ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಟಾರ್ಗೆಟ್
Team Udayavani, Mar 14, 2022, 7:40 AM IST
ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ನಡುವೆಯೇ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೂ ಆಪತ್ತು ಬಂದೊದಗಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ವಿಧಿಸುತ್ತಿರುವ ದಿಗ್ಬಂಧನೆಗಳಿಂದಾಗಿ ಈ ಬಾಹ್ಯಾಕಾಶ ಕೇಂದ್ರ ಪತನವಾಗಬಹುದು ಎಂದು ಪುಟಿನ್ ಆಡಳಿತ ಎಚ್ಚರಿಕೆ ನೀಡಿದೆ.
ಏನಿದು ಬಾಹ್ಯಾಕಾಶ ಕೇಂದ್ರ?
ಇದೊಂದು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಅತ್ಯಂತ ದೊಡ್ಡದಾದ ಸ್ಪೇಸ್‌ಕ್ರಾಫ್ಟ್. ಇದು ಹಲವಾರು ಬಾಹ್ಯಾಕಾಶ ಯಾತ್ರಿಗಳಿಗೆ ಇಳಿದಾಣವಾಗಿದ್ದು, ಇಲ್ಲೊಂದು ಅತ್ಯಂತ ಉತ್ಕೃಷ್ಟವಾದ ವೈಜ್ಞಾನಿಕ ಲ್ಯಾಬೋರೇಟರಿ ಇದೆ. ಈ ಸ್ಪೇಸ್ ಸ್ಟೇಷನ್‌ನ ನಿರ್ಮಾಣಕ್ಕಾಗಿ ಹಲವಾರು ದೇಶಗಳು ಕೈಜೋಡಿಸಿವೆ.
ಎಲ್ಲಿದೆ ಇದು?
ಇದು ಭೂಮಿಯ ಮೇಲ್ಮೈನಿಂದ 250 ಮೈಲು ಮೇಲ್ಭಾಗದಲ್ಲಿದೆ. ಗಂಟೆಗೆ 17,500 ಮೈಲು ವೇಗದಲ್ಲಿ ಸಂಚರಿಸುತ್ತಿರುತ್ತದೆ. ಅಂದರೆ, ಪ್ರತಿ 90 ನಿಮಿಷಕ್ಕೆ ಒಮ್ಮೆ ಭೂಮಿಯನ್ನು ಸುತ್ತು ಹಾಕುತ್ತದೆ.
ನಿರ್ಮಾಣ ಮಾಡಿದ್ದು ಹೇಗೆ?
ಅಮೆರಿಕ ಮತ್ತು ರಷ್ಯಾದ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಇದೊಂದು ಆಂತಾರಾಷ್ಟ್ರೀಯ ಒಕ್ಕೂಟಕ್ಕೆ ಒಳಪಟ್ಟಿರುವ ಬಾಹ್ಯಾಕಾಶ ನಿಲ್ದಾಣ. 1980ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಇದರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದರು. ಮುಂದಿನ 10 ವರ್ಷಗಳಲ್ಲಿ ಇದರ ವಿನ್ಯಾಸದ ಬಗ್ಗೆ ನಿರ್ಧಾರ ಮಾಡಲಾಯಿತು. ಅಮೆರಿಕ ಮತ್ತು ರಷ್ಯಾ ಪ್ರತ್ಯೇಕ ನಿಲ್ದಾಣಗಳ ರಚನೆಯ ಯೋಜನೆ ಹೊಂದಿದ್ದು 1993ರಲ್ಲಿ ಒಂದರಲ್ಲಿ ವಿಲೀನವಾದವು. 1998ರ ನ.20ರಂದು ರಷ್ಯಾ ನಿಯಂತ್ರಿತ ಮಾಡ್ಯುಲ್ ಝಾರ್ಯಾವನ್ನು ಕಳುಹಿಸಿ, ನಿಲ್ದಾಣದ ನಿರ್ಮಾಣ ಕಾರ್ಯ ಆರಂಭಿಸಲಾಯಿತು. 2000ನೇ ಇಸವಿಯ ಮಧ್ಯಭಾಗದಲ್ಲಿ ಮೊದಲ ಮಾನವ ಬಾಹ್ಯಾಕಾಶ ಯಾತ್ರಿಗಳು ಇಲ್ಲಿಗೆ ಇಳಿದರು.
ಆರಂಭಿಸಿದ್ದು ಯಾವಾಗ?
1998ರಲ್ಲಿ ಇದನ್ನು ನಿರ್ಮಿಸಲಾಗಿದೆ. ಮೊದಲಿಗೆ ಇದರ ಆಯಸ್ಸು ಕೇವಲ 15 ವರ್ಷ ಎಂದು ಅಂದಾಜಿಸಲಾಗಿತ್ತು. ಮತ್ತೆ ಮತ್ತೆ ಇದರಲ್ಲಿ ಬದಲಾವಣೆ ತಂದು, ಸದ್ಯ 21ನೇ ವರ್ಷದಲ್ಲೂ ಕಾರ್ಯಾಚರಣೆ ಮಾಡುತ್ತಿದೆ.
ನಾಶದ ಮಾತೇಕೆ?
ಇದನ್ನು ಅಮೆರಿಕ ಮತ್ತು ರಷ್ಯಾ ಸೇರಿ ಅಭಿವೃದ್ಧಿ ಮಾಡಿದೆ. ಅಲ್ಲದೆ, ಈಗ ಅಲ್ಲಿ ರಷ್ಯಾ ಮತ್ತು ಅಮೆರಿಕದ ಬಾಹ್ಯಾಕಾಶಯಾತ್ರಿಗಳು ಇದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಪ್ರತಿಯೊಂದರ ಮೇಲೂ ಅಮೆರಿಕ ಸೇರಿದಂತೆ ಹಲವಾರು ದೇಶಗಳು ದಿಗ್ಬಂಧನ ಹಾಕಿವೆ. ಇದರಿಂದ ಸಿಟ್ಟಿಗೆದ್ದಿರುವ ರಷ್ಯಾ, ಒಂದು ದಿನ ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತನ್ನ ಭಾಗವನ್ನು ನಾಶ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಎಲ್ಲಿ ಬೀಳಬಹುದು?
ಅಮೆರಿಕ, ಯೂರೋಪ್, ಚೀನ, ಭಾರತ ಅಥವಾ ಸಮುದ್ರದ ಮೇಲೆ ಈ ಬಾಹ್ಯಾಕಾಶ ನೌಕೆ ಬೀಳಬಹುದು ಎಂದು ರೋಸ್ಕೋಸ್ಮಾಸ್ ನಿರ್ದೇಶಕ ಜನರಲ್ ಡಿಮಿಟ್ರಿ ರೋಗೋಜಿನ್ ಹೇಳಿದ್ದಾರೆ. ಆದರೆ, ನಾಸಾ ಇದನ್ನು ಅಲ್ಲಗೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.