತಿಗೆ ಮೈಕ್ರೋಸಾಫ್ಟ್ ನಿಂದ ಒಲಿದು ಬಂತು 22ಲಕ್ಷ ರೂ!ಯಾಕೆ?ಇಲ್ಲಿದೆ ಮಾಹಿತಿ

Team Udayavani, Jun 29, 2021, 9:25 PM IST

Indian girl gets over 22 lakhs award for hacking Microsoft, find out why

ನವ ದೆಹಲಿ : ಭಾರತತೀಯ ಕುವರಿ, 20 ವರ್ಷದ ಸೈಬರ್‌ ಸೆಕ್ಯುರಿಟಿ ವಿಶ್ಲೇಷಕಿ ಮತ್ತು ಎಥಿಕಲ್ ಹ್ಯಾಕರ್ ಅದಿತಿ ಸಿಂಗ್ ಮೈಕ್ರೋಸಾಫ್ಟ್ ನಿಂದ ಬರೋಬ್ಬರಿ 22 ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ಪಡೆದಿದ್ದಾರೆ.

ಮೈಕ್ರೋಸಾಫ್ಟ್ ನ ಅಜೂರ್ ಕ್ಲೌಡ್ ಸಿಸ್ಟಂ ನಲ್ಲಿನ ದೋಷವನ್ನು ಪತ್ತೆಹಚ್ಚಿದ್ದಕ್ಕಾಗಿ ಟೆಕ್ ದೈತ್ಯ ಸಂಸ್ಥೆ  ಇಷ್ಟು ದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿದೆ.

2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ದೈತ್ಯ ಸಂಸ್ಥೆ ಫೇಸ್‌ ಬುಕ್‌ ನಲ್ಲಿ ಕೂಡ ಇದೇ ರೀತಿಯ ದೋಷವನ್ನು ಪತ್ತೆ ಹಚ್ಚಿಕೊಟ್ಟಿದ್ದಕ್ಕಾಗಿ ಅದಿತಿಗೆ 5.5 ಲಕ್ಷ ರೂಪಾಯಿಗಳನ್ನು ಫೇಸ್ ಬುಕ್ ನೀಡಿತ್ತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ

ಈ ಬಗ್ಗೆ ಪ್ರತಿಕ್ರಿಯಿಸಿದ ಅದಿತಿ, ಎರಡೂ ಕಂಪೆನಿಗಳು ರಿಮೋಟ್ ಕೋಡ್ ಎಕ್ಸಿಕ್ಯೂಶನ್ (ಆರ್‌ ಸಿ ಇ) ದೋಷವನ್ನು ಹೊಂದಿದ್ದವು, ಇದು ತುಲನಾತ್ಮಕವಾಗಿ ಹೊಸದು ಮತ್ತು ಪ್ರಸ್ತುತ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ. ಅಂತಹ ದೋಷಗಳ ಮೂಲಕ, ಹ್ಯಾಕರ್‌ ಗಳು ಆಂತರಿಕ ವ್ಯವಸ್ಥೆಗಳಿಗೆ ಪ್ರವೇಶವನ್ನು ಪಡೆಯಬಹುದು. ಎಂದು ಅವರು ಹೇಳಿದರು.

ವಿಶೇಷವೆಂದರೆ, ಸುಮಾರು 2 ತಿಂಗಳ ಹಿಂದೆ ಅದಿತಿ ಮೈಕ್ರೋಸಾಫ್ಟ್ ಅಜೂರ್‌ ನಲ್ಲಿ ಆರ್‌ ಸಿ ಇ ದೋಷವನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಕಂಪನಿಗೆ  ದೋಷದ ಬಗ್ಗೆ ತಿಳಿಸಿದ್ದರೂ ಕೂಡ ಕಂಪನಿಯು ವ್ಯವಸ್ಥೆಯ ಅಸುರಕ್ಷಿತ ಆವೃತ್ತಿಯನ್ನು ಯಾರಾದರೂ ಡೌನ್‌ ಲೋಡ್ ಮಾಡಿದ್ದಾರೆಯೇ ಎಂದು ಪರಿಶೀಲಿಸುವಲ್ಲಿ ನಿರತರಾಗಿದ್ದರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರಕಿರಲಿಲ್ಲ ಎಂದು ವರದಿಯಾಗಿದೆ.

ಆರ್‌ ಸಿ ಇ ದೋಷದ ಹಿಂದಿನ ಕಾರಣವನ್ನು ವಿವರಿಸಿದ ಅದಿತಿ, ಕೋಡ್ ನನ್ನು ನೇರವಾಗಿ ಬರೆಯುವ ಬದಲು ಡೆವಲಪರ್‌ ಗಳು ಮೊದಲು ‘ನೋಡ್ ಪ್ಯಾಕೇಜ್ ಮ್ಯಾನೇಜರ್’ ನನ್ನು ಡೌನ್‌ ಲೋಡ್ ಮಾಡಿಕೊಳ್ಳಬೇಕು. “ಡೆವಲಪರ್‌ ಗಳು ಎನ್‌ ಪಿ ಎಂ ಹೊಂದಿದ ನಂತರವೇ ಕೋಡ್‌ ಗಳನ್ನು ಬರೆಯಬೇಕು” ಎಂದು ಹೇಳಿದ್ದಾರೆ.

ಇನ್ನು, ಮೇಕ್ರೋಸಾಫ್ಟ್  ಹಾಗೂ  ಪೇಸ್ ಬುಕ್ ಸಂಸ್ಥೆಗಳ ಮೆಚ್ಚಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ, ಹಾರ್ವರ್ಡ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಚ್ಚುಗೆಯ ಪತ್ರಗಳನ್ನು ಸಹ ಪಡೆದಿದ್ದಾರೆ. ಮಾತ್ರವಲ್ಲದೇ, ಗೂಗಲ್ ಹಾಲ್ ಆಫ್ ಫೇಮ್‌ನಲ್ಲಿ ಸಹ ಹೈಲೈಟ್ ಆಗಿದ್ದಾರೆ.

ಇದನ್ನೂ ಓದಿ : ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್‌

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.