ಕಡಿಮೆ ಬಜೆಟ್ ಫೋನ್ ಬೇಕೆನ್ನುವವರಿಗಾಗಿ ಬಂದಿದೆ ಪೋಕೋ ಸಿ50
Team Udayavani, Apr 4, 2023, 3:25 PM IST
ಪೋಕೋ ಸಿ 50 ಒಂದು ಆರಂಭಿಕ ದರ್ಜೆಯ ಬಜೆಟ್ ಫೋನ್. ಇದು 32 ಜಿಬಿ ಆಂತರಿಕ ಸಂಗ್ರಹ ಹೊಂದಿದ್ದು, 2 ಜಿಬಿ ಮತ್ತು 3 ಜಿಬಿ ರ‍್ಯಾಮ್ ಹೊಂದಿದೆ. ಮೀಡಿಯಾ ಟೆಕ್ ಹೀಲಿಯೋ ಎ22 ಪ್ರೊಸೆಸರ್, 8 ಮೆ.ಪಿ. ಮುಖ್ಯ ಯುಗಳ ಕ್ಯಾಮರಾ, 5 ಮೆ.ಪಿ. ಸೆಲ್ಫಿ ಕ್ಯಾಮರಾ ಇದಕ್ಕಿದೆ. 6.52 ಇಂಚಿನ ಎಚ್ ಡಿ ಪ್ಲಸ್ ರೆಸ್ಯೂಲೇಷನ್ ಇದ್ದು, 5000 ಎಂಎಎಚ್ ಬ್ಯಾಟರಿ ಹೊಂದಿದೆ. ಇದರ ದರ 2 ಜಿಬಿ ರ‍್ಯಾಮ್‌ಗೆ 6,499 ರೂ. 3 ಜಿಬಿ ರ‍್ಯಾಮ್ ಆವೃತ್ತಿಗೆ 7,299 ರೂ. ಹಸಿರು ಮತ್ತು ನೀಲಿ ಬಣ್ಣದಲ್ಲಿ ದೊರಕುತ್ತದೆ.
ಪೋಕೋ ಆರಂಭಿಕ ಮತ್ತು ಮಧ್ಯಮ ದರ್ಜೆಯ ಮೊಬೈಲ್ ಫೋನ್ ಗಳಿಗೆ ಹೆಸರಾಗಿದೆ. ಪೋಕೋ ಸಿ 50 ಮೊಬೈಲ್, ಕರೆ ಮಾಡುವುದಕ್ಕೆ, ವಾಟ್ಸಪ್ ನೋಡುವುದಕ್ಕೆ ಒಂದು ಸಾಧಾರಣ ಫೋನ್ ಇದ್ದರೆ ಸಾಕು ಎನ್ನುವಂಥ ಗ್ರಾಹಕರಿಗೆ ಸೂಕ್ತವಾದ ಫೋನ್ ಎನ್ನಬಹುದು.
