ಕೆಲಸ ಕಳೆದುಕೊಳ್ತೀರಿ… ಏನಿದು ಮೂನ್ ಲೈಟಿಂಗ್?ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ
ಮೂನ್ ಲೈಟಿಂಗ್ ಅಭ್ಯಾಸ ದ್ರೋಹ ಎಸಗಿದಂತೆ
Team Udayavani, Sep 13, 2022, 4:15 PM IST
ಬೆಂಗಳೂರು: ಯಾವುದೇ ಕಾರಣಕ್ಕೂ ಮೂನ್ ಲೈಟಿಂಗ್ ಗೆ ಅವಕಾಶ ಇಲ್ಲ ಎಂದು ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ರವಾನಿಸಿರುವ ಇ-ಮೇಲ್ ನಲ್ಲಿ ಖಡಕ್ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಿಲುವಳಿ ಸೂಚನೆ ಮಂಡಿಸುವುದು ಏಕೆ ಹೇಳಿ?: ಸಭಾಧ್ಯಕ್ಷರಿಗೆ ಸಿದ್ದರಾಮಯ್ಯ ಪ್ರಶ್ನೆ
ಸಂಸ್ಥೆಯ ನಿಯಮದ (ಕೋಡ್ ಆಫ್ ಕಂಡಕ್ಟ್) ಪ್ರಕಾರ ಉದ್ಯೋಗಿಗಳಿಗೆ ಮೂನ್ ಲೈಟಿಂಗ್ ಗೆ ಅನುಮತಿ ಇಲ್ಲ ಎಂದು ಮಾನವ ಸಂಪನ್ಮೂಲ (ಎಚ್ ಆರ್) ಡಿಪಾರ್ಟ್ ಮೆಂಟ್ ಕಳುಹಿಸಿರುವ ಮೇಲ್ ನಲ್ಲಿ ವಿವರಿಸಿದೆ.
ಕೋಡ್ ಆಫ್ ಕಂಡಕ್ಟ್ ಉಲ್ಲಂಘಿಸಿದಲ್ಲಿ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸುವುದು ಸೇರಿದಂತೆ ಶಿಸ್ತು ಕ್ರಮ ತೆಗೆದುಕೊಳ್ಳಲು ಕಾರಣವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಏನಿದು ಮೂನ್ ಲೈಟಿಂಗ್?
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಹಸ್ಯವಾಗಿ ಎರಡನೇ ಉದ್ಯೋಗ ಮಾಡುವುದು, ಹಗಲಿನ ಪಾಳಿಯಲ್ಲಿ ಒಂದು ಕಂಪನಿ ಕೆಲಸ, ರಾತ್ರಿ ಪಾಳಿಯಲ್ಲಿ ಮತ್ತೊಂದು ಕಂಪನಿ(ಅರೆಕಾಲಿಕ) ಕೆಲಸ ಮಾಡುವುದನ್ನು ಮೂನ್ ಲೈಟಿಂಗ್ ಅಂತ ಕರೆಯುತ್ತಾರೆ.
ಇನ್ಫೋಸಿಸ್ ಎಚ್ ಆರ್ ಡಿಪಾರ್ಟ್ ಮೆಂಟ್ ಕಳುಹಿಸಿರುವ ಇ-ಮೇಲ್ ಸಬ್ಜೆಕ್ಟ್ ಲೈನ್ ನಲ್ಲಿ, “No two timing- no Moonlighting” ಎಂದು ನಮೂದಿಸಿತ್ತು. ಮೂನ್ ಲೈಟಿಂಗ್ ಅಭ್ಯಾಸ ದ್ರೋಹ ಎಸಗಿದಂತೆ ಎಂದು ವಿಪ್ರೋ ಅಧ್ಯಕ್ಷರಾದ ಅಜೀಂ ಪ್ರೇಮ್ ಜಿ ಕಳೆದ ತಿಂಗಳು ಆರೋಪಿಸಿದ್ದರು.
“ಕಂಪನಿಯ ಕೆಲಸದ ವೇಳೆಯಲ್ಲಿ ಉದ್ಯೋಗಿಗಳು ಯಾವುದೇ ರೀತಿಯಲ್ಲೂ ಮತ್ತೊಂದು ಕೆಲಸವನ್ನು ಮಾಡುವಂತಿಲ್ಲ. ಎರಡು ಉದ್ಯೋಗ ಮಾಡುವುದು ನಿಯಮ ಬಾಹಿರವಾದದ್ದು ಎಂದು ಇನ್ಫೋಸಿಸ್ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಸ್ಪಷ್ಟಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಿಮ್ಮ ಆಫರ್ ಲೆಟರ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಇನ್ಫೋಸಿಸ್ ಒಪ್ಪಿಗೆ ಇಲ್ಲದೆ ಯಾವುದೇ ಸಂಸ್ಥೆಯ ನಿರ್ದೇಶಕ/ಪಾಲುದಾರ/ಸದಸ್ಯ/ಉದ್ಯೋಗಿಯಾಗಿ ಯಾವ ಚಟುವಟಿಕೆಯಲ್ಲೂ ಪೂರ್ಣಕಾಲಿಕ ಅಥವಾ ಅರೆಕಾಲಿಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ಷರತ್ತನ್ನು ನೀವು(ಉದ್ಯೋಗಿಗಳು) ಒಪ್ಪಿಕೊಂಡಿದ್ದೀರಿ.
ಕಂಪನಿಯು ಸೂಕ್ತ ಎಂದು ಭಾವಿಸುವ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆಯನ್ನು ನೀಡಬಹುದು ಮತ್ತು ಕಂಪನಿಯು ಯಾವುದೇ ಸಮಯದಲ್ಲಿಯೂ ತನ್ನ ವಿವೇಚನೆಯಿಂದ ಒಪ್ಪಿಗೆಯನ್ನು ವಾಪಸ್ ಪಡೆಯಬಹುದಾಗಿದೆ ಎಂದು ಇನ್ಫೋಸಿಸ್ ಇ-ಮೇಲ್ ನಲ್ಲಿ ತಿಳಿಸಿದೆ.
ಕೋವಿಡ್ 19 ಸಂದರ್ಭದಲ್ಲಿ ದೂರದ ಊರಿನ ಉದ್ಯೋಗಿಗಳಿಗೆ ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿತ್ತು. ಮುಖ್ಯವಾಗಿ ಈ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳು ಇತರ ಕಂಪನಿಯ ಕೆಲಸವನ್ನೂ ಮಾಡುತ್ತಿರುವುದು ಗಮನಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ.
ಆಹಾರ ಸರಬರಾಜು ಫ್ಲ್ಯಾಟ್ ಫಾರಂ ಸ್ವಿಗ್ಗಿ ಭಾರತದಲ್ಲಿ ಮೂನ್ ಲೈಟಿಂಗ್ ಗೆ ಅವಕಾಶ ಮಾಡಿಕೊಟ್ಟ ಮೊದಲ ಕಂಪನಿಯಾಗಿದೆ. ಸ್ವಿಗ್ಗಿ ಇಂಡಸ್ಟ್ರಿಯಲ್ಲಿ ಮೂನ್ ಲೈಟಿಂಗ್ ನೀತಿಗೆ ಅನುಮತಿ ನೀಡಿದ್ದು, ಇದರಿಂದಾಗಿ ತನ್ನ ಉದ್ಯೋಗಿಗಳಿಗೆ ಕೆಲವೊಂದು ಷರತ್ತಿನ ಮೇಲೆ ಎರಡನೇ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿಕೊಟ್ಟಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.