Instagram 10 ಹೊಸ ಫೀಚರ್: ಇನ್ನು ಮುಂದೆ ಮೆಸೆಂಜರ್ ಅಪ್ಲಿಕೇಶನ್ ಬೇಕಿಲ್ಲ !
Team Udayavani, Oct 2, 2020, 4:32 PM IST
ನವದೆಹಲಿ: ಹಲವು ತಿಂಗಳ ಪರೀಕ್ಷೆಯ ನಂತರ ಇದೀಗ ಫೇಸ್ ಬುಕ್ ತನ್ನ ಇನ್ ಸ್ಟಾಗ್ರಾಂ ಹಾಗೂ ಮೆಸೆಂಜರ್ ಗಳನ್ನು ಒಂದೇ ವೇದಿಕೆಯಡಿಯಲ್ಲಿ ತರಲು ನಿರ್ಧರಿಸಿದೆ. ಹೊಸ ಅಪ್ ಡೇಟ್ ಪ್ರಕಾರ ಇನ್ನು ಮುಂದೆ ಇನ್ ಸ್ಟಾಗ್ರಾಂ ಮೂಲಕವೇ ಮೆಸೆಂಜರ್ ಸ್ನೇಹಿತರೊಂದಿಗೆ ಚಾಟ್ ಮಾಡಬಹುದು. ಇದಕ್ಕಾಗಿ ಮೆಸೆಂಜರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡುವ ಅಗತ್ಯವಿಲ್ಲ.
ಶೀಘ್ರದಲ್ಲಿ ಹೊಸ ಅಪ್ ಡೇಟ್ ಬಳಕೆದಾರರಿಗೆ ಲಭ್ಯವಾಗಲಿದೆ. ಹೀಗಾಗಿ ಇನ್ನುಮುಂದೆ ಇನ್ ಸ್ಟಾಗ್ರಾಂ ಮೂಲಕವೇ ಫೇಸ್ ಬುಕ್ ಮೆಸೆಂಜರ್ ಸಂದೇಶ ಕಳುಹಿಸಬಹುದು. ಮಾತ್ರವಲ್ಲದೆ ಈ ಹೊಸ ಅಪ್ ಡೇಟ್ ನೊಂದಿಗೆ ನೂತನ ಹತ್ತು ಫೀಚರ್ ಗಳು ಕೂಡ ಬಳಕೆಗೆ ಬರಲಿದೆ.
ಕ್ರಾಸ್ ಆ್ಯಪ್ ಕಮ್ಯೂನಿಕೇಷನ್ : ಮೊದಲೇ ತಿಳಿಸಿದಂತೆ ಮೆಸೆಂಜರ್ ಆ್ಯಪ್ ಸಹಾಯವಿಲ್ಲದೆ ಕೇವಲ ಇನ್ ಸ್ಟಾಗ್ರಾಂ ಮೂಲಕವೇ ಸಂದೇಶ ಕಳುಹಿಸಬಹುದು. ಮಾತ್ರವಲ್ಲದೆ ವಿಡಿಯೋ ಕರೆ ಕೂಡ ಮಾಡಬಹುದು.
ಇದನ್ನೂ ಓದಿ: ಒಂದು ಚೆಂಡಿನ ಕಥೆ: ಕ್ರಿಕೆಟ್ ಚೆಂಡಿನ ಬಣ್ಣ ಬದಲಾದಂತೆ ಅದರ ಗುಣವೂ ಬದಲಾಗುತ್ತದೆ!
ವಾಚ್ ಟುಗೇದರ್: ಈ ವರ್ಷಾರಂಭದಲ್ಲಿ ಇನ್ ಸ್ಟಾಗ್ರಾಂ ಕೋ-ವಾಚಿಂಗ್ ಫೀಚರ್ ಬಳಕೆಗೆ ತಂದಿತ್ತು. ಇದೇ ಫೀಚರ್ ಇದೀಗ ಮೆಸೆಂಜರ್ ಮತ್ತು ಫೇಸ್ ಬುಕ್ ನಲ್ಲಿ ಲಭ್ಯವಿರಲಿದೆ. ಇದರ ಮೂಲಕ ಐಜಿ ಟಿವಿ, ಟಿ,ವಿ ಕಾರ್ಯಕ್ರಮಗಳು, ಸಿನಿಮಾ ಮುಂತಾದವನ್ನೂ ವೀಕ್ಷಿಸಬಹುದು. ಮಾತ್ರವಲ್ಲದೆ ಇನ್ ಸ್ಟಾಗ್ರಾಂ ರೀಲ್ಸ್ ನಲ್ಲೂ ಈ ಫೀಚರ್ ಬಳಕೆಗೆ ಬರಲಿದೆ.