ವಿನ್ಯಾಸ: ಮುಂಭಾಗದ ಕ್ಯಾಮರಾಕ್ಕಾಗಿ ವಾಟರ್ ಡ್ರಾಪ್ ನಾಚ್ ಇದೆ. ಡಿಸ್ ಪ್ಲೇ ಅಂಚಿನ ಬೆಜೆಲ್ ಸ್ವಲ್ಪ ದಪ್ಪವಾಗಿವೆ. ಫೋನ್ ಕವಚ ಪ್ಲಾಸ್ಟಿಕ್ ನದ್ದಾಗಿದೆ. 190 ಗ್ರಾಂ ತೂಕ ಹೊಂದಿದೆ. ಬಜೆಟ್ ಫೋನ್ ಗಳಲ್ಲಿ ಇದು ಸಾಮಾನ್ಯ. ಫೋನ್ ನ ಹಿಂಬದಿ ಎಡ ಬದಿಯಲ್ಲಿ ಡುಯಲ್ ಕ್ಯಾಮರಾ ಲೆನ್ಸ್ ಇದೆ. ಹಿಂಬದಿ ಚರ್ಮದ ಕವರ್ ನ ಟೆಕ್ಸಚರ್ ಹೊಂದಿದೆ. ಹಾಗಾಗಿ ಫೋನ್ ಹಿಡಿದಾಗ ಜಾರುವುದಿಲ್ಲ. ಫೋನಿನ ತಳಭಾಗದಲ್ಲಿ ಮೈಕ್ರೋ ಯುಎಸ್ ಬಿ 2.0 ಪೋರ್ಟ್, 3.5 ಎಂಎಂ ಆಡಿಯೋ ಜಾಕ್ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ ಇದೆ. ಬಲಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್ ಹಾಗೂ ಆನ್ ಆಫ್ ಬಟನ್ ಗಳಿವೆ. ಹಿಂಬದಿಯಲ್ಲಿ ಕ್ಯಾಮರಾದಿಂದ ಸ್ವಲ್ಪ ಕೆಳಗೆ ಬೆರಳಚ್ಚು ಸಂವೇದಕ ಇದೆ. ಈ ದರಕ್ಕೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಿರುವುದು ಶ್ಲಾಘನೀಯ ಮತ್ತು ಇದು ವೇಗವಾಗಿಯೂ ಕೆಲಸ ನಿರ್ವಹಿಸುತ್ತದೆ.
ಇದನ್ನೂ ಓದಿ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ: ಕಾರಿನೊಳಗೆ ಕಟ್ಟಿಹಾಕಿ ವ್ಯಕ್ತಿಯ ಸಜೀವ ದಹನ
ಡಿಸ್‌ಪ್ಲೇ: 6.52-ಇಂಚಿನ IPS LCD HD+ (1600×720) ಡಿಸ್‌ಪ್ಲೇ ಹೊಂದಿದೆ. ಪರದೆಯ ಪ್ರಕಾಶಮಾನತೆ ಒಂದು ಹಂತಕ್ಕೆ ಪರವಾಗಿಲ್ಲ. ಬಿಸಿಲಿನಲ್ಲಿ, ಹೊರಾಂಗಣದಲ್ಲಿ ಬಳಸಲು ಬ್ರೈಟ್ನೆಸ್ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಯೂಟ್ಯೂಬ್ ಅಥವಾ ಇನ್ನಾವುದಾದರೂ ಎಚ್‌ಡಿ ವೀಡಿಯೋಗಳ ವೀಕ್ಷಣೆ ತೃಪ್ತಿಕರವಾಗಿದೆ.
ಕಾರ್ಯಾಚರಣೆ: ಈ ಫೋನ್ ಆಂಡ್ರಾಯ್ಡ್ 23 ಗೋ ಎಡಿಷನ್ ಹೊಂದಿದೆ. ಮಿಡಿಯಾಟೆಕ್ ಹೀಲಿಯೋ ಎ22 ಪ್ರೊಸೆಸರ್ ಹೊಂದಿದೆ. 32 ಜಿಬಿ ಆಂತರಿಕ ಸಂಗ್ರಹದಲ್ಲಿ 23 ಜಿಬಿ ಗ್ರಾಹಕರ ಬಳಕೆಗೆ ದೊರಕುತ್ತದೆ. ಹೆಚ್ಚುವರಿ ಸಂಗ್ರಹ ಬೇಕೆಂದರೆ 512 ಜಿಬಿವರೆಗೂ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳಬಹುದು. ಇದು ಆರಂಭಿಕ ಬೆಲೆಯ ಫೋನ್ ಆದ್ದರಿಂದ ಇದರ ಕಾರ್ಯಾಚರಣೆ ಸಹ ಸೀಮಿತವಾಗಿದೆ. ಸಾಮಾನ್ಯ ಕರೆ, ವಿಡಿಯೋ ಕಾಲ್, ಯೂಟ್ಯೂಬ್ ವೀಡಿಯೋ ವೀಕ್ಷಣೆ, ಸಂಗೀತ ಆಲಿಸಲು, ಮೇಲ್ ಗಳನ್ನು ಓದಲು, ವಾಟ್ಸಪ್ ನೋಡಲು ಸಾಕು. ಒಟ್ಟಿಗೇ ಕೆಲವು ಆಪ್ ಗಳನ್ನು ತೆರೆದಾಗ ಇದು ನಿಧಾನವಾಗುತ್ತದೆ. ಹಾಗಾಗಿ ಸೀಮಿತ ಬಳಕೆದಾರರಿಗೆ ಇದು ಸೂಕ್ತವಾಗಿದೆ.
ಕ್ಯಾಮರಾ: ಇದು 8 ಮೆಪಿ. ಮುಖ್ಯ ಕ್ಯಾಮರಾ ಹಾಗೂ 0.8 ಮೆ.ಪಿ. ಹೆಚ್ಚುವರಿ ಕ್ಯಾಮರಾ ಹೊಂದಿದೆ. ಆರಂಭಿಕ ದರ್ಜೆಯ ಫೋನ್ ಗಳಲ್ಲಿ ಹೆಚ್ಚಿನ ಕ್ಯಾಮರಾ ಗುಣಮಟ್ಟ ನಿರೀಕ್ಷೆ ಮಾಡುವಂತಿಲ್ಲ. ಹೆಚ್ಚು ಬೆಳಕಿರುವೆಡೆ, ಹೊರಾಂಗಣದಲ್ಲಿ ಫೋಟೋಗಳು ಒಂದು ಹಂತಕ್ಕೆ ಚೆನ್ನಾಗಿ ಮೂಡಿಬರುತ್ತವೆ. ಈ ದರಕ್ಕೆ ಓಕೆ ಎನ್ನಬಹುದಾದ ಕ್ಯಾಮರಾ ಇದೆ.
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 10 ವ್ಯಾಟ್ಸ್ ಚಾರ್ಜರ್ ಅನ್ನು ಬಾಕ್ಸ್ ನೊಂದಿಗೆ ನೀಡಲಾಗಿದೆ. ಮೈಕ್ರೋ ಯುಎಸ್ ಬಿ ಕೇಬಲ್ ಇದೆ. ಈಗೆಲ್ಲ ಟೈಪ್ ಸಿ ಪೋರ್ಟ್ ಸಾಮಾನ್ಯವಾಗಿರುವುದರಿಂದ ಟೈಪ್ ಸಿ ಪೋರ್ಟ್ ನೀಡಬಹುದಾಗಿತ್ತು. 5000 ಎಂಎಎಚ್ ಬ್ಯಾಟರಿ, ಇದು ಹೆಚ್ಚು ಸಾಮರ್ಥ್ಯದ ಫೋನ್ ಅಲ್ಲವಾದ್ದರಿಂದ, ಸಾಧಾರಣ ಬಳಕೆಗೆ ಒಂದೂವರೆಯಿಂದ ಎರಡು ದಿನ ಬಾಳಿಕೆ ಬರುತ್ತದೆ. ಆದರೆ ಬ್ಯಾಟರಿ ಶೇ. 1 ರಿಂದ ಪೂರ್ತಿ ಚಾರ್ಜ್ ಆಗಲು ಎರಡು ಗಂಟೆ ತೆಗೆದುಕೊಳ್ಳುತ್ತದೆ.
ಕೀ ಪ್ಯಾಡ್ ಗಿಂತ ಸ್ವಲ್ಪ ಹೆಚ್ಚಿನದಾದ ಫೋನ್ ಬೇಕು. ಹೆಚ್ಚು ಬಳಕೆ ಮಾಡುವುದಿಲ್ಲ. ಒಂದು ಆರಂಭಿಕ ದರ್ಜೆಯ ಫೋನ್ ಬೇಕು ಎನ್ನುವವರು ಪೋಕೋ ಸಿ 50 ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.