ವ್ಯಾನಿಶ್ ಮೋಡ್: ಬಳಕೆದಾರರು ಯಾವುದೇ ಮೆಸೇಜ್ ಸ್ವೀಕರಿಸಿದ ಅಥವಾ ಕಳುಹಿಸಿದಾಗ ಅದು ಪರದೆಯ ಮೇಲೆ ಎಷ್ಟು ನಿಮಿಷ/ ಗಂಟೆಯ ಕಾಲ ಗೋಚರಿಸಬೇಕೆಂಬುದನ್ನು ಈ ಫೀಚರ್ ನಿರ್ಧರಿಸುತ್ತದೆ. ಇದರ ಜೊತೆಗೆ ಸಂದೇಶ ಓದಿದಾಕ್ಷಣ ಡಿಲೀಟ್ ಆಗುವ ಆಯ್ಕೆಯೂ ಇದೆ.
ಸೆಲ್ಫಿ ಸ್ಟಿಕರ್ಸ್: ಈ ಫೀಚರ್ ಬಳಸಿಕೊಂಡು ನಿಮ್ಮ ಸೆಲ್ಫಿಗೆ ಬೂಮ್ ರಂಗ್ ಮಾದರಿಯ ಸ್ಟಿಕರ್ಸ್ ಅಳವಡಿಸಿ ಶೇರ್ ಮಾಡಬಹುದು
ಚಾಟ್ ಕಲರ್ಸ್: ಮೆಸೆಂಜರ್ ನ ಅತೀ ಜನಪ್ರಿಯ ಫೀಚರ್ ಇದೀಗ ಇನ್ ಸ್ಟಾಗ್ರಾಂ ಗೂ ಲಗ್ಗೆಯಿಟ್ಟಿದೆ. ಚಾಟ್ ಮಾಡುವ ಸಂದರ್ಭದಲ್ಲಿ ಕಲರ್ ಗಳ ಆಯ್ಕೆಯನ್ನು ಮಾಡಬಹುದು. ಒಮ್ಮೆ ನೀವು ಚಾಟ್ ಕಲರ್ ಬದಲಿಸಿದರೆ, ಸಂದೇಶ ಸ್ವೀಕರಿಸುವವರ ಚಾಟ್ ನಲ್ಲೂ ಅದು ಗೋಚರಿಸುತ್ತದೆ.
ಕಸ್ಟಮ್ ಇಮೋಜಿ ರಿಯಾಕ್ಷನ್: ಇದೀಗ ಅಟೋಮ್ಯಾಟಿಕ್ ಆಗಿ ಇಮೋಜಿಗಳನ್ನು ಬಳಕೆ ಮಾಡಬಹುದು. ಮಾತ್ರವಲ್ಲದೆ ಇದನ್ನು ಶಾರ್ಟ್ ಕಟ್ ಆಗಿಯೂ ಬಳಸಬಹುದು.
ಫಾರ್ವರ್ಡಿಂಗ್: ಇನ್ ಸ್ಟಾಗ್ರಾಂ ನಲ್ಲಿ ಫಾರ್ವರ್ಡ್ ಮೆಸೇಜ್ ಆಯ್ಕೆ ಬಂದಿದೆ. ಆದರೇ ಒಮ್ಮೆಲೇ ಐದು ಮಂದಿಗೆ ಮಾತ್ರ ಕಳುಹಿಸಬಹುದು.
ಇದನ್ನೂ ಓದಿ: “ಆತ ಯೋಗಿನೋ-ರೋಗಿನೋ” ಉ.ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಆ್ಯನಿಮೇಟೆಡ್ ಮೆಸೇಜ್: ಮೆಸೇಜ್ ಗಳಿಗೆ ಆ್ಯನಿಮೇಷನ್ ಮೂಲಕ ಕೂಡ ರಿಪ್ಲೈ ಮಾಡಬಹುದಾಗಿದ್ದು, ವಿಷುವಲ್ ಪ್ಲೇರ್ ಅಳವಡಿಸಿಕೊಳ್ಳಬಹುದಾಗಿದೆ.
ಪ್ರೈವೆಸಿ: ಡೈರೆಕ್ಟ್ ಮೆಸೇಜ್ ಗಳನ್ನು ಯಾರು ಕಳುಹಿಸಬೇಕು ಎಂಬುದನ್ನು ನಿರ್ಧರಿಸಬಹುದು. ಮಾತ್ರವಲ್ಲದೆ ಬ್ಲಾಕ್ ಮಾಡುವ ಆಯ್ಕೆಯು ದೊರಕುತ್ತಿದೆ.
ರಿಪೋರ್ಟಿಂಗ್ ಮೆಸೇಜಸ್: ನಿರ್ದಿಷ್ಟ ಮೆಸೇಜ್ ಗೆ ಮಾತ್ರ ರಿಪೋರ್ಟ್ ಮಾಡುವ ಆಯ್ಕೆಯನ್ನು ಈ ಹಿಂದೆ ಇನ್ ಸ್ಟಾ ಕಲ್ಪಿಸಿತ್ತು. ಇದೀಗ ಎಲ್ಲಾ ಮೆಸೇಜ್ ಗಳಿಗೂ ಈ ಆಯ್ಕೆ ಲಭ್ಯವಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನ್ಯೂ ಅಕೌಂಟ್ ಸೆಂಟರ್ ನಲ್ಲಿ ತಿಳಿದುಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